Get Updates
Get notified of breaking news, exclusive insights, and must-see stories!

ಚಿನ್ನಾಭರಣ ಪ್ರಚಾರಕ್ಕಾಗಿ ಕೈಜೋಡಿಸಿದ WGC ಮತ್ತು GJEPC

ನವದೆಹಲಿ, ಜುಲೈ 12: ವಿಶ್ವ ಚಿನ್ನ ಮಂಡಳಿ ಮತ್ತು ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) 2021 ರಲ್ಲಿ ಭಾರತದಲ್ಲಿ ಚಿನ್ನದ ಆಭರಣ ಖರೀದಿಯನ್ನು ಉತ್ತೇಜಿಸುವ ಅಭಿಯಾನ ನಡೆಸುವ ಒಪ್ಪಂದಕ್ಕೆ ಇಂದು ಸಹಿ ಹಾಕಿವೆ. ಒಪ್ಪಂದದ ಷರತ್ತುಗಳ ಪ್ರಕಾರ, ಎರಡೂ ಪಾಲುದಾರರು ಜಂಟಿಯಾಗಿ ಬಹು-ಮಾಧ್ಯಮ ಮಾರುಕಟ್ಟೆ ಅಭಿಯಾನಕ್ಕೆ ಧನಸಹಾಯ ನೀಡುತ್ತಾರೆ. ಭಾರತೀಯ ವಿಶೇಷವಾಗಿ ಮಿಲೆನಿಯಲ್ಸ್‌ ಮತ್ತು ಝೆಡ್ ಪೀಳಿಗೆಯ ಗ್ರಾಹಕರಲ್ಲಿ ಚಿನ್ನದ ಆಭರಣಗಳ ಪ್ರಸ್ತುತತೆ ಮತ್ತು ಅಳವಡಿಕೆಯನ್ನು ಪರಿಚಯಿಸುತ್ತಾರೆ..

ಕಳೆದ ವರ್ಷ ಬಿಡುಗಡೆಗೊಂಡ ವಿಶ್ವ ಚಿನ್ನ ಮಂಡಳಿಯ "ಚಿಲ್ಲರೆ ಚಿನ್ನದ ಒಳನೋಟಗಳು: ಭಾರತದ ಆಭರಣ" ವರದಿಯಲ್ಲಿ, ಮಹಿಳೆಯರು ಮತ್ತು ಯುವತಿಯರ ನಡುವಿನ ಚಿನ್ನದ ಭವಿಷ್ಯದ ಖರೀದಿ ಹೆಚ್ಚಾಗಬಹುದು ಎಂದು ಉಲ್ಲೇಖಿಸಲಾಗಿದೆ. (2019ರ ಸರ್ವೆ ಪ್ರಕಾರ, 18-24 ವರ್ಷ ವಯಸ್ಸಿನ ಮಹಿಳೆಯರ ಚಿನ್ನದ ಖರೀದಿ ಹೆಚ್ಚಾಗಲಿದೆ). ಚಿನ್ನಾಭರಣಗಳು ಗ್ರಾಹಕರ ಸ್ವಯಂ ಅಭಿವ್ಯಕ್ತಿ ಹಾಗೂ ಘನತೆಯ ಇಚ್ಛೆ ಹೆಚ್ಚಿಸಿದಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈ ಭವಿಷ್ಯ ನಿಜವಾಗಲಿದೆ.

ವಿಶ್ವ ಚಿನ್ನದ ಮಂಡಳಿಯ ಭಾರತದ ಪ್ರಾದೇಶಿಕ ಸಿಇಒ ಸೋಮಸುಂದರಮ್ ಪಿಆರ್ ''ಭಾರತೀಯ ಚಿನ್ನದ ಆಭರಣ ಮಾರುಕಟ್ಟೆಯು ಕರಕುಶಲತೆ ಮತ್ತು ಸೃಜನಶೀಲತೆಯ ಮಿಶ್ರಣವಾಗಿದ್ದು, ಶತಮಾನಗಳಷ್ಟು ಹಳೆಯದಾದ ಉತ್ಪಾದನಾ ಕೌಶಲ್ಯಗಳನ್ನು ಸೂಚಿಸುತ್ತದೆ. ಆದರೆ, ಖರೀದಿ ಹವ್ಯಾಸಗಳು ನಿರಂತರವಾಗಿ ಬದಲಾಗುತ್ತಿವೆ ಮತ್ತು ಅದರ ಪೂರೈಕೆಗೆ ಅನೇಕ ಉತ್ಪನ್ನಗಳ ಮಾರುಕಟ್ಟೆ ಗ್ರಾಹಕರ ಪ್ರವೃತ್ತಿಯ ಪರಿವರ್ತನೆಯನ್ನು ಸೂಚಿಸುತ್ತದೆ. ಭಾರತೀಯ ಸಾಂಪ್ರದಾಯಿಕ ಚಿನ್ನದ ಆಭರಣಗಳು, ಕಿರಿಯರ ಜೀವನದಲ್ಲಿ ಮಹತ್ವ ಕಳೆದುಕೊಂಡಿರಬಹುದು. ಅದನ್ನು ಮತ್ತೊಮ್ಮೆ ಪರಿಚಯಿಸಲು ನಾವು ಜಿಜೆಇಪಿಸಿಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ನಾವು ಒಬ್ಬರ ಜೀವನದಲ್ಲಿ ಚಿನ್ನದ ಬಗ್ಗೆ ಸಾರ್ವತ್ರಿಕ ಸಂದೇಶವನ್ನು ಹೆಚ್ಚಿಸುವ ಅಭಿಯಾನದಲ್ಲಿ ಕೆಲಸ ಮಾಡಲಿದ್ದೇವೆ. ಭಾರತೀಯ ಚಿನ್ನಾಭರಣ ಉದ್ಯಮವನ್ನು ಏಕರೂಪವಾಗಿ ಕಾರ್ಯನಿರ್ವಹಿಸಲು ಉತ್ತೇಜಿಸಬೇಕು ಮತ್ತು ಜಗತ್ತಿಗೆ ಆಭರಣ ವ್ಯಾಪಾರಿಗಳಾಗಿ ಬಲವಾದ ಜಾಗತಿಕ ಪ್ರಭಾವವನ್ನು ಸೃಷ್ಟಿಸಬೇಕಿದೆ'' ಎಂದರು.

WGC and GJEPC enter into strategic partnership for gold marketing in India

ಜಿಜೆಇಪಿಸಿ ಅಧ್ಯಕ್ಷ ಕೋಲಿನ್‌ ಶಾ, ''ಚಿನ್ನದ ಆಭರಣಗಳನ್ನು ಉತ್ತೇಜಿಸುವ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ವಿಶ್ವ ಚಿನ್ನ ಮಂಡಳಿಯೊಂದಿಗೆ (ಡಬ್ಲ್ಯುಜಿಸಿ) ಸಹಯೋಗ ಹೊಂದಲು ಸಂತೋಷವಾಗಿದೆ. ಮಾರುಕಟ್ಟೆಯಲ್ಲಿ ಚಿನ್ನದ ಆಭರಣಗಳ ಬೆಳವಣಿಗೆಯನ್ನು ಹೆಚ್ಚಿಸಲು ಉದ್ಯಮ ನೇತೃತ್ವದ ಉಪಕ್ರಮಕ್ಕಾಗಿ ಸುಸ್ಥಿರ ಮಾದರಿಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ, ಈ ಅಭಿಯಾನ ಮಿಲೆನಿಯಲ್ಸ್‌ ಮತ್ತು ಝೆಡ್‌ ಪೀಳಿಗೆಯ ಗ್ರಾಹಕರನ್ನು ಚಿನ್ನಾಭರಣಗಳತ್ತ ಸೆಳೆಯಲು ನೆರವಾಗಲಿದೆ. ಜಗತ್ತು ವೈಯಕ್ತೀಕರಣ ಮತ್ತು ಸ್ವಯಂ ಅಭಿವ್ಯಕ್ತಿಯ ಯುಗದತ್ತ ಸಾಗುತ್ತಿದ್ದು, ಚಿನ್ನದ ಆಭರಣ ವಿನ್ಯಾಸಗಳು ಅದರ ಜನರ ಅಗತ್ಯವನ್ನು ಪೂರೈಸಬೇಕಿದೆ'' ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+