ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸುದ್ದಿ: ಲೈಫ್‌ಬಾಯ್ ಮತ್ತು ಲಕ್ಸ್ ಸೇರಿ ಹಲವು ಸಾಬೂನುಗಳ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಎಫ್‌ಎಂಸಿಜಿ ಸಂಸ್ಥೆಗಳಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಮತ್ತು ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಜಿಸಿಪಿಎಲ್) ಕಂಪನಿಗಳಿಗೆ ಸಂಬಂಧಿಸಿದ ಸೋಪ್ ದರವನ್ನು ಶೇ.15ರಷ್ಟು ಕಡಿತಗೊಳಿಸಲಾಗಿದೆ.

ದೇಶದಲ್ಲಿ ತಾಳೆ ಎಣ್ಣೆ ಮತ್ತು ಇತರ ಕಚ್ಚಾ ಸಾಮಗ್ರಿಗಳ ಬೆಲೆಯು ಅಗ್ಗವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಾಬೂನು ಬ್ರಾಂಡ್‌ಗಳ ಬೆಲೆಯನ್ನು ಶೇಕಡಾ 15ರಷ್ಟು ಕಡಿತಗೊಳಿಸಿವೆ. ಹೀಗಾಗಿ HUL ತನ್ನ ಜನಪ್ರಿಯ ಸೋಪ್ ಬ್ರ್ಯಾಂಡ್‌ಗಳಾದ ಲೈಫ್‌ಬಾಯ್ ಮತ್ತು ಲಕ್ಸ್ ಸೋಪಿನ ಬೆಲೆಗಳನ್ನು ಪಶ್ಚಿಮ ಪ್ರದೇಶದಲ್ಲಿ ಶೇ.5 ರಿಂದ ಶೇ.11 ಪ್ರತಿಶತದಷ್ಟು ಕಡಿಮೆ ಮಾಡಿದೆ. ಸೋಪ್ ಬ್ರ್ಯಾಂಡ್ ಗೋದ್ರೇಜ್ ನಂ 1 ಅನ್ನು ಹೊಂದಿರುವ ಗೋದ್ರೇಜ್ ಗ್ರೂಪ್ ಆರ್ಮ್ ಜಿಸಿಪಿಎಲ್ ಸಹ ಸಾಬೂನುಗಳ ಬೆಲೆಯನ್ನು ಶೇ.13 ರಿಂದ ಶೇ.15 ರಷ್ಟು ಕಡಿತಗೊಳಿಸಿದೆ.

ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?

ಹಣದುಬ್ಬರದ ಕಾರಣಕ್ಕೆ ಒಟ್ಟಾರೆ ಬೇಡಿಕೆಯು ಕಡಿಮೆಯಾಗುತ್ತಿರುವುದರ ಮಧ್ಯೆ ಬೆಲೆಗಳಲ್ಲಿನ ಕಡಿತವು ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಬೆಳವಣಿಗೆಯಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ತಾಳೆ ಎಣ್ಣೆ ಮತ್ತು ಇತರ ಕಚ್ಚಾ ವಸ್ತುಗಳ ಜಾಗತಿಕ ಬೆಲೆಯಲ್ಲಿ ಇಳಿಕೆಯಾಗಿರುವುದು ಬೆಲೆ ಇಳಿಕೆಗೆ ಒಂದು ಕಾರಣ ಎಂದು ಹೇಳಿದ್ದಾರೆ.

 Why HUL and Godrej company cut soap prices by up to 15 percent

ಬೆಲೆ ಕಡಿತದ ಬಗ್ಗೆ ಮಾಹಿತಿ:

"ಸರಕು ಬೆಲೆಗಳು ಕಡಿಮೆಯಾಗುತ್ತಿರುವುದರಿಂದ ಗ್ರಾಹಕರಿಗೆ ಬೆಲೆ ಕಡಿತದ ಲಾಭವನ್ನು ವರ್ಗಾಯಿಸುವ FMCG ಕಂಪನಿಗಳಲ್ಲಿ GCPL ಒಂದಾಗಿದೆ. ನಿರ್ದಿಷ್ಟವಾಗಿ ಸಾಬೂನುಗಳಿಗೆ GCPL ಶೇ.13 ರಿಂದ 15ರಷ್ಟು ಬೆಲೆಗಳನ್ನು ಕಡಿಮೆ ಮಾಡಿದೆ. ನಾವು ಗೋದ್ರೇಜ್ ನಂ.1 ಸೋಪಿನ ಬಂಡಲ್ ಪ್ಯಾಕ್ (ತಲಾ 100 ಗ್ರಾಂನ ಐದು ಘಟಕಗಳು) ಬೆಲೆಯನ್ನು 140 ರಿಂದ 120ಕ್ಕೆ ಇಳಿಸಿದ್ದೇವೆ" ಎಂದು ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ CFO ಸಮೀರ್ ಷಾ ಹೇಳಿದ್ದಾರೆ.

"ಲೈಫ್‌ಬಾಯ್ ಮತ್ತು ಲಕ್ಸ್‌ಗೆ ಸಂಬಂಧಿಸಿದ ಸಾಬೂನುಗಳ ಬೆಲೆಯು ಪಶ್ಚಿಮ ಪ್ರದೇಶದಲ್ಲಿ ಇಳಿಕೆಯಾಗಿದೆ ಇತರ ಪ್ರದೇಶಗಳಲ್ಲಿಯೂ ಇದೇ ರೀತಿಯ ಕಡಿತವನ್ನು ಮಾಡಲಾಗುತ್ತದೆ ಎಂದು ಎಚ್‌ಯುಎಲ್ ವಕ್ತಾರರು ಹೇಳಿದರು. ಆದರೆ ಎಷ್ಟು ಪ್ರಮಾಣದಲ್ಲಿ ಬೆಲೆ ಕಡಿತಗೊಳಿಸಲಾಗುವುದು ಎಂಬುದರ ಬಗ್ಗೆ ಅವರು ತಿಳಿಸಲಿಲ್ಲ.

ಬೇರೆ ಕಂಪನಿ ಸೋಪ್ ಬೆಲೆ ಕಡಿಮೆ ಆಗುವುದೇ?:

ಈ ಸೋಪ್ ಬ್ರಾಂಡ್‌ಗಳ ಬೆಲೆಗಳಲ್ಲಿ ಶೇಕಡಾ 5-11 ರಷ್ಟು ಕಡಿಮೆ ಮಾಡಲಾಗಿದೆ. ಆದರೆ ಅದೇ ರೀತಿಯಲ್ಲಿ ಸರ್ಫ್, ರಿನ್, ವೀಲ್ ಮತ್ತು ಡವ್‌ನಂತಹ ಇತರ ಬ್ರಾಂಡ್‌ಗಳ ಬೆಲೆಗಳಲ್ಲಿ ಬೆಲೆ ಕಡಿತವಾಗುತ್ತದೆಯೇ ಎಂಬ ವರದಿಗಳ ಬಗ್ಗೆ ವಕ್ತಾರರು ನಿರಾಕರಿಸಿದರು.

ಎಚ್‌ಯುಎಲ್‌ನ ಬೆಲೆ ಕಡಿತದ ಕುರಿತು ಪ್ರತಿಕ್ರಿಯಿಸಿದ ಎಡೆಲ್‌ವೀಸ್ ಫೈನಾನ್ಷಿಯಲ್ ಸರ್ವಿಸಸ್ ಎಕ್ಸಿಕ್ಯೂಟಿವ್ ಉಪಾಧ್ಯಕ್ಷ ಅಬ್ನೀಶ್ ರಾಯ್, ಕಚ್ಚಾ ವಸ್ತುಗಳ ಬೆಲೆಗಳು ಕುಸಿಯುತ್ತಿರುವ ಯುಗದಲ್ಲಿ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳಲು ಕಂಪನಿಯು ಪೂರ್ವಭಾವಿ ಹೆಜ್ಜೆಯಿಟ್ಟಿದೆ ಎಂದರು. "ಕಚ್ಚಾ ವಸ್ತುಗಳ ಬೆಲೆಗಳು ಕುಸಿದಾಗ ಪ್ರಾದೇಶಿಕ ಸಂಸ್ಥೆಗಳು ಒಂದು ಹೆಜ್ಜೆ ಹಿಂದೆ ಹೋಗುತ್ತವೆ. ಇದರಿಂದ H2FY23 ಮತ್ತು FY24 ರಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಡೆಟ್ ಸಂಸ್ಥೆಯ ಪರಿಮಾಣದ ಬೆಳವಣಿಗೆಯು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

"ಕಳೆದ ಒಂದು ವರ್ಷದಲ್ಲಿ, ಗ್ರಾಮೇಜ್ ಕಡಿತ ಮತ್ತು ಬೆಲೆ ಏರಿಕೆಯು HUL ಗೆ ಪರಿಮಾಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ. ಈಗ ಗ್ರಾಮೇಜ್ ಹೆಚ್ಚಳ ಅಥವಾ ಬೆಲೆ ಕಡಿತದೊಂದಿಗೆ ಹಿಮ್ಮುಖವಾಗುತ್ತಿದೆ" ಎಂದು ರಾಯ್ ಹೇಳಿದರು. 2022 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಚಿಲ್ಲರೆ ಹಣದುಬ್ಬರ ಮತ್ತು ನಿಧಾನಗತಿಯ ಸವಾಲುಗಳನ್ನು FMCG ಕಂಪನಿಗಳು ಎದುರಿಸುತ್ತಲೇ ಇದ್ದವು. ಈ ಕಂಪನಿಗಳು ಜನಪ್ರಿಯ ಪ್ರವೇಶ ಮಟ್ಟದ ಪ್ಯಾಕ್‌ಗಳು ಮತ್ತು ದೊಡ್ಡ ಪ್ಯಾಕ್‌ಗಳ ನಡುವೆ ಬೆಲೆಯಿರುವ ''ಬ್ರಿಡ್ಜ್ ಪ್ಯಾಕ್‌ಗಳ'' ಉತ್ಪಾದನೆಯನ್ನು ಹೆಚ್ಚಿಸಿವೆ.

English summary
HUL and Godrej company cut soap prices by up to 15 percent as raw material rates are came down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X