CIBIL Score: ಸಿಬಿಲ್ ಸ್ಕೋರ್ ಎಂದರೇನು, ಸಾಲಕ್ಕೆ ಯಾಕೆ ಮುಖ್ಯ ?
CIBIL Score: ಸಾಲ ಪಡೆದುಕೊಳ್ಳುವುದಕ್ಕೆ ಹಾಗೂ ಆರ್ಥಿಕವಾಗಿ ಬೆಳೆಯುವುದಕ್ಕೆ CIBIL ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಎನ್ನುವುದು ತುಂಬಾನೇ ಮುಖ್ಯ. ಬ್ಯಾಂಕ್‌ಗಳು ಗೃಹ ಸಾಲ ಇಲ್ಲವೇ ವೈಯಕ್ತಿಕ ಸಾಲವನ್ನು ಕೊಡುವುದೇ ನಿಮ್ಮ ಈ ಸ್ಕೋರ್ ನೋಡಿಯೇ. ಇದೇ ಕಾರಣಕ್ಕೆ ಈ ಸ್ಕೋರ್ ತುಂಬಾ ಮುಖ್ಯ ಅಂತ ಹೇಳಲಾಗುತ್ತದೆ. ಬಹಳಷ್ಟು ಜನರಿಗೆ CIBIL ಸ್ಕೋರ್‌ನ ಬಗ್ಗೆ ಹಾಗೂ ಅದರ ಪರ್ಸೆಂಟೆಜ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗೊಂದಲ ಇರುತ್ತದೆ. ಈ ರೀತಿ ಗೊಂದಲಗಳಿಗೆ ಉತ್ತರ ಇಲ್ಲಿದೆ. CIBIL ಸ್ಕೋರ್ ಎಂದರೇನು, ಅದು ಎಷ್ಟಿರಬೇಕು ಹಾಗೂ ಅದು ಯಾಕೆ ಮುಖ್ಯ ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
ಭಾರತದಲ್ಲಿ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಲಿಮಿಟೆಡ್ (CIBIL) 2000ರಲ್ಲಿ ಸ್ಥಾಪನೆ ಮಾಡಲಾಗಿದೆ. ಸಿಐಬಿಐಎಲ್‌ನಿಂದ ನೀವು ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ ಕ್ರೆಡಿಟ್ ಕಾರ್ಡ್ ಹಾಗೂ ಲೋಲ್ ಪಡೆಯುವುದಕ್ಕೂ ಇದು ಸಹಕಾರಿಯಾಗಿದೆ. ಭಾರತದಲ್ಲಿ ಬ್ಯಾಂಕ್‌ಗಳು ಹಾಗೂ ಸಾಲ ಪಡೆಯುವವರ ನಡುವೆ ಇದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

ಯಾಕೆ CIBIL ಸ್ಕೋರ್ ಮುಖ್ಯ ?
CIBIL ಸ್ಕೋರ್ ಎನ್ನುವುದು ಸರಳವಾಗಿ ಹೇಳಬೇಕೆಂದರೆ ನೀವು ದುಡ್ಡನ್ನು ಹೇಗೆ ಬಳಸುತ್ತೀರಿ ಹಾಗೂ ದುಡ್ಡಿನ ವಿಷಯದಲ್ಲಿ ನೀವು ಎಷ್ಟು ನಂಬಿಕೆ ಉಳಿಸಿಕೊಂಡಿದ್ದೀರಿ ಎನ್ನುವುದನ್ನು ತೋರಿಸುತ್ತದೆ. ಅಂದರೆ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಯಾವ ರೀತಿ ಮೈಂಟೆನ್ ಮಾಡಿದ್ದೀರಿ. ಯಾವುದಾದರೂ ಸಾಲ ಹಾಗೂ ಇಎಂಐ(EMI)ಗಳನ್ನು ತೆಗೆದುಕೊಂಡಿದ್ದರೆ. ಅದನ್ನು ಸರಿಯಾದ ದಿನಾಂಕಕ್ಕೆ ಕಟ್ಟಿದ್ದೀರಾ. ಇಲ್ಲ ಸಾಲವನ್ನು ಬಾಕಿ ಉಳಿಸಿಕೊಂಡಿದ್ದೀರಾ ಎನ್ನುವುದು ಸೇರಿದಂತೆ ಒಟ್ಟಾರೆ ನಿಮ್ಮ ಆರ್ಥಿಕ ಶಿಸ್ತನ್ನು ಪರಿಶೀಲನೆ ಮಾಡುವುದಕ್ಕೆ ಇದು ಸಹಕಾರಿಯಾಗಿದೆ.
ಈ ಅಂಶಗಳ ಆಧಾರದ ಮೇಲೆಯೇ ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ನೀವು ಯಾರ ಬಳಿಯಾದರೂ ಸಾಲ ತೆಗೆದುಕೊಂಡು ಸರಿಯಾದ ಸಮಯಕ್ಕೆ ಸಾಲ ವಾಪಸ್ಸು ಕೊಟ್ಟರೆ ಮಾತ್ರ ಅವರು ಮತ್ತೆ ನಿಮಗೆ ಸಾಲ ಕೊಡುತ್ತಾರೆ. ನೀವು ಸಹ ಯಾರಾದರೂ ಸಾಲ ಕೊಟ್ಟರೆ ಮಾತ್ರವೇ ಸಾಲ ಕೊಡತ್ತೀರಿ. ಅದೇ ಮಾದರಿಯನ್ನು ಬ್ಯಾಂಕ್‌ಗಳು ಸಹ ಅನುಸರಿಸುತ್ತವೆ. ನೀವು ವಿಶ್ವಾಸಾರ್ಹ ಸಾಲಗಾರರೇ, ಬ್ಯಾಂಕ್ ಕೊಟ್ಟ ದುಡ್ಡನ್ನು ವಾಪಸ್ ಕೊಡಬಲ್ಲಿರೇ ಎಂದು ಚೆಕ್ ಮಾಡುತ್ತದೆ. ಅಷ್ಟೇ ಅಲ್ಲ ಈ ಹಿಂದೆ ನೀವೇನಾದರೂ ಸಾಲ ಮಾಡಿದ್ದೀರಾ ಅಂತಲೂ ಚೆಕ್ ಮಾಡುತ್ತದೆ.
CIBIL ಸ್ಕೋರ್ ಎಷ್ಟಿರಬೇಕು: ಈಗಾಗಲೇ ಹೇಳಿರುವಂತೆ ನೀವು ಹಣ ಸಾಲದ ರೂಪದಲ್ಲಿ ಪಡೆದುಕೊಳ್ಳುವಾಗ CIBIL ಸ್ಕೋರ್ ಪರಿಶೀಲನೆ ಮಾಡಲಾಗುತ್ತದೆ. ಸಾಮಾನ್ಯವಾಗಿ CIBIL ಸ್ಕೋರ್ 300 ಮತ್ತು 900ರ ನಡುವಿನ ಸಂಖ್ಯೆ ಆಗಿರುತ್ತದೆ.
ಯಾವ ಸ್ಕೋರ್ ಇದ್ದರೆ ಎಷ್ಟು ?
- ಅತ್ಯುತ್ತಮ: 750-900
- ಉತ್ತಮ: 650-750
- ಸರಾಸರಿ: 550-650
- ಕಳಪೆ: 300-500












Click it and Unblock the Notifications