ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ತಿಂಗಳಲ್ಲಿ 2 ಲಕ್ಷ ಗ್ರಾಹಕರನ್ನು ಕಳೆದುಕೊಂಡ Netflix; ಏನು ಕಾರಣ?

|
Google Oneindia Kannada News

ಕ್ಯಾಲಿಫೋರ್ನಿಯಾ, ಏ. 20: ವಿಶ್ವದ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ಎನಿಸಿರುವ ನೆಟ್‌ಫ್ಲಿಕ್ಸ್ ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ನೆಟ್‌ಫ್ಲಿಕ್ಸ್ 2 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಕಳೆದೊಂದು ದಶಕದಲ್ಲಿ ಈ ಕಂಪನಿ ಇಷ್ಟೊಂದು ಸಬ್‌ಸ್ಕ್ರೈಬರ್‌ಗಳನ್ನು ಕಳೆದುಕೊಂಡಿದ್ದು ಇದೇ ಮೊದಲು. ಮುಂಬರುವ ದಿನಗಳಲ್ಲಿ ಇನ್ನಷ್ಟು ಗ್ರಾಹಕರು ನೆಟ್‌ಫ್ಲಿಕ್ಸ್ ತೊರೆಯುವ ಸಾಧ್ಯತೆ ಇದೆ.

ಈ ಬೆಳವಣಿಗೆ ಆಗುತ್ತಲೇ ಷೇರುಪೇಟೆಯಲ್ಲಿ ನೆಟ್‌ಫ್ಲಿಕ್ಸ್ ಮೇಲೆ ಹಣ ಹಾಕಿದ ಜನರು ಬೆಚ್ಚಿಬಿದ್ದಿದ್ದಾರೆ. ಪರಿಣಾಮವಾಗಿ ಅದರ ಷೇರು ಮೌಲ್ಯ ಶೇ. 26ರಷ್ಟು ಕುಸಿದಿದೆ. ಇದರಿಂದ ನೆಟ್‌ಫ್ಲಿಕ್ಸ್ 40 ಬಿಲಿಯನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂಪಾಯಿ) ಹಣ ಕಳೆದುಕೊಂಡಿದೆ.

 ದೇಶದಲ್ಲಿ ಸ್ಟಾರ್ಟ್​ಅಪ್ ಕಂಪನಿಗಳ ಸ್ಥಾಪನೆ ಹೆಚ್ಚಳ; ಟಾಪ್​ 4 ರಾಜ್ಯಗಳು ಯಾವುವು? ದೇಶದಲ್ಲಿ ಸ್ಟಾರ್ಟ್​ಅಪ್ ಕಂಪನಿಗಳ ಸ್ಥಾಪನೆ ಹೆಚ್ಚಳ; ಟಾಪ್​ 4 ರಾಜ್ಯಗಳು ಯಾವುವು?

ನೆಟ್‌ಫ್ಲಿಕ್ಸ್ ಈ ಮುಂಚೆ ಜನವರಿಯಿಂದ ಮಾರ್ಚ್‌ವರೆಗಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 25 ಲಕ್ಷ ಗ್ರಾಹಕರನ್ನು ಸೆಳೆಯುವ ಗುರಿ ಹೊಂದಿರುವುದಾಗಿ ಹೇಳಿತ್ತು. ಅಷ್ಟು ಹೊಸ ಗ್ರಾಹಕರು ಸೇರ್ಪಡೆಯಾಗುವುದಿರಲಿ, ಎರಡು ಲಕ್ಷ ಗ್ರಾಹಕರು ಕೈತಪ್ಪಿಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 20 ಲಕ್ಷ ಸಬ್‌ಸ್ಕ್ರೈಬರ್‌ಗಳು ಹೊರಹೋಗುವ ಅಪಾಯ ಇದೆ ಎಂದು ನೆಟ್‌ಫ್ಲಿಕ್ಸ್ ಸಂಸ್ಥೆಯೇ ಅಂದಾಜು ಮಾಡಿದೆ.

ಏನು ಕಾರಣಗಳು:

ಏನು ಕಾರಣಗಳು:

ರಷ್ಯಾದಲ್ಲಿ ನೆಟ್‌ಫ್ಲಿಕ್ಸ್ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ 7 ಲಕ್ಷ ಗ್ರಾಹಕರು ಕೈತಪ್ಪಿದ್ದಾರೆ. ಇದು ರಷ್ಯಾ-ಉಕ್ರೇನ್ ಯುದ್ಧದ ಎಫೆಕ್ಟ್ ಎಂದು ಈ ಓಟಿಟಿ ಕಂಪನಿ ಹೇಳಿಕೊಂಡಿದೆ. ವಿಶ್ವಾದ್ಯಂತ ಆರ್ಥಿಕ ಹಿಂಜರಿತ, ಹಣದುಬ್ಬರ ಏರಿಕೆ, ಕೋವಿಡ್ ಪರಿಸ್ಥಿತಿಯ ದುಷ್ಪರಿಣಾಮ ಇವೂ ಕೂಡ ನೆಟ್‌ಫ್ಲಿಕ್ಸ್ ಪ್ರಗತಿಗೆ ಹಿನ್ನಡೆಯಾಗಿವೆ ಎಂದು ಕಂಪನಿ ತಿಳಿಸಿದೆ.

ಪಾಸ್‌ವರ್ಡ್ ಹಂಚಿಕೆಯೂ ಕಾರಣ:

ಪಾಸ್‌ವರ್ಡ್ ಹಂಚಿಕೆಯೂ ಕಾರಣ:

ನೆಟ್‌ಫ್ಲಿಕ್ಸ್ ಸಬ್‌ಸ್ಕ್ರೈಬ್ ಮಾಡಿಕೊಳ್ಳುವವರು ತಮ್ಮ ಪಾಸ್‌ವರ್ಡ್‌ ಅನ್ನು ಸ್ನೇಹಿತರೋ, ಕುಟುಂಬದ ಸದಸ್ಯರೊಂದಿಗೋ ಹಂಚಿಕೊಳ್ಳುವುದುಂಟು. ಅಧಿಕೃತವಾಗಿ 22.2 ಕೋಟಿ ಮಂದಿ ನೆಟ್‌ಫ್ಲಿಕ್ಸ್‌ಗೆ ಸಬ್‌ಸ್ಕ್ರೈಬ್ ಆಗಿದ್ದಾರೆ. ಆದರೆ, ಇವರ ಲಾಗಿನ್ ಮೂಲಕ ಇನ್ನೂ 10 ಕೋಟಿ ಮಂದಿ ಉಚಿತವಾಗಿ ನೆಟ್‌ಫ್ಲಿಕ್ಸ್ ನೋಡುತ್ತಿದ್ದಾರೆ. ಅಮೆರಿಕ ಮತ್ತು ಕೆನಡಾ ಪ್ರದೇಶದಲ್ಲೇ ಇಂಥ 3ಕೋಟಿ ನೆಟ್‌ಫ್ಲಿಕ್ಸ್ ವೀಕ್ಷಕರಿದ್ದಾರೆ.

ಸ್ಪರ್ಧೆ ಹೆಚ್ಚಳ:

ಸ್ಪರ್ಧೆ ಹೆಚ್ಚಳ:

ಅಮೇಜಾನ್, ಹಾಟ್‌ಸ್ಟಾರ್ ಮತ್ತಿತರ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಯೂಟ್ಯೂಬ್, ಹುಲು ಮೊದಲಾದ ವಿಡಿಯೋ ಸ್ಟ್ರೀಮಿಂಗ್‌ಗಳಿಂದ ಸ್ಪರ್ಧೆ ಹೆಚ್ಚಾಗುತ್ತಿದೆ. ಸಾಂಪ್ರದಾಯಿಕ ಟಿವಿ ವಾಹಿನಿಗಳೂ ಈಗ ವಿಡಿಯೋ ಸ್ಟ್ರೀಮಿಂಗ್ ಕ್ಷೇತ್ರಕ್ಕೆ ಅಡಿ ಇಟ್ಟಿವೆ. ಇದೂ ಕೂಡ ನೆಟ್‌ಫ್ಲಿಕ್ಸ್‌ನ ಗ್ರಾಹಕರ ಸಂಖ್ಯೆ ಇಳಿಯಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಪಾಸ್‌ವರ್ಡ್ ಹಂಚಿಕೆಗೂ ಹಣ ವಸೂಲಿ ಮಾಡಲು ಚಿಂತನೆ:

ಪಾಸ್‌ವರ್ಡ್ ಹಂಚಿಕೆಗೂ ಹಣ ವಸೂಲಿ ಮಾಡಲು ಚಿಂತನೆ:

ಅನಧಿಕೃತ ವೀಕ್ಷಕರ ಸಮಸ್ಯೆಗೆ ಕಡಿವಾಣ ಹಾಕಲು ನೆಟ್‌ಫ್ಲಿಕ್ಸ್ ಬೇರೊಂದು ಯೋಜನೆ ರೂಪಿಸಿದೆ. ನೆಟ್‌ಫ್ಲಿಕ್ಸ್‌ಗೆ ಸಬ್‌ಸ್ಕ್ರೈಬ್ ಅಗುವ ಜನರು ಬೇಕಂದರೆ ಒಂದಷ್ಟು ಹೆಚ್ಚುವರಿ ಹಣ ನೀಡಿದರೆ ತಮ್ಮ ಪಾಸ್‌ವರ್ಡ್ ಅನ್ನು ಮತ್ತೊಬ್ಬರಿಗೆ ಶೇರ್ ಮಾಡುವ ಅವಕಾಶ ಕೊಡುವ ಪ್ರಯೋಗವನ್ನು ಮಾಡಲಾಗುತ್ತಿದೆ. ಇದರಿಂದ ಆದಾಯ ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ ನೆಟ್‌ಫ್ಲಿಕ್ಸ್. ಈ ನಿಟ್ಟಿನಲ್ಲಿ ಪ್ರಯೋಗವಾಗುತ್ತಿದ್ದು ಮುಂದಿನ ವರ್ಷ ಎಲ್ಲೆಡೆ ಜಾರಿಯಾಗುವ ಸಾಧ್ಯತೆ ಇದೆ.

ಜಾಹೀರಾತಿಗೂ ಮಣೆ:

ಜಾಹೀರಾತಿಗೂ ಮಣೆ:

ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಜನರಿಗೆ ಇಷ್ಟವಾಗಿದ್ದು ಅದರ ಜಾಹೀರಾತು ರಹಿತ ವಿಡಿಯೋ ಸ್ಟ್ರೀಮಿಂಗ್. ನೆಟ್‌ಫ್ಲಿಕ್ಸ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ ಜಾಹೀರಾತಿನ ಕಿರಿಕಿರಿ ಇಲ್ಲ. ಈಗ ಲಾಭ ಗಣನೀಯವಾಗಿ ಕುಸಿದಿರುವುದರಿಂದ ವಿಡಿಯೋ ಕಂಟೆಂಟ್‌ನಲ್ಲಿ ಜಾಹೀರಾತಿಗೂ ಅವಕಾಶ ಕೊಡಲು ನೆಟ್‌ಫ್ಲಿಕ್ಸ್ ನಿರ್ಧರಿಸಿದೆ.

ಭಾರತದಲ್ಲಿ ಗ್ರಾಹಕರ ಹೆಚ್ಚಳ:

ಭಾರತದಲ್ಲಿ ಗ್ರಾಹಕರ ಹೆಚ್ಚಳ:

ನೆಟ್‌ಫ್ಲಿಕ್ಸ್ ಕಳೆದ ಮೂರು ತಿಂಗಳಲ್ಲಿ 2 ಲಕ್ಷ ಗ್ರಾಹಕರನ್ನ ಕಳೆದುಕೊಂಡಿದೆ. ಆದರೆ, ಭಾರತದಲ್ಲಿ ಅದರ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಏಷ್ಯಾದ ಇತರ ಕೆಲ ದೇಶಗಳಲ್ಲೂ ನೆಟ್‌ಫ್ಲಿಕ್ಸ್ ವ್ಯಾಪ್ತಿ ವಿಸ್ತರಿಸಿಕೊಂಡಿದೆ.

ಸಬ್‌ಸ್ಕ್ರಿಪ್ಷನ್ ಹಣ ಇನ್ನಷ್ಟು ಕಡಿಮೆ:

ಸಬ್‌ಸ್ಕ್ರಿಪ್ಷನ್ ಹಣ ಇನ್ನಷ್ಟು ಕಡಿಮೆ:

ಭಾರತದಲ್ಲಿ ತನ್ನ ಗ್ರಾಹಕರ ಸಂಖ್ಯೆ ಇನ್ನಷ್ಟು ಹೆಚ್ಚಿಸಿಕೊಳ್ಳಲು ನೆಟ್‌ಫ್ಲಿಕ್ಸ್ ತನ್ನ ಸಬ್‌ಸ್ಕ್ರಿಪ್ಷನ್ ದರವನ್ನು ಇನ್ನಷ್ಟು ತಗ್ಗಿಸಿದೆ. 199 ರೂ ನಿಂದ ಆರಂಭವಾಗುತ್ತಿದ್ದ ಅದರ ಸಬ್‌ಸ್ಕ್ರಿಪ್ಷನ್ ದರವನ್ನು ಈಗ 149ಕ್ಕೆ ಇಳಿಸಲಾಗಿದೆ. ಇದು ವರ್ಕೌಟ್ ಆದಂತಿದೆ.

(ಒನ್ಇಂಡಿಯಾ ಸುದ್ದಿ)

Recommended Video

RCB ಯ ಬೌಲಿಂಗ್ ಮತ್ತು ಬ್ಯಾಟಿಂಗ್ ದಾಳಿಗೆ ಲಕ್ನೋ ಧೂಳೀಪಟ | Oneindia Kannada

English summary
Popular OTT platform Netflix has reportedly lost 2 lakh subscribers in first quarter of 2022. It is in contrast with its aim of adding 25 lakh subscribers in that period. Here are few reasons for the downfall of Netflix.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X