ಐಟಿ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಿಸಬೇಕು ಏಕೆ?

Posted By:
Subscribe to Oneindia Kannada

ಬೆಂಗಳೂರು, ಜುಲೈ 31: ಆದಾಯ ತೆರಿಗೆ ಪಾವತಿಗೆ ಜುಲೈ 31, 2017 ಕೊನೆ ದಿನಾಂಕವಾಗಿದ್ದು, ಐಟಿ ರಿಟರ್ನ್ಸ್ ಕೊನೆ ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆಯಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಘೋಷಿಸಿದೆ. ನಾನಾ ಕಾರಣಗಳಿಂದ ಅನೇಕ ಉದ್ಯೋಗಿಗಳು ನಿಗದಿತ ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಫೈಲ್ ಮಾಡುವಲ್ಲಿ ವಿಫಲರಾಗುತ್ತಾರೆ. ಪ್ರಸಕ್ತ ವರ್ಷ ವಿಳಂಬವಾಗಿ ಐಟಿ ರಿಟರ್ನ್ಸ್ ಸಲ್ಲಿಕೆಗೆ ಯಾವುದೇ ದಂಡ ವಿಧಿಸುತ್ತಿಲ್ಲ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?

ಆದರೆ, ವಿಳಂಬವಾಗಿ ಫೈಲ್ ಮಾಡುವುದರಿಂದ ಲಾಭವಂತೂ ಸಿಗುವುದಿಲ್ಲ. ಕೆಲ ವಿಭಾಗಗಳಿಂದ ಸಿಗಬಹುದಾದ ವಿನಾಯತಿ, ರೀ ಫಂಡ್ ಎಲ್ಲವೂ ಕೈ ತಪ್ಪುತ್ತದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ ಹೊಸ 'ದಂಡ' ನೀತಿ ಪ್ರಸಕ್ತ ವರ್ಷಕ್ಕೆ ಅನ್ವಯವಾಗುವುದಿಲ್ಲ. ನಿಗದಿತ ಅವಧಿಯೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಮೊದಲಿಗೆ 5,000 ಹಾಗೂ ನಂತರ 10,000 ರು ದಂಡ ವಿಧಿಸಲಾಗುತ್ತದೆ.

ಐಟಿ ರಿಟರ್ನ್ಸ್ ಸಲ್ಲಿಕೆಗೂ ಮುನ್ನ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಇದಕ್ಕೂ ಕೂಡಾ ಜುಲೈ 31 ಕೊನೆ ದಿನಾಂಕವಾಗಿದೆ.

ಆನ್ ಲೈನ್ ಮೂಲಕ ಆದಾಯ ತೆರಿಗೆ ಪಾವತಿ ಮಾಡುವವರು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ (https://incometaxindiaefiling.gov.in/) ನಲ್ಲಿ ನೋಂದಣಿ ಮಾಡಿಕೊಂಡು ಸುಲಭವಾಗಿ ಪಾವತಿ ಮಾಡಬಹುದು.

ಐಟಿ ರಿಟರ್ನ್ಸ್ ಫೈಲಿಂಗ್ ಕೊನೆ ದಿನಾಂಕ ವಿಸ್ತರಣೆಗೆ ಆಗ್ರಹಿಸಲು ಸಮರ್ಥವಾದ ನಾಲ್ಕು ಅಂಶಗಳು ಮುಂದಿವೆ...

ಬ್ಯಾಂಕಿನಿಂದ TDS ನೀಡಿದ್ದು ತಡವಾಗಿದೆ

ಬ್ಯಾಂಕಿನಿಂದ TDS ನೀಡಿದ್ದು ತಡವಾಗಿದೆ

ಬ್ಯಾಂಕಿನಿಂದ ನೀಡುವ ಟಿಡಿಎಸ್ ಡೆಡ್ ಲೈನ್ ಕುರಿತಂತೆ ಸಿಬಿಡಿಟಿ 2016ರಲ್ಲಿ ನಿಯಮವನ್ನು ಬದಲಾಯಿಸಿದೆ. ತೆರಿಗೆದಾರರಿಗೆ ಫಾರ್ಮ್ 16 ಎ ನೀಡಲು ಟಿಡಿಎಸ್ ಅಗತ್ಯವಾಗಿದೆ.
ನಿಯಮ ಬದಲಾಗಿರುವುದರಿಂದ ಮೇ 15ರ ಬದಲಿಗೆ ಮೇ 30ರ ವೇಳೆಗೆ ಟಿಡಿಎಸ್ ರಿಟರ್ನ್ಸ್ ತಲುಪಿದೆ. ಇದರಿಂದಾಗಿ ಬ್ಯಾಂಕುಗಳು 2016-17ರ ಸಾಲಿನ ಫಾರ್ಮ್ 16ಎ ನೀಡುವುದು ಜೂನ್ 15ರ ತನಕ ಜಾರಿಯಲ್ಲಿತ್ತು. ಇದನ್ನು ಪಡೆದ ತೆರಿಗೆದಾರರು ರಿಟರ್ನ್ಸ್ ಫೈಲ್ ಮಾಡಲು ತಡವಾಗಿದೆ.

ಟಿಡಿಎಸ್ ಸರ್ಟಿಫಿಕೆಟ್ /ಫಾರ್ಮ್ 16

ಟಿಡಿಎಸ್ ಸರ್ಟಿಫಿಕೆಟ್ /ಫಾರ್ಮ್ 16

ಉದ್ಯೋಗದಾತರು ಟಿಡಿಎಸ್ ಸರ್ಟಿಫಿಕೆಟ್ /ಫಾರ್ಮ್ 16ಗಳನ್ನು ತನ್ನ ಉದ್ಯೋಗಿಗಳಿಗೆ ನೀಡುವುದು ತಡವಾಗಿದೆ. ಕೊನೆ ದಿನಾಂಕ ಮೇ 31 ವಿಸ್ತರಣೆಗೊಂಡಿತ್ತು. 2016-17ರ ಟಿಡಿಎಸ್ ಸರ್ಟಿಫಿಕೇಟ್ ನೀಡಿಕೆ ದಿನಾಂಕವನ್ನು ಜೂನ್ 15ಕ್ಕೆ ವಿಸ್ತರಿಸಲಾಯಿತು. ಹೀಗಾಗಿ ಉದ್ಯೋಗಿಗಳಿಗೆ ಫಾರ್ಮ್ 16 ಸಿಗುವುದು ತಡವಾಯಿತು.

ಬ್ಯಾಂಕಿಂಗ್ ವ್ಯವಹಾರಗಳು

ಬ್ಯಾಂಕಿಂಗ್ ವ್ಯವಹಾರಗಳು

ಜುಲೈ 01, 2017ರಿಂದ ಐಟಿ ರಿಟರ್ನ್ಸ್ ಮಾಡಲು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಜೋಡಣೆ ಕಡ್ಡಾಯಗೊಳಿಸಲಾಯಿತು. ಇದರ ಕೊನೆ ದಿನಾಂಕ ಜುಲೈ 31, 2017. ಸರಿ ಸುಮಾರು 6.09 ಕೋಟಿ ಮಂದಿಯ ಪೈಕಿ 2.67 ಕೋಟಿ ಮಂದಿ ಮಾತ್ರ ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಿದ್ದಾರೆ. ಹೆಸರು ಹಾಗೂ ಹುಟ್ಟಿದ ದಿನಾಂಕ ವ್ಯತ್ಯಾಸ ಸಮಸ್ಯೆ ಇನ್ನೂ ಕಾಡುತ್ತಿದೆ. ಆಧಾರ್ ನಲ್ಲಿ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಕನಿಷ್ಟ 10 ದಿನಗಳು ಬೇಕಾಗುತ್ತದೆ. ಹೀಗಾಗಿ ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆಯಾದರೆ ಒಳ್ಳೆಯದು.

ITR Filing : No Extension In Deadline For IT Returns Filing says, IT Department | Oneindia Kannada
ಸರಕು ಮತ್ತು ಸೇವಾ ತೆರಿಗೆ

ಸರಕು ಮತ್ತು ಸೇವಾ ತೆರಿಗೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡಿದ್ದರಿಂದ ಚಾರ್ಟೆಡ್ ಅಕೌಂಟೆಟ್ ಗಳು ಅದರಲ್ಲೇ ಹೆಚ್ಚು ನಿರತರಾಗಿದ್ದಾರೆ. ಪರೋಕ್ಷ ತೆರಿಗೆ ಬಗ್ಗೆ ಹೆಚ್ಚು ಗಮನಹರಿಸಿರುವ ಸಿಎ ಗಳು ಜುಲೈ ತಿಂಗಳಿನಲ್ಲಿ ನೇರ ತೆರಿಗೆ ಬಗ್ಗೆ ತಮ್ಮ ಗ್ರಾಹಕರಿಗೆ(ಉದ್ಯೋಗಿಗಳು) ಹೆಚ್ಚಿನ ಸಲಹೆ, ನೆರವು ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ದಿನಾಂಕ ವಿಸ್ತರಣೆಗೆ ಕೋರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many people have still not filed their income tax returns due to various reasons. There are certain benefits that an individual loses if he/she files the return after the deadline even though there is no fee for late filing for this year. Here are the reasons why deadline to file ITR should be extended
Please Wait while comments are loading...