ಜೆರಾಕ್ಸ್ ಹೋಲ್ಡಿಂಗ್ಸ್ ಕಾರ್ಪೊರೇಶನ್ ಸಿಇಒ ಜಾನ್ ವಿಸೆಂಟಿನ್ ನಿಧನ

ವಿಶ್ವ ವಿಖ್ಯಾತ ಮುದ್ರಕ ತಯಾರಕ ಜೆರಾಕ್ಸ್ ಹೋಲ್ಡಿಂಗ್ಸ್ ಕಾರ್ಪೊರೇಶನ್‌ನ ಗೌರವಾನ್ವಿತ ನಾಯಕ, ಉಪಾಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಾನ್ ವಿಸೆಂಟಿನ್ 59ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಜೆರಾಕ್ಸ್ ವಿಸೆಂಟಿನ್ ಅವರ ಸಾವನ್ನು ಅನಿರೀಕ್ಷಿತ ಎಂದು ಕರೆದಿರುವ ಜೆರಾಕ್ಸ್ ಸಂಸ್ಥೆ, 2018 ರಿಂದ ಜೆರಾಕ್ಸ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಸ್ಟೀವ್ ಬ್ಯಾಂಡ್ರೊವ್ಜಾಕ್ ಅವರು ಮಧ್ಯಂತರ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ.

ವಿಸೆಂಟಿನ್ ಅವರು ಪತ್ನಿ ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ. ಮೇ 2018 ರಲ್ಲಿ ಜೆರಾಕ್ಸ್‌ಗೆ ಸೇರಿದಾಗಿನಿಂದ, ಜಾನ್ ವಿಸೆಂಟಿನ್ ಕಂಪನಿಯನ್ನು ಸವಾಲುಗಳ ನಡುವೆಯೇ ಮುನ್ನಡೆಸಿದ್ದಾರೆ.

Xerox Holdings Corporation Vice Chairman and CEO John Visentin Dies At 59

ಉದ್ಯಮದಾದ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ, ಅವರ ಕಾರ್ಯತಂತ್ರವು ಕಚೇರಿ ಮತ್ತು ಉತ್ಪಾದನಾ ಮುದ್ರಣ ತಂತ್ರಜ್ಞಾನದಲ್ಲಿ ಜೆರಾಕ್ಸ್‌ನ ನಾಯಕತ್ವದ ಸ್ಥಾನದಲ್ಲಿ ನಿಲ್ಲಿಸಿದೆ. ನವೀನ ತಂತ್ರಜ್ಞಾನ, ಆಲೋಚನೆಗಳೊಂದಿಗೆ ಜಾಗತಿಕ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡಲು ಕಂಪನಿಯನ್ನು ವಿಸ್ತರಿಸಿತು.

ನಿರ್ದೇಶಕರ ಮಂಡಳಿಯ ಅಧ್ಯಕ್ಷ ಜೇಮ್ಸ್ ನೆಲ್ಸನ್ ಸಂತಾಪ

ಜೆರಾಕ್ಸ್‌ನ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಜೇಮ್ಸ್ ನೆಲ್ಸನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, "ಮೇ 2018 ರಲ್ಲಿ ಕಂಪನಿಗೆ ಸೇರಿದಾಗಿನಿಂದ, ಜಾನ್ ಜೆರಾಕ್ಸ್ ಅನ್ನು ಅಭಿವೃದ್ಧಿಯತ್ತ ಮುನ್ನಡೆಸಿದ್ದಾರೆ. ಆಧುನಿಕತೆ ಚಾಂಪಿಯನ್ ಆಗಿ, ಅವರು ಮುದ್ರಣ ಮತ್ತು ಸೇವಾ ಪೂರೈಕೆದಾರರಾಗಿ ಜೆರಾಕ್ಸ್ ಕಂಪನಿಯ ಮೌಲ್ಯವನ್ನು ಹೆಚ್ಚಿಸಿದರು. ಡಿಜಿಟಲ್ ಮತ್ತು ಐಟಿ ಸೇವೆಗಳು, ಹಣಕಾಸು ಸೇವೆಗಳು ಮತ್ತು ತಂತ್ರಜ್ಞಾನಗಳಿಗೆ ಕಂಪನಿಯ ಪರಿಣತಿ ಮತ್ತು ಕೊಡುಗೆಗಳನ್ನು ನೀಡಿದ್ದಾರೆ. ವ್ಯಾಪಾರ ಮತ್ತು ಅದರ ಗ್ರಾಹಕರು, ಪಾಲುದಾರರು ಮತ್ತು ಉದ್ಯೋಗಿಗಳು ಜಾನ್‌ರವರ ಚಾಲನೆ, ಶಕ್ತಿ ಮತ್ತು ಬದ್ಧತೆಯನ್ನು ಕಳೆದುಕೊಂಡಿದ್ದಾರೆ" ಎಂದು ಹೇಳಿದ್ದಾರೆ.

ಸ್ಟೀವ್ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿರ್ದೇಶಕರ ಮಂಡಳಿ ಮತ್ತು ಸಂಪೂರ್ಣ ನಿರ್ವಹಣಾ ತಂಡದ ಸಕ್ರಿಯ ಮತ್ತು ಸಂಪೂರ್ಣ ಬೆಂಬಲ ಮತ್ತು ವಿಶ್ವಾಸ ಗಳಿಸಿದ್ದರು ಎಂದು ಜೇಮ್ಸ್ ನೆಲ್ಸನ್ ಹೇಳಿದರು.

Xerox Holdings Corporation Vice Chairman and CEO John Visentin Dies At 59

ಸ್ಟೀವ್ ಬ್ಯಾಂಡ್ರೊವ್ಜಾಕ್ ಮಧ್ಯಂತರ ಸಿಇಒ

ಸ್ಟೀವ್ ಬ್ಯಾಂಡ್ರೊವ್ಜಾಕ್ ಅವರು ಮಧ್ಯಂತರ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸ್ಟೀವ್ ಪ್ರಸ್ತುತ ಜೆರಾಕ್ಸ್‌ಗಾಗಿ ಜಾಗತಿಕ ಕಾರ್ಯಾಚರಣೆಯ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಾರೆ ಮತ್ತು ಕಾರ್ಯಗತಗೊಳಿಸುತ್ತಾರೆ. ವ್ಯಾಪಾರ ತಂತ್ರ, ಉತ್ಪನ್ನ ಮತ್ತು ಸೇವಾ ವಿತರಣೆ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಕಂಪನಿಯ ವ್ಯಾಪಾರ ಬೆಂಬಲ ಕಾರ್ಯಗಳು, ಹಾಗೆಯೇ ಕಂಪನಿಯ ಹೊಸದಾಗಿ ರೂಪುಗೊಂಡ ಸಾಫ್ಟ್‌ವೇರ್ ಮತ್ತು ಇನ್ನೋವೇಶನ್ ವ್ಯವಹಾರಗಳ ಕುರಿತು ಸ್ಟೀವ್ ಬ್ಯಾಂಡ್ರೊವ್ಜಾಕ್ ಕೆಲಸ ಮಾಡುತ್ತಿದ್ದಾರೆ.

"ನಾವೆಲ್ಲರೂ ಈ ದುರಂತ ಸುದ್ದಿಯಿಂದ ತುಂಬಾ ದುಃಖಿತರಾಗಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದ ಜೊತೆ ನಿಲ್ಲುತ್ತೇವೆ" ಎಂದು ಬ್ಯಾಂಡ್ರೊವ್ಜಾಕ್ ಹೇಳಿದರು. "ಜಾನ್ ಅವರ ದೃಷ್ಟಿಕೋನ ಸ್ಪಷ್ಟವಾಗಿದೆ, ಮತ್ತು ಜೆರಾಕ್ಸ್ ತಂಡವು ಅವರ ಆಶಯವನ್ನು ಮುಂದುವರಿಸುತ್ತದೆ. ನಮ್ಮ ಷೇರುದಾರರು, ಗ್ರಾಹಕರು ಮತ್ತು ಪಾಲುದಾರರಿಗೆ ನಮ್ಮ ಬದ್ದತೆಗಳನ್ನು ತಲುಪಿಸಲು ಮಾತ್ರವಲ್ಲದೆ, ಜಾನ್ ಹಾಕಿಕೊಟ್ಟ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ" ಎಂದು ಹೇಳಿದ್ದಾರೆ.

Recommended Video

      Team India ನಾಯಕನಾಗಿದ್ದಕ್ಕೆ ಜಸ್ಪ್ರೀತ್ ಬುಮ್ರಾ ಫುಲ್ ಖುಷ್ | *Cricket | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+