ವಿಪ್ರೋದಿಂದ 11000 ಕೋಟಿ ರು ಬೈಬ್ಯಾಕ್ ಘೋಷಣೆ
ಬೆಂಗಳೂರು, ಜುಲೈ 20: ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಗುರುವಾರ ಪ್ರಕಟಿಸಿದೆ.
ಮಾರುಕಟ್ಟೆ ತಜ್ಞರ ನಿರೀಕ್ಷೆಗೂ ಮೀರಿದ ಆದಾಯವನ್ನು ವಿಪ್ರೋ ಗಳಿಸಿದೆ. ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ನಿವ್ವಳ ಲಾಭ 2,082 ಕೋಟಿ ರು ಬಂದಿದೆ.

ಸಂಸ್ಥೆಯ ಬೋರ್ಡ್ ಸದಸ್ಯರು 343.75 ಮಿಲಿಯನ್ ಷೇರುಗಳು 320 ಪ್ರತಿ ಷೇರಿನ ದರದಲ್ಲಿ ಅಂದರೆ ಸುಮಾರು 11000 ಮೌಲ್ಯದ ಷೇರುಗಳ ಬೈ ಬ್ಯಾಕ್ ಗೆ ಸಮ್ಮತಿಸಿದ್ದಾರೆ.
* ತ್ರೈಮಾಸಿಕದ ನಿವ್ವಳ ಆದಾಯ ಶೇ 1.2ರಷ್ಟು ಏರಿಕೆ ಕಂಡು(ವರ್ಷದಿಂದ ವರ್ಷಕ್ಕೆ) 2,082 ಕೋಟಿ ರು ಬಂದಿದೆ.
* ತ್ರೈಮಾಸಿಕದಲ್ಲಿ ಐಟಿ ಸೇವೆ ಮಾರ್ಜಿನ್ ಶೇ 16.8ರಷ್ಟಿತ್ತು.
* ಐಟಿ ವಿಭಾಗದ ಲಾಭ ವರ್ಷದಿಂದ ವರ್ಷಕ್ಕೆ ಆಧಾರದಲ್ಲಿ ಶೇ 5.8ರಷ್ಟು ಇಳಿಕೆ ಕಂಡು 2,190 ಕೋಟಿ ರು ಬಂದಿದೆ.
* ವಾರ್ಷಿಕವಾಗಿ ಆದಾಯ ಶೇ 0.2 ರಷ್ಟು ಏರಿಕೆ ಕಂಡು 13,630 ಕೋಟಿ ರು ಗಳಿಸಿದೆ.
ವಿಪ್ರೋ ತ್ರೈಮಾಸಿಕ ವರದಿ ಪೂರ್ಣ ಪಾಠ ಡೌನ್ ಲೋಡ್ ಮಾಡಿಕೊಳ್ಳಿ:
ದಿನದ ಅಂತ್ಯಕ್ಕೆ ಷೇರುಪೇಟೆಯಲ್ಲಿ ವಿಪ್ರೋ ಷೇರುಗಳು ಶೇ 0.83 ರಷ್ಟು(2.25 ರು) ಇಳಿಕೆ ಕಂಡಿತ್ತು. ಆದರೆ, ಬಿಎಸ್ ಇನಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 274.25 ರು ತನಕ ಏರಿಕೆ ಕಂಡಿತ್ತು.
Download











Click it and Unblock the Notifications