ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಈಗ ಕಟ್ಟುತ್ತಿರುವುದೆಷ್ಟು, ನಿರೀಕ್ಷೆ ಏನು?

|
Google Oneindia Kannada News

ಇನ್ನೇನು ಹನ್ನೆರಡು ದಿನದಲ್ಲಿ ಕೇಂದ್ರ ಸರಕಾರದ ಬಜೆಟ್ ಮಂಡನೆ ಆಗುತ್ತದೆ. ಅರುಣ್ ಜೇಟ್ಲಿ ಅವರ ಜಾದೂ ಬುಟ್ಟಿಯಿಂದ ಅದೇನೇನು ಹೊರಬರುತ್ತೋ? ಇದೂ ಒಂಥರಾ ಸಮುದ್ರ ಮಂಥನವೇ. ಕಾಮಧೇನು, ಕಲ್ಪವೃಕ್ಷ, ಅಮೃತ ಬಂದಂತೆಯೇ ಕಾರ್ಕೋಟಕ ವಿಷವೂ ಬರಬಹುದು.

ಆದರೆ, ನಾವೆಲ್ಲ ಸಂಬಳ ನೆಚ್ಚಿಕೊಂಡು ಬದುಕುವ ಜನ. ಹತ್ತು ರುಪಾಯಿ ಉಳಿದರೆ ಉಪ್ಪಿನಕಾಯಿಗೂ ಇಪ್ಪತ್ತು ರುಪಾಯಿ ಉಳಿದರೆ ಅರ್ಧ ಲೀಟರ್ ಹಾಲಿಗೂ ಆಗುತ್ತದೆ ಎಂದು ಲೆಕ್ಕಾಚಾರದಲ್ಲಿ ಬದುಕುವಂಥವರು. ನಮ್ಮ ಸಂಬಳದ ಮೇಲೆ ತೆರಿಗೆ ಎಂಬ ದೊಡ್ಡ ಕತ್ತರಿ ಬೀಳದಿರಲಿ ಅಂತ ಕಷ್ಟವೋ ಸುಖವೋ ಒಂದಿಷ್ಟು ಹಣ ಇನ್ಷೂರೆನ್ಸ್ ಗೂ, ಆರ್ ಡಿ, ಮ್ಯೂಚುವಲ್ ಫಂಡ್ ಅಂತಲೂ ಇರುವ ಕಷ್ಟ- ಸಾಲದ ಜತೆಗೆ ಇನ್ ಕಮ್ ಟ್ಯಾಕ್ಸ್ ಉಳಿಸುವುದಕ್ಕೇ ಕಷ್ಟ ಪಡ್ತೀವಿ.

ಬಜೆಟ್: ಜೇಟ್ಲಿ ಸೂಟ್ ಕೇಸಿನೊಳಗಿದೆಯಾ ತೆರಿಗೆ ವಿನಾಯಿತಿ ಸಿಹಿಸುದ್ದಿ?ಬಜೆಟ್: ಜೇಟ್ಲಿ ಸೂಟ್ ಕೇಸಿನೊಳಗಿದೆಯಾ ತೆರಿಗೆ ವಿನಾಯಿತಿ ಸಿಹಿಸುದ್ದಿ?

ಯಾರೋ ಮಹನೀಯ ವಿಜ್ಞಾನಿಯೊಬ್ಬರು, ನಾನು ಏನನ್ನಾದರೂ ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಈ ಇನ್ ಕಮ್ ಟ್ಯಾಕ್ಸ್ ಮಾತ್ರ ಅರ್ಥ ಆಗಲ್ಲ್ ಅಂದಿದ್ದರಂತೆ. ಅಂಥವರೇ ಕೈ ಚೆಲ್ಲಿ ಸುಮ್ಮನಾದ ವಿಷಯವನ್ನು ಎಷ್ಟು ಸಾಧ್ಯವೋ ಅಷ್ಟು ಸುಲಭವಾಗಿ ನಿಮಗೆ ತಿಳಿಸುವುದೇ ಇಂದಿನ ಪ್ರಯತ್ನ್. ತೀರಾ ಸಣ್ಣ- ಪುಟ್ಟ ತಪ್ಪಾದರೆ ಹೊಟ್ಟೆಗೆ ಹಾಕಿಕೊಂಡು ಬಿಡಿ.

ಇಲ್ನೋಡಿ, ತೆರಿಗೆಯಲ್ಲಿ ಎರಡು ಥರ. ನೇರ ತೆರಿಗೆ (ಡೈರೆಕ್ಟ್ ಟ್ಯಾಕ್ಸ್) ಹಾಗೂ ಪರೋಕ್ಷ ತೆರಿಗೆ (ಇನ್ ಡೈರೆಕ್ಟ್ ಟ್ಯಾಕ್ಸ್). ಎರಡೂ ಸರಕಾರವನ್ನೇ ತಲುಪುತ್ತದೆ. ಆದರೆ ತಲುಪುವ ಮಾರ್ಗ ಬೇರೆ ಅಷ್ಟೇ.

ನೇರ ತೆರಿಗೆ ವ್ಯಾಪ್ತಿಗೆ ಬರುವ ಮೂಲಗಳು ಯಾವುವು

ನೇರ ತೆರಿಗೆ ವ್ಯಾಪ್ತಿಗೆ ಬರುವ ಮೂಲಗಳು ಯಾವುವು

ನೇರ ತೆರಿಗೆ ಅಂದರೆ ಯಾರ ಮೇಲೆ ತೆರಿಗೆ ಕಟ್ಟುವ ಜವಾಬ್ದಾರಿ ಬೀಳುತ್ತದೋ ಅವರೇ ನೇರವಾಗಿ ಅದನ್ನು ಸರಕಾರಕ್ಕೂ ತಮ್ಮ ಹೆಸರಿನಲ್ಲೇ ಕಟ್ಟಿಬಿಡ್ತಾರೆ. ಅದಕ್ಕೆ ಉದಾಹರಣೆ ಅಂದರೆ ಇನ್ ಕಮ್ ಟ್ಯಾಕ್ಸ್. ಅದರ ಕೆಳಗೆ ಬೇರೆ ಬೇರೆ ಹೆಡ್ ಬರುತ್ತವೆ.

ವೇತನದ ಮೂಲಕ ಆದಾಯ (ಸಂಬಳದ ಮೂಲಕ ಬರುವ ಆದಾಯ)

ಮನೆಯ ಬಾಡಿಗೆ ರೂಪದ ಆದಾಯ (ಮನೆ, ಕಮರ್ಷಿಯಲ್ ಕಾಂಪ್ಲೆಕ್ಸ್ ಇಂಥದ್ದರ ಮೂಲಕ ಬರುವ ಬಾಡಿಗೆ ರೂಪದ ಆದಾಯ)

ವ್ಯವಹಾರದಿಂದ ಲಾಭ ಅಥವಾ ವೃತ್ತಿಯಿಂದ ಆದಾಯ (ಬಿಜೆನೆಸ್ ಅಂದರೆ ವ್ಯವಹಾರ, ವ್ಯಾಪಾರ. ಇನ್ನು ಪ್ರೊಫೆಷನ್ ಅಂದರೆ ಲಾಯರ್, ಸಿಎಗಳು, ಡಾಕ್ಟರ್ ಗಳು ಇಂಥವರ ಆದಾಯ ಲೆಕ್ಕ ಹಾಕುವ ಬಗೆಯೇ ಬೇರೆ).

ಕ್ಯಾಪಿಟಲ್ ಗೇಯ್ನ್ಸ್ ಮೂಲಕ ಆದಾಯ (ಮನೆ ಕಟ್ಟುವುದು -ಮಾರುವುದು, ಸೈಟ್ ತಗೊಳ್ಳೋದು ಮಾರೋದು, ಜಮೀನು ಖರೀದಿ-ಮಾರಾಟ ಇದರಿಂದ ಬರುವ ಲಾಭವನ್ನು ಕ್ಯಾಪಿಟಲ್ ಗೇಯ್ನ್ ಅಂತಾರೆ)

ಇತರ ಮೂಲದ ಮೂಲಕ ಸಿಗುವ ಆದಾಯ (ಈಗ ಹೇಳಿದ ವಿಧಾನದಲ್ಲಿ ಅಲ್ಲದೇ ಬೇರೆ ಮೂಲದಿಂದ ಬಂದ ಆದಾಯ. ಉದಾಹರಣೆಗೆ ಕುದುರೆ ರೇಸ್ ನಲ್ಲೋ, ಯಾವುದೋ ಲಾಟರಿ ಟಿಕೆಟ್ ಹೊಡೆಯುವುದು..ಇವೆಲ್ಲ ಈ ಹೆಡ್ ನಲ್ಲಿ ಬರುತ್ತವೆ)

ಒಬ್ಬ ವ್ಯಕ್ತಿಗೆ ಈ ಪೈಕಿ ಯಾವುದಾದರೂ ಒಂದು ಬಗೆಯ ಆದಾಯ ಇರಬಹುದು. ಅಥವಾ ಒಂದಕ್ಕಿಂತ ಹೆಚ್ಚೂ ಇರಬಹುದು. ಅಥವಾ ಇವೆಲ್ಲ ಬಗೆಯ ಆದಾಯವೂ ಇರಬಹುದು. ಆಗ ಆ ಹೆಡ್ ನ ಕೆಳಗೆ ಆದಾಯ ತೆರಿಗೆಯನ್ನು ಪ್ರತ್ಯೇಕವಾಗಿ ಲೆಕ್ಕ ಹಾಕಬೇಕಾಗುತ್ತದೆ. ಆ ನಂತರ ಎಲ್ಲವನ್ನೂ ಒಟ್ಟು ಲೆಕ್ಕ ಮಾಡಿ, ಕಟ್ಟಬೇಕಾದ ತೆರಿಗೆ ಎಷ್ಟು ಅಂತ ನೋಡಬೇಕಾಗುತ್ತದೆ.

ಪರೋಕ್ಷ ತೆರಿಗೆ ಅಂದರೇನು?

ಪರೋಕ್ಷ ತೆರಿಗೆ ಅಂದರೇನು?

ಇನ್ನು ಮೊದಲೇ ಹೇಳಿದ ಹಾಗೆ, ಇನ್ ಡೈರೆಕ್ಟ್ ಟ್ಯಾಕ್ಸ ಅಂತ. ಹಾಗಂದರೆ, ನೀವು ಸಿನಿಮಾಗೆ ಹೋಗ್ತೀರಾ, ಅಲ್ಲಿ ಟಿಕೆಟ್ ಮೇಲೆ ಒಂದಿಷ್ಟು ತೆರಿಗೆ ಹಾಕಿರ್ತಾರೆ. ಇನ್ನು ಹೋಟೆಲ್ ಬಿಲ್ ಮೇಲೆ ಒಂದಿಷ್ಟು ತೆರಿಗೆ ಹಾಕಿರ್ತಾರೆ. ಅಲ್ಲೆಲ್ಲ ತೆರಿಗೆ ಹಣವನ್ನು ಕಟ್ಟುವುದು ನಿಮ್ಮ ಜೇಬಿನಿಂದಲೇ. ಆದರೆ ಸರಕಾರಕ್ಕೆ ತೆರಿಗೆ ಸಂದಾಯ ಆಗುವುದು ಆಯಾ ಥೇಟರ್, ಹೋಟೆಲ್ ನ ಮಾಲೀಕರ ಹೆಸರಿನಲ್ಲಿ. ಇವು ಇನ್ ಡೈರೆಕ್ಟ್ ಟ್ಯಾಕ್ಸ್.

ಕೇಂದ್ರ ಬಜೆಟ್ ಮೇಲಿನ ಉದ್ಯೋಗಸ್ಥರ 5 ನಿರೀಕ್ಷೆಗಳುಕೇಂದ್ರ ಬಜೆಟ್ ಮೇಲಿನ ಉದ್ಯೋಗಸ್ಥರ 5 ನಿರೀಕ್ಷೆಗಳು

ಆದಾಯ ತೆರಿಗೆ ಸ್ಲ್ಯಾಬ್ ಗಳು

ಆದಾಯ ತೆರಿಗೆ ಸ್ಲ್ಯಾಬ್ ಗಳು

ಈಗ ನಮ್ಮಂಥ ಸಂಬಳಕ್ಕೆ ಕಾಯುವ ಜನರೇ ಹೆಚ್ಚು ಆದ್ದರಿಂದ ಆದಾಯ ತೆರಿಗೆ ಸ್ಲ್ಯಾಬ್ ಏನಿದೆ ಅಂತ ತಿಳಿದುಕೊಳ್ಳೋಣ.

ಪುರುಷರು ಮತ್ತು ಮಹಿಳೆಯರು (ಅರವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು) 2017-2018ನೇ ಸಾಲಿಗೆ ಇದ್ದ ಸ್ಲ್ಯಾಬ್ ಇದು

2,50,000 ದೊಳಗೆ ಆದಾಯ ಇದ್ದರೆ ಯಾವುದೇ ತೆರಿಗೆ ಇಲ್ಲ

2,50,000ಕ್ಕೆ ಮೇಲ್ಪಟ್ಟು 5 ಲಕ್ಷದವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ

5ಲಕ್ಷಕ್ಕೆ ಮೇಲ್ಪಟ್ಟ ಹಾಗೂ 10 ಲಕ್ಷದೊಳಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ

10 ಲಕ್ಷಕ್ಕೆ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ

ಇನ್ನು ಐವತ್ತು ಲಕ್ಷದ ಮೇಲೆ ಒಂದು ಕೋಟಿ ವರೆಗೆ ಆದಾಯ ಇದ್ದರೆ ಅಂಥವರಿಗೆ ಆದಾಯ ತೆರಿಗೆ ಮೇಲೆ ಶೇ 10ರಷ್ಟು ಸರ್ ಚಾರ್ಜ್ ಅಂತ ಹಾಕಲಾಗುತ್ತದೆ. ಒಂದು ಕೋಟಿ ಮೇಲೆ ಆಅದಾಯ ಇದ್ದರೆ ಶೇ ಹದಿನೈದರಷ್ಟು ಸರ್ ಚಾರ್ಜ್ ಹಾಕಲಾಗುತ್ತದೆ.

ಇನ್ನು ಇನ್ ಕಮ್ ಟ್ಯಾಕ್ಸ್+ ಸರ್ ಚಾರ್ಜ್ ಜತೆಗೆ ಶೇ 3ರಷ್ಟು ಸೆಸ್ ಹಾಕಲಾಗುತ್ತದೆ.

ಹಿರಿಯ ನಾಗರಿಕರಿಗೆ ಆದಾಯ ತೆರಿಗೆ

ಹಿರಿಯ ನಾಗರಿಕರಿಗೆ ಆದಾಯ ತೆರಿಗೆ

ಹಿರಿಯ ನಾಗರಿಕರಿಗೆ ಅಂದರೆ ಅರವತ್ತು ವರ್ಷ ಮೇಲ್ಪಟ್ಟವರು ಹಾಗೂ ಎಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರು-ಮಹಿಳೆಯರಿಗೆ ಈ ದರ

3 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ

3ರಿಂದ 5 ಲಕ್ಷದವರೆಗಿನ ಆದಾಯಕ್ಕೆ ಶೇ 5 ರಷ್ಟು ತೆರಿಗೆ

5ರಿಂದ ಹತ್ತು ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ

10 ಲಕ್ಷಕ್ಕೆ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ

ಇನ್ನು ಐವತ್ತು ಲಕ್ಷದ ಮೇಲೆ ಒಂದು ಕೋಟಿವರೆಗೆ ಆದಾಯ ಇದ್ದರೆ ಅಂಥವರಿಗೆ ಆದಾಯ ತೆರಿಗೆ ಮೇಲೆ ಶೇ 10ರಷ್ಟು ಸರ್ ಚಾರ್ಜ್ ಅಂತ ಹಾಕಲಾಗುತ್ತದೆ.

ಒಂದು ಕೋಟಿ ಮೇಲೆ ಆಅದಾಯ ಇದ್ದರೆ ಶೇ ಹದಿನೈದರಷ್ಟು ಸರ್ ಚಾರ್ಜ್ ಹಾಕಲಾಗುತ್ತದೆ.

ಇನ್ ಕಮ್ ಟ್ಯಾಕ್ಸ್+ ಸರ್ ಚಾರ್ಜ್ ಜತೆಗೆ ಶೇ 3ರಷ್ಟು ಸೆಸ್ ಹಾಕಲಾಗುತ್ತದೆ.

ಇನ್ನು ಎಂಬತ್ತು ಹಾಗೂ ಎಂಬತ್ತಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ

ಇನ್ನು ಎಂಬತ್ತು ಹಾಗೂ ಎಂಬತ್ತಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ

5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ

5ರಿಂದ ಹತ್ತು ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ

10 ಲಕ್ಷಕ್ಕೆ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ

ಇನ್ನು ಐವತ್ತು ಲಕ್ಷದ ಮೇಲೆ ಒಂದು ಕೋಟಿ ವರೆಗೆ ಆದಾಯ ಇದ್ದರೆ ಅಂಥವರಿಗೆ ಆದಾಯ ತೆರಿಗೆ ಮೇಲೆ ಶೇ 10ರಷ್ಟು ಸರ್ ಚಾರ್ಜ್ ಅಂತ ಹಾಕಲಾಗುತ್ತದೆ

ಒಂದು ಕೋಟಿ ಮೇಲೆ ಆಅದಾಯ ಇದ್ದರೆ ಶೇ ಹದಿನೈದರಷ್ಟು ಸರ್ ಚಾರ್ಜ್ ಹಾಕಲಾಗುತ್ತದೆ.

ಇನ್ ಕಮ್ ಟ್ಯಾಕ್ಸ್+ ಸರ್ ಚಾರ್ಜ್ ಜತೆಗೆ ಶೇ 3ರಷ್ಟು ಸೆಸ್ ಹಾಕಲಾಗುತ್ತದೆ.

ಹೂಡಿಕೆ ಯಾವುದರಲ್ಲಿ?

ಹೂಡಿಕೆ ಯಾವುದರಲ್ಲಿ?

ಸೆಕ್ಷನ್ 80 ಅಂತ ಇದೆ. ಅದರಲ್ಲಿ ಸಿ, ಸಿಸಿ, ಡಿ ಹೀಗೆ ನಾನಾ ಬಗೆಯ ಉಳಿತಾಯ ಯೋಜನೆಗಳಿವೆ. ಅದರಲ್ಲಿ ನೀವು ಹಣ ತೊಡಗಿಸಿದ್ದೇ ಆದರೆ ನಿಮ್ಮ ಒಟ್ಟಾರೆ ಆದಾಯದಲ್ಲಿ ಈ ಉಳಿತಾಯ ಹಣವನ್ನು ಕಡಿಮೆ ಮಾಡಿ, ಬಾಕಿ ಮೊತ್ತವನ್ನು ನಿಮ್ಮ ಆದಾಯ ಅಂತ ಪರಿಗಣಿಸಲಾಗುತ್ತದೆ. ಆದರೆ ಹೀಗೆ ನೀವು ಉಳಿಸಲು ಸಾಧ್ಯ ಇರೋದು ಒಂದು ಆರ್ಥಿಕ ವರ್ಷಕ್ಕೆ ಒಂದೂವರೆ ಲಕ್ಷ ಮಾತ್ರ.

ಅಂದರೆ ಎಲ್ಲೈಸಿ, ಪಿಪಿಎಫ್, ಮೆಡಿಕ್ಲೇಮ್, ಮಕ್ಕಳ ಟ್ಯೂಷನ್ ಫೀ ಇಂಥದ್ದಕ್ಕೆಲ ತೆರಿಗೆ ವಿನಾಯಿತಿ ಇದೆ. ಆದರೆ ಒಂದೂವರೆ ಲಕ್ಷ ಎಂಬ ಮಿತಿ ಕೂಡ ಇದೆ. ಅದಕ್ಕಿಂತ ಹೆಚ್ಚಿನ ಉಳಿತಾಯ ನೀವು ಮಾಡಿದರೂ ಅದಕ್ಕೆ ಆದಾಯ ತೆರಿಗೆಯಿಂದ ಯಾವುದೇ ವಿನಾಯಿತಿ ಇಲ್ಲ.

ಮತ್ತೊಂದು ಬಜೆಟ್ ಎದುರಿದೆ

ಮತ್ತೊಂದು ಬಜೆಟ್ ಎದುರಿದೆ

ಈಗ ಮತ್ತೊಂದು ಬಜೆಟ್ ಕಣ್ಣೆದುರಿಗಿದೆ. ಇದರಲ್ಲಿ ತೆರಿಗೆ ವಿನಾಯಿತಿಯನ್ನು ಈಗಿನಕ್ಕಿಂತ ಐವತ್ತು ಸಾವಿರ ಹೆಚ್ಚು ಮಾಡಬೇಕು ಹಾಗೂ ಉಳಿತಾಯಕ್ಕೆ ನೀಡುವ ವಿನಾಯಿತಿಯನ್ನು ಎರಡು ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದು ಮುಖ್ಯವಾದ ಬೇಡಿಕೆ. ಇನ್ನು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಈಗಿರುವ ವಿನಾಯಿತಿಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಸಬೇಕು ಎಂಬುದು ರಿಯಲ್ ಎಸ್ಟೇಟ್ ವಲಯದವರು ಹಾಗೂ ಆದಾಯ ತೆರಿಗೆ ಪಾವತಿದಾರರ ಒಕ್ಕೊರಲ ಅಭಿಪ್ರಾಯ.

ಬೇಡಿಕೆ ಪಟ್ಟಿ ದೊಡ್ಡದಿದೆ

ಬೇಡಿಕೆ ಪಟ್ಟಿ ದೊಡ್ಡದಿದೆ

ಇನ್ನು ರಿಯಲ್ ಎಸ್ಟೇಟ್ ವಿಚಾರದ ಬಗ್ಗೆ ಒಂದು ಮಾತು. ಡಿಮಾನಿಟೈಸೇಷನ್ ಹಾಗೂ ಜಿಎಸ್ ಟಿ ಎಂಬುದು ಅವರ ಪಾಲಿಗೆ ದೊಡ್ಡ ಹೊಡೆತವಾಗಿದೆ. ಅದರ ಮೇಲೆ ರೇರಾ ಕಾಯ್ದೆ ಜಾರಿ ಅನ್ನೋದಂತೂ ಗಾಯದ ಮೇಲಿನ ಬರೆ. ಆದ್ದರಿಂದ ರಿಯಲ್ ಎಸ್ಟೇಟ್ ನವರದಂತೂ ಬೇಡಿಕೆ ಪಟ್ಟಿ ದೊಡ್ಡದಿದೆ.

ಒಂದೇ ಕಡೆ ಒಪ್ಪಿಗೆ, ಮಂಜೂರಾತಿ

ಒಂದೇ ಕಡೆ ಒಪ್ಪಿಗೆ, ಮಂಜೂರಾತಿ

ವಸತಿ ಯೋಜನೆಗಳ ಅನುಮತಿ, ಒಪ್ಪಿಗೆ ಸರಕಾರದ ಕಡೆಯಿಂದ ಸಿಗಬೇಕಾದ ಎಲ್ಲ ಮಂಜೂರಾತಿ ಒಂದೇ ಕಡೆ, ವೇಗವಾಗಿ ಆಗಬೇಕು (ಸಿಂಗಲ್ ವಿಂಡೋ ಸಿಸ್ಟಮ್). ರಿಯಲ್ ಎಸ್ಟೇಟ್ ವ್ಯವಹಾರವನ್ನು ಕೈಗಾರಿಕೆ ಅನ್ನೋ ರೀತಿ ಪರಿಗಣಿಸಿ, ಆ ವ್ಯವಹಾರಕ್ಕೆ ಪಡೆಯುವ ಸಾಲಕ್ಕೆ ಕಡಿಮೆ ಬಡ್ಡಿ ಹಾಕಬೇಕು ಹಾಗೂ ಈಗಿರುವ ಜಿಎಸ್ ಟಿ ಸಿಕ್ಕಾಪಟ್ಟೆ ಇದೆ (ಶೇ ಹನ್ನೆರಡು). ಅದನ್ನು ಇಳಿಸಬೇಕು ಎಂಬುದು ಅವರ ಒತ್ತಾಯ.

ಈ ಬಾರಿ ಏನು ಅನುಕೂಲ ಮಾಡಿಕೊಡ್ತಾರೋ?

ಈ ಬಾರಿ ಏನು ಅನುಕೂಲ ಮಾಡಿಕೊಡ್ತಾರೋ?

2022ರ ಮಾರ್ಚ್ ಹೊತ್ತಿಗೆ ದೇಶದ ಎಲ್ಲರಿಗೂ ಸೂರು ಒದಗಿಸಬೇಕು ಅನ್ನೋ ಶಪಥ ಮಾಡಿರುವ ಮೋದಿ ಸರಕಾರಕ್ಕೆ ರಿಯಲ್ ಎಸ್ಟೇಟ್ ವಲಯದಲ್ಲಿನ ಬದಲಾವಣೆ ಅದರಲ್ಲೂ ಯೋಜನೆ ವೆಚ್ಚ ಕಡಿಮೆ ಮಾಡುವುದು, ಸಮಯ ಕಡಿಮೆ ಮಾಡುವುದು ಬಹಳ ಮುಖ್ಯ. ಅದಕ್ಕೆ ಏನು ಮಾಡ್ತಾರೋ ಕಾದು ನೋಡೋಣ.

English summary
2018 union budget will be the last full fledged budget for this term of BJP led central government. Here are the expectation from salaried class about Income tax slabs, investment limit and also what real estate sector expecting from this time budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X