ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ವಿಷ್ಯದಲ್ಲೂ ಮಲ್ಯ ಇಸ್ ಕಿಂಗ್

By Mahesh
|
Google Oneindia Kannada News

ಬೆಂಗಳೂರು, ಡಿ.5: ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಅತಿ ಹೆಚ್ಚು ಸಾಲ ಪಡೆದಿರುವ ಟಾಪ್ 50 ಕಂಪನಿಗಳ ಪಟ್ಟಿ ಹೊರ ಬಿದ್ದಿದೆ. ಅತಿ ಹೆಚ್ಚು ಸಾಲಗಾರ ಎಂಬ ಹಣೆಪಟ್ಟಿ ಯುಬಿ ಸಮೂಹ, ಕಿಂಗ್ ಫಿಷರ್ ಸಂಸ್ಥೆಯ ವಿಜಯ್ ಮಲ್ಯ ಅವರಿಗೆ ದಕ್ಕಿದೆ.

ಸಾರ್ವಜನಿಕ ವಲಯ ಬ್ಯಾಂಕ್ ಗಳಿಂದ ಹೆಚ್ಚು ಸಾಲ ಪಡೆದಿರುವ ಮೊದಲ 50 ಕಂಪನಿಗಳ ಪೈಕಿ ಕಿಂಗ್ ಫಿಷರ್ ಸಂಸ್ಥೆ ಹೆಚ್ಚು ಬಾಕಿ ಉಳಿಸಿಕೊಂಡಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಹೇಳಿದೆ.

With Rs 2,673 cr dues, Kingfisher is top defaulter: Bank staff union

ವಿಜಯ್ ಮಲ್ಯ ಅವರು ಸುಮಾರು 2,673 ಕೋಟಿ ರು ಸಾಲ ಹೊಂದಿದ್ದಾರೆ ಎಂದು ಸಂಘಟನೆ ಹೇಳಿದೆ. ಡಿ.5ರಂದು ಅಖಿಲ ಭಾರತ ಹಕ್ಕು ದಿನಾಚರಣೆ ಹಮ್ಮಿಕೊಂಡಿರುವ ಟ್ರೇಡ್ ಯೂನಿಯನ್ ಗಳು ಸಾರ್ವಜನಿಕರ ಹಣವನ್ನು ಕಾರ್ಪೊರೇಟ್ ಕಂಪನಿಗಳು ಕೊಳ್ಳೆ ಹೊಡೆಯುವುದರ ವಿರುದ್ಧ ತಿರುಗಿ ಬಿದ್ದಿವೆ. ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಂದ ಬಾಕಿ ಮೊತ್ತವನ್ನು ಹಿಂಪಡೆಯುವ ಪ್ರಕ್ರಿಯೆ ಇನ್ನಷ್ಟು ಬಲಗೊಳ್ಳಬೇಕು. ಸಾವಿರಾರು ಕೋಟಿ ಮೊತ್ತದ ಸಾಲ ಬೆಳೆಯಲು ಬಿಡಬಾರದು ಟ್ರೇಡ್ ಯೂನಿಯನ್ ಸದಸ್ಯರು ಹೇಳಿದ್ದಾರೆ.

ಯೂನಿಯನ್ ನೀಡಿರುವ ಮಾಹಿತಿ ಪ್ರಕಾರ, ಕಿಂಗ್ ಫಿಷರ್ ಸಂಸ್ಥೆ ನಂತರದ ಸ್ಥಾನದಲ್ಲಿ ಡೈಮಂಡ್ ಹಾಗೂ ಜ್ಯುವೆಲ್ಲರಿ ಕಂಪನಿಯೊಂದು 2,660 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಎಲೆಕ್ಟ್ರೊಥರ್ಮ್ ಇಂಡಿಯಾ. ಲಿ 2,211 ಕೋಟಿ ರು ಕಟ್ಟ ಬೇಕಿದೆ.

ಉಳಿದಂತೆ, ಜೂಮ್ ಡೆವೆಲಪರ್ಸ್ (1,810 ಕೋಟಿ ರು) ಸ್ಟರ್ಲಿಂಗ್ ಬಯೋಟೆಕ್ (1,732 ಕೋಟಿ ರು), ಎಸ್ ಕುಮಾರ್ (1,692 ಕೋಟಿ ರು) , ಸೂರ್ಯ ವಿನಾಯಕ್ ಇಂಡಸ್ಟ್ರೀಸ್ (1,446 ಕೋಟಿ ರು) , ಕಾರ್ಪೊರೇಟ್ ಇಸ್ಪಾಟ್ ಅಲಾಯ್ಸ್ (1,360 ಕೋಟಿ ರು), ಫಾರೇವರ್ ಪ್ರಿಸಿಷಸ್ ಜ್ಯುವೆಲ್ಲರಿ ಹಾಗೂ ಡೈಮಂಡ್ಸ್ (1,254 ಕೋಟಿ ರು) , ಸ್ಟರ್ಲಿಂಗ್ ಆಯಿಲ್ ರಿಸೋರ್ಸಸ್ (1,197 ಕೋಟಿ ರು)

ಯೂನಿಯನ್ ನೀಡಿರುವ ಪ್ರಕಟಣೆಯಂತೆ ಸಾರ್ವಜನಿಕ ಬ್ಯಾಂಕ್ ಗಳಿಗೆ ಬರಬೇಕಿರುವ ಬಾಕಿ ಮೊತ್ತ 1,64,000 ಕೋಟಿ ರು ದಾಟುತ್ತಿದೆ. ಬ್ಯಾಂಕಿಂಗ್ ನಲ್ಲಿ ಸಾಕಷ್ಟು ಸುಧಾರಣೆ, ಉದಾರೀಕರಣ, ನಿಯಮಗಳ ಬದಲಾವಣೆಗಳ ನಡುವೆಯೂ ಬ್ಯಾಂಕಿನಿಂದ ಸಾಲ ಪಡೆದು ಹಿಂತಿರುಗಿಸದ ಕಾರ್ಪೊರೆಟ್ ಸಂಸ್ಥೆಗಳ ಸಂಖ್ಯೆ ಬೆಳೆಯುತ್ತಲೆ ಇದೆ ಎಂದು ಹೇಳಲಾಗಿದೆ.

English summary
Kingfisher Airlines tops a list of 50 top loan defaulters drawn up by public sector banks. The list, released by the All-India Bank Employees Association, says Vijay Mallya’s now-defunct airline owed Rs 2,673 crore to public sector banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X