• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020ರಲ್ಲಿ ಯೂನಿಕಾರ್ನ್ ಆದ ಭಾರತೀಯ ಸ್ಟಾರ್ಟ್‌ಅಪ್‌ಗಳು :ಮೌಲ್ಯ 1 ಬಿಲಿಯನ್ ಡಾಲರ್ ದಾಟಿದೆ

|

ನವದೆಹಲಿ, ನವೆಂಬರ್ 26: ಕೋವಿಡ್-19 ಸಾಂಕ್ರಾಮಿಕದಿಂದಾಗಿ ವಿಶ್ವದ ಅನೇಕ ಉದ್ಯಮಗಳು 2020ರಲ್ಲಿ ಪಡಬಾರದ ಕಷ್ಟ ಪಟ್ಟವು. ಲೆಕ್ಕವಿಲ್ಲದಷ್ಟು ಜನರು ಉದ್ಯೋಗ ಕಳೆದುಕೊಂಡರೆ, ನೂರಾರು ಕಂಪನಿಗಳು ಭಾರೀ ನಷ್ಟ ಅನುಭವಿಸಿದವು.

ಇದರ ನಡುವೆ ಸ್ಟಾರ್ಟ್‌ಅಪ್‌ಗಳ ಕಥೆಯೂ ಹೇಳತೀರದು. ಹೊಸದಾಗಿ ಹೆಜ್ಜೆಯನ್ನಿಡುತ್ತಿರುವ ಕಂಪನಿಗಳಿಗೆ ಲಾಕ್‌ಡೌನ್‌ ಎಂಬ ಗದಾಪ್ರಹಾರದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾರತೀಯ ಸ್ಟಾರ್ಟ್‌ಅಪ್‌ಗಳ ಕನಸು ನಿಂತಲ್ಲೇ ನೀರಾಗಿತ್ತು. ಇದರ ನಡುವೆ ಕೆಲ ಭಾರತೀಯ ಸ್ಟಾರ್ಟ್‌ಅಪ್‌ಗಳು 2020ರಲ್ಲಿ ಯೂನಿಕಾರ್ನ್‌ಗಳಾಗಿ ಹೊರಹೊಮ್ಮಿವೆ.

ಭಾರತದ ಟೆಕ್‌ ಸ್ಟಾರ್ಟ್‌ಅಪ್‌ಗಳು ಮುಂದಿನ 6 ತಿಂಗಳಲ್ಲಿ ಕೋವಿಡ್ ಪೂರ್ವ ಆದಾಯಗಳಿಸುವ ನಿರೀಕ್ಷೆ

ಕೋವಿಡ್-19 ಸಾಂಕ್ರಾಮಿಕ ರೋಗವು ನಕಾರಾತ್ಮಕದ ಸುತ್ತ ಹೊಸ ಆರ್ಥಿಕತೆಯ ಚಿಂತನೆಗೆ ಜನ್ಮ ನೀಡಿತು ಎಂಬ ಅಂಶವನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಈ ಸಮಯದಲ್ಲಿ ಕೆಲವು ಸ್ಟಾರ್ಟ್‌ಅಪ್‌ಗಳು ಪ್ರಕಾಶಮಾನವಾಗಿ ಹೊಳೆಯುವ ಸೂರ್ಯನಂತೆ ಕಾಣುತ್ತಿವೆ.

ಎಲ್ಲಾ ತೊಂದರೆಗಳ ಹೊರತಾಗಿಯೂ, ಫಿನ್ಟೆಕ್ ವಲಯ, ಸಾಫ್ಟ್‌ವೇರ್ ಸ್ಪೇಸ್, ​​ಎಡ್ಟೆಕ್ ವಿಭಾಗ ಮತ್ತು ಸೌಂದರ್ಯ ವಿಭಾಗದ ಕೆಲವು ಸ್ಟಾರ್ಟ್ಅಪ್‌ಗಳು ಈಗ ಯೂನಿಕಾರ್ನ್‌ಗಳಾಗಿವೆ. (ಯುನಿಕಾರ್ನ್‌ಗಳು ಖಾಸಗಿಯಾಗಿ ಪ್ರಾರಂಭವಾಗುವ ಉದ್ಯಮಗಳಾಗಿವೆ, ಇವುಗಳ ಮೌಲ್ಯ $ 1 ಬಿಲಿಯನ್).

Pine Labs

Pine Labs

ವ್ಯಾಪಾರಿ ವಾಣಿಜ್ಯ ಪರಿಹಾರ ಒದಗಿಸುವ ಮತ್ತು ಪಾಯಿಂಟ್-ಆಫ್-ಸೇಲ್ ಕಂಪನಿಯಾದ ಪೈನ್‌ಲ್ಯಾಬ್ಸ್ 2020 ರಲ್ಲಿ ಯೂನಿಕಾರ್ನ್ ಸ್ಥಾನಮಾನವನ್ನು ಗಳಿಸಿದ ಮೊದಲ ಸ್ಟಾರ್ಟ್‌ಅಪ್‌ ಆಗಿದೆ. ಜನವರಿಯಲ್ಲಿ ಹಣಕಾಸು ಸೇವೆಗಳ ಪ್ರಮುಖ ಮಾಸ್ಟರ್‌ಕಾರ್ಡ್‌ನೊಂದಿಗಿನ ಒಪ್ಪಂದದ ನಂತರ, ಪೈನ್ ಲ್ಯಾಬ್ಸ್ 3,700 ನಗರಗಳಲ್ಲಿ 1,50,000 ವ್ಯಾಪಾರಿಗಳಿಗೆ ತನ್ನ ಕೊಡುಗೆ ನೀಡುತ್ತಿದೆ. ಈ ವಲಯಗಳಲ್ಲಿ 4,50,000 ಮರ್ಚೆಂಟ್ ಟಚ್‌ಪಾಯಿಂಟ್‌ಗಳನ್ನು ಹೊಂದಿದ್ದು, ಯೂನಿಕಾರ್ನ್ ಸ್ಥಾನಮಾನವನ್ನು ಗಳಿಸಿವೆ.

FirstCry

FirstCry

ಫಸ್ಟ್‌ಕ್ರಿ ಎಂಬ ಸ್ಟಾರ್ಟ್‌ಅಪ್ ಕಂಪನಿಯನ್ನು 2010ರಲ್ಲಿ ಸುಪಮ್ ಮಹೇಶ್ವರಿಯವರು ಸ್ಥಾಪಿಸಿದರು. ಸ್ಟೇಷನರಿ ಮತ್ತು ಬಟ್ಟೆ ಸೇರಿದಂತೆ ವಿವಿಧ ವಿಭಾನಗಳಲ್ಲಿ ಮಕ್ಕಳ ಉತ್ಪನ್ನಗಳನ್ನು ಇದು ಒದಗಿಸುತ್ತದೆ. ಎರಡು ಸಾವಿರ ಬ್ರ್ಯಾಂಡ್‌ಗಳಲ್ಲಿ ಎರಡು ಲಕ್ಷ ಮಕ್ಕಳಿಗೆ ಉತ್ಪನ್ನಗಳನ್ನು ಒದಗಿಸಿದೆ ಎಂದು ಹೇಳಿಕೊಂಡಿದೆ.

ಕಂಪನಿ ಹೇಳಿಕೆ ಪ್ರಕಾರ ಬಳಕೆದಾರರ ಸಂಖ್ಯೆ 4 ಲಕ್ಷ ಮಿಲಿಯನ್‌ಗೂ ಅಧಿಕವಾಗಿದೆ. ಇದು ಸುಮಾರು 125 ನಗರಗಳಲ್ಲಿ 300ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಫೆಬ್ರವರಿ ತಿಂಗಳಿನಲ್ಲಿ ಸಾಫ್ಟ್‌ಬ್ಯಾಂಕ್‌ನಿಂದ 300 ಮಿಲಿಯನ್ ಡಾಲರ್ ಹೂಡಿಕೆಯನ್ನು ಪಡೆದುಕೊಂಡ ಬಳಿಕ ಯೂನಿಕಾರ್ನ್‌ ಕ್ಲಬ್‌ಗೆ ಸೇರಿದೆ.

Postman

Postman

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪೋಸ್ಟ್‌ಮ್ಯಾನ್ ಅನ್ನು ಅಭಿನವ್ ಅಸ್ತಾನಾ, ಅಂಕಿತ್ ಸೊಬ್ಟಿ ಮತ್ತು ಅಭಿಜಿತ್ ಕೇನ್ ಅವರು 2014 ರಲ್ಲಿ ಸ್ಥಾಪಿಸಿದರು. ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಡೆವಲಪ್‌ಮೆಂಟ್ ಕಂಪನಿಯಾದ ಪೋಸ್ಟ್‌ಮ್ಯಾನ್, ಹೂಡಿಕೆಯಲ್ಲಿ 150 ಮಿಲಿಯನ್ ಡಾಲರ್ ಗಳಿಸಿದೆ. ವಿಶ್ವದಾದ್ಯಂತ ಸುಮಾರು ಐದು ಲಕ್ಷ ಕಂಪನಿಗಳನ್ನು ಬಳಕೆದಾರರನ್ನಾಗಿ ಹೊಂದಿದೆ.

Zerodha

Zerodha

ಪೋರ್ಬ್ಸ್‌ 2020ರ 100 ಶ್ರೀಮಂತ ಸ್ಟಾರ್ಟ್‌ಅಪ್‌ಗಳಲ್ಲಿ ಸ್ಥಾನ ಪಡೆದಿದ್ದ ಸ್ಟಾಕ್ ಬ್ರೋಕ್‌ರೇಜ್ ಸಂಸ್ಥೆ ಜೆರೋದಾ ಪ್ರಸ್ತುತ ಮೂರು ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಕರ್ನಾಟಕ ಮೂಲದವರೇ ಆದ ನಿತಿನ್ ಮತ್ತು ನಿಖಿಲ್ ಕಾಮತ್ ಅವರಿಂದ ಸ್ಥಾಪನೆಯಾದ ಕಂಪನಿಯು ಇದಾಗಿದೆ.

  BS Yediyurappa ನವರ ಎದುರು 3 ಶರತ್ತುಗಳು | Oneindia Kannada
  Unacademy and Rozorpay

  Unacademy and Rozorpay

  ಈ ಹಿಂದೆ, ಫೆಬ್ರವರಿ ತಿಂಗಳಲ್ಲಿ, ಅನ್‌ಅಕಾಡೆಮಿಯು ಫೇಸ್‌ಬುಕ್ ಮತ್ತು ಜನರಲ್ ಅಟ್ಲಾಂಟಿಕ್ ನೇತೃತ್ವದ ಕಂಪನಿಗಳಿಂದ 780 ಕೋಟಿ ಸಂಗ್ರಹಿಸಿದೆ. ಇದರ ಅಡಿಯಲ್ಲಿ 18,000 ಶಿಕ್ಷಕರು ಮತ್ತು 3,50,000 ಪಾವತಿಸಿದ ಚಂದಾದಾರರ ನೆಟ್‌ವರ್ಕ್ ಹೊಂದಿದೆ.

  ಇನ್ನು ಕಳೆದ ತಿಂಗಳಷ್ಟೇ ರೇಜರ್‌ಪೇ ಜಿಐಸಿಯಿಂದ 100 ಮಿಲಿಯನ್ ಮೌಲ್ಯದ ಸಂಪತ್ತನ್ನು ಸ್ವಾಧೀನಪಡಿಸಿಕೊಂಡಿತು. ಈ ಮೂಲಕ 2020ರಲ್ಲಿ ಯೂನಿಕಾರ್ನ್ ಪಟ್ಟಿಗೆ ಸೇರಿದೆ. ಇದು ಆಯಾ ವ್ಯವಹಾರಗಳ ಒಟ್ಟಾರೆ ಹಣದ ಹರಿವನ್ನು ನಿರ್ವಹಿಸಲು ಬ್ಯಾಂಕಿಂಗ್ ಪರಿಹಾರಗಳನ್ನು ಒದಗಿಸುತ್ತದೆ. ಪ್ರಸ್ತುತ ಏರ್‌ಟೆಲ್, ಬುಕ್ ಮೈಶೋ, ಫೇಸ್ಬುಕ್, ಓಲಾ, ಜ್ಹೊಮ್ಯಾಟೊ, ಸ್ವಿಗ್ಗಿ, ಕ್ರೆಡಿಟ್ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್ ಸೇರಿದಂತೆ 5ಕ್ಕೂ ಅಧಿಕ ಮಿಲಿಯನ್ ವ್ಯವಹಾರಗಳಿಗೆ ಪಾವತಿ ಮಾಡುತ್ತದೆ.

  English summary
  Here is the list of Indian Startups that became Unicorns in 2020. Take a look.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X