ವಾಟ್ಸಾಪ್ ಅಪ್ಲಿಕೇಷನ್ ನಾಟ್ ವರ್ಕಿಂಗ್, ಏನಾಗಿತ್ತು?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03 : ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ಗೆ ಮಧ್ಯಾಹ್ನ ಯಾವ ರೋಗ ಬಡಿದಿತ್ತೋ ಏನೋ ವರ್ಕ್ ಆಗ್ತಾನೆ ಇರ್ಲಿಲ್ಲ. ವಾಟ್ಸಾಪನ್ನು ಕೆಲಸಕ್ಕೆ ಬಾರದ ಟೂಲ್ ಅನ್ನುವವರಿದ್ದಾರೆ, ಸಮಯ ಮತ್ತು ಮೂಡ್ ಹಾಳು ಮಾಡಲು ಇದಕ್ಕಿಂತ ಉತ್ತಮವಾದ ಚಾಟ್ ಬಾಕ್ಸ್ ಮತ್ತೊಂದಿಲ್ಲ ಎಂದು ಜರಿಯುವವರೂ ಇದ್ದಾರೆ.

ವಾಟ್ಸಪ್: ಬ್ಲಾಕ್ ಮಾಡಿದ್ರೆ UnBlock ಮಾಡ್ಕೊಳ್ಳೊದು ಹೇಗೆ?

ಬೆಳಗಾಗೆದ್ದು ದೇವರ ಫೋಟೋ ನೋಡುವ ಮೊದಲು ಯಾವುದಾದರೂ ಸಂದೇಶ ಬಂದಿದೆಯಾ ಅಂತ ವಾಟ್ಸಾಪ್ ನೋಡೇ ನೋಡ್ತಾರೆ! ರಾತ್ರಿಯಾದರೆ ಗುಡ್ ನೈಟ್ ಮೆಸೇಜ್ ಕಳಿಸೋದು ಇದ್ದೇ ಇರುತ್ತದೆ. ಒಟ್ಟಾರೆ, ಸ್ಮಾರ್ಟ್ ಫೋನ್ ಬಂದ ಮೇಲೆ ವಾಟ್ಸಾಪ್ ಬಳಕೆ ಚಟವಾಗಿದೆ.

WhatsApp DOWN - Chat app NOT WORKING for many customers across the globe

ವಾಟ್ಸಾಪ್ ಗೆ ಏನಾಗಿತ್ತು?: ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ಸರ್ವೀಸ್ ಡೌನ್ ಆಗಿತ್ತು. ಇದಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ತಿಳಿದು ಬಂದಿದೆ. ಅಪ್ಡೇಟ್ ಮಾಡುವಾಗ ಈ ರೀತಿ ಆಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ವ್ಯಾಪಕವಾಗಿ ಈ ಸೇವೆ ಕೆಲ ಕಾಲ ಸ್ಥಗಿತಗೊಂಡಿದ್ದು ಹಲವಾರು ಬಳಕೆದಾರರನ್ನು ಕಂಗೆಡಿಸಿದ್ದು ನಿಜ. 2016ರಲ್ಲಿ ಟ್ವಿಟ್ಟರ್ ಕೂಡಾ ಇದೇ ರೀತಿ ಕೆಲ ಕಾಲ ಡೌನ್ ಆಗಿತ್ತು.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?


ಭಾರತ, ಯುಕೆ, ಯುಎಸ್ಎ, ಇಟಲಿ, ಸೌದಿ ಅರೇಬಿಯಾ, ಫಿಲಿಪೈನ್ಸ್, ಜರ್ಮನಿ, ಶ್ರೀಲಂಕಾ ಸೇರಿದಂತೆ ವಿಶ್ವದ ಹಲವೆಡೆ ಬಳಕೆದಾರರು ಸಮಸ್ಯೆ ಎದುರಿಸಿದರು.

ಕೆಲವರಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳಿಸಲು ಆಗುತ್ತಿರಲಿಲ್ಲ. ಮತ್ತೆ ಕೆಲವರಿಗೆ ವಾಟ್ಸಾಪ್ ಓಪನ್ ಆಗುತ್ತಿರಲಿಲ್ಲ. ಕಳೆದ ಮೇ ತಿಂಗಳಿನಲ್ಲೂ ಇದೇ ರೀತಿ ಸಮಸ್ಯೆಯಿಂದ ವಾಟ್ಸಾಪ್ ಡೌನ್ ಆಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
WHATSAPP is down across India, UK and USA - the popular chat app is not working for thousands of users.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ