ಹಳೆ 500, 1,000 ನೋಟುಗಳ ವೈಕುಂಠ ಸಮಾರಾಧನೆ!

Posted By:
Subscribe to Oneindia Kannada

ನವದೆಹಲಿ, ನವೆಂಬರ್ 11: ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1,000 ರೂಪಾಯಿ ನೋಟು ಚಲಾವಣೆಯನ್ನು ರದ್ದುಗೊಳಿಸಿದ ಬಳಿಕ, ಹಳೆ ನೋಟು ಏನು ಮಾಡುವುದು ಎಂಬ ಚಿಂತೆ ಉಂಟಾಗಿದೆ. ಜನ ಸಾಮಾನ್ಯರು ಹೊಸ ನೋಟುಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇತ್ತ ಆರ್ ಬಿಐ ಹಳೆ ನೋಟುಗಳ ದಹನಕ್ಕೆ ಸಿದ್ಧತೆ ನಡೆಸಿದೆ.

ಚಲಾವಣೆ ಇಲ್ಲದ ಹಳೆ ನೋಟುಗಳೆಲ್ಲವೂ ಸಂಗ್ರಹವಾದ ಮೇಲೆ ಎಲ್ಲವನ್ನು ಸಂಪೂರ್ಣವಾಗಿ ಸುಟ್ಟು ಭಸ್ಮಮಾಡಲಾಗುತ್ತದೆ. ಹಳೆ ನೋಟುಗಳನ್ನು ಬಳಸಿಕೊಂಡು ಕಳ್ಳನೋಟು ತಯಾರಿಸಲು ಸಾಧ್ಯವಾಗದ ರೀತಿಯಲ್ಲಿ ನಾಶಪಡಿಸಲಾಗುತ್ತದೆ.[ಹೊಸ ನೋಟುಗಳನ್ನು ಬಳಸುವ ಮುನ್ನ ಈ ರೀತಿ ಪರೀಕ್ಷಿಸಿ]

What will RBI do with the old Rs 500, 1,000 notes

ಈಗ ಸಾರ್ವಜನಿಕರಿಂದ ಸಂಗ್ರಹವಾಗುವ ನೋಟುಗಳನ್ನು ಟ್ರಕ್ ಗಳಲ್ಲಿ ತುಂಬಿ ಆರ್ ಬಿಐ ಅಂಗಳಕ್ಕೆ ಕಳಿಸಲಾಗುತ್ತದೆ. ಹೀಗೆ ಟ್ರಕ್ ಗಟ್ಟಲೇ ಲೋಡ್ ಗಳನ್ನು ಹಂತ ಹಂತವಾಗಿ ಕಲ್ಲಿದ್ದಲು ಬ್ರಿಕ್ಸ್ (briquettes) ಗಳಾಗಿ ಪರಿವರ್ತಿಸಲಾಗುತ್ತದೆ. ಈ ಕಾರ್ಯವನ್ನು ಗುತ್ತಿಗೆದಾರರು ಪೂರೈಸಲಿದ್ದಾರೆ. [1,000 ರೂಪಾಯಿ ನೋಟು ಮತ್ತೆ ಬರಲಿದೆ]

ಮಾರ್ಚ್ 2016ರಲ್ಲಿ 500 ರು ಮುಖಬೆಲೆಯ ಸುಮಾರು 15,707 ಮಿಲಿಯನ್ ಹಾಗೂ 1,000 ಮುಖಬೆಲೆಯ 6,326 ಮಿಲಿಯನ್ ನೋಟುಗಳಿತ್ತು ಎಂಬ ದಾಖಲೆ ಸಿಕ್ಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the Rs 500 nand 1,000 notes no longer legal tender, it would be interesting to find out what happens to the old notes.
Please Wait while comments are loading...