ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೊಡಾಫೋನ್ ಐಡಿಯಾ 98 ರು ಪ್ರೀಪೇಯ್ಡ್, ಡಬ್ಬಲ್ ಡೇಟಾ

|
Google Oneindia Kannada News

ಬೆಂಗಳೂರು, ಮೇ 24: ಟೆಲಿಕಾಂ ಉದ್ಯಮದಲ್ಲೇ ಮೊದಲ ಬಾರಿಗೆ ತನ್ನ ರೀಟೇಲ್ ಮಳಿಗೆಗಳಲ್ಲಿ ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯವನ್ನು ಪರಿಚಯಿಸಿರುವ ವೊಡಾಫೋನ್ ಇಂಡಿಯಾ ಈಗ ತನ್ನ ಜನಪ್ರಿಯ ಪ್ರೀಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ನೀಡುತ್ತಿದೆ.

ವೊಡಾಫೋನ್ ಐಡಿಯಾ 98 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ Add-on ಯೋಜನೆಯನ್ನು ಪರಿಷ್ಕರಿಸಲಾಗ್ಗಿಪೆ. ಇದರಿಂದ ಗ್ರಾಹಕರಿಗೆ ಹೆಚ್ಚುವರಿ ಇಂಟರ್ನೆಟ್ ಡೇಟಾ ಸಿಗಲಿದೆ. ಗ್ರಾಹಕರು ಈಗ 12ಜಿಬಿ ಡೇಟಾ ಪಡೆಯಬಹುದಾಗಿದೆ. ಇದಕ್ಕೂ ಮುನ್ನ 6ಜಿಬಿ ಡೇಟಾ ಸಿಗುತ್ತಿತ್ತು. ಆದರೆ, ಎಸ್ಎಂಎಸ್, ಕಾಲಿಂಗ್ ಹೆಚ್ಚಿನ ಸೌಲಭ್ಯಕ್ಕೆ ಎಂದಿನ ರೀಚಾರ್ಜ್ ಯೋಜನೆಗಳನ್ನು ಬಳಸಬೇಕಾಗುತ್ತದೆ.

ಸದ್ಯಕ್ಕೆ 98 ರು ಯೋಜನೆಯು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ದೆಹಲಿ, ಮುಂಬೈ ಹಾಗೂ ಉತ್ತರಪ್ರದೇಶ ಪೂರ್ವದಲ್ಲಿ ಮಾತ್ರ ಲಭ್ಯವಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯ ಪರಿಚಯಿಸಿದ ವೋಡಾಫೋನ್ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯ ಪರಿಚಯಿಸಿದ ವೋಡಾಫೋನ್

ವೊಡಾಫೋನ್ ಐಡಿಯಾ ಲಿಮಿಟೆಡ್ ಆದಿತ್ಯಾ ಬಿರ್ಲಾ ಸಮೂಹ ಹಾಗೂ ವೊಡಾಫೋನ್ ಸಮೂಹದ ಪಾಲುದಾರಿಕೆ ಸಂಸ್ಥೆಯಾಗಿದೆ. ಇದು ಭಾರತದ ಅಗ್ರಗಣ್ಯ ದೂರಸಂಪರ್ಕ ಸೇವಾ ಸಂಸ್ಥೆಯಾಗಿದೆ. ಕಂಪನಿಯು ಭಾರತದಾದ್ಯಂತ ಧ್ವನಿ ಹಾಗೂ ಡಾಟಾ ಸೇವೆಯನ್ನು 2ಜಿ, 3ಜಿ ಮತ್ತು 4ಜಿ ಪ್ಲಾಟ್‍ಫಾರಂಗಳಲ್ಲಿ ಒದಗಿಸುತ್ತಿದೆ.

ವೊಡಾಫೋನ್ ಐಡಿಯಾ ಕಡಿಮೆ ಬೆಲೆ ಪ್ಯಾಕ್

ವೊಡಾಫೋನ್ ಐಡಿಯಾ ಕಡಿಮೆ ಬೆಲೆ ಪ್ಯಾಕ್

ವೊಡಾಫೋನ್ ಐಡಿಯಾದ 98 ರುಗಳ add-on ಜೊತೆಗೆ ಅತಿ ಕಡಿಮೆಯ ಪ್ಯಾಕ್ ಎನಿಸಿಕೊಂಡಿರುವ 16ರಗಳ ಪ್ರಿಪೇಯ್ಡ್ ಪ್ಯಾಕ್ ಬಳಸಬಹುದು. 24ಗಂಟೆಗಳ ಈ ಯೋಜನೆಯಲ್ಲಿ 1 ಜಿಬಿ ಡೇಟಾ ಸಿಗಲಿದೆ. 48ರುಗಳ ಯೋಜನೆಯಲ್ಲಿ 3ಜಿಬಿ ಡೇಟಾ 28 ದಿನಗಳ ತನಕ ಪಡೆಯಬಹುದಾಗಿದೆ.

ಇತ್ತೀಚೆಗೆ ದೆಹಲಿ ಟೆಲಿಕಾಂ ಸರ್ಕಲ್ ನಲ್ಲಿ 29ರು ಗಳ ಯೋಜನೆಯನ್ನು ವೊಡಾಫೋನ್ ಪರಿಚಯಿಸಿತ್ತು. 20 ರೂಪಾಯಿ ಟಾಕ್ ಟೈಮ್ ಮತ್ತು ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್‌ ಸೌಲಭ್ಯದ ಜೊತೆಗೆ 100 ಎಂಬಿ ಹೈಸ್ಪೀಡ್ ಡೇಟಾ ಸಿಗಲಿದೆ. 14 ದಿನಗಳ ವ್ಯಾಲಿಡಿಟಿ ಹೊಂದಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳಿಗೆ ಗ್ರಾಹಕರು ಸೆಕೆಂಡಿಗೆ 2.5 ಪೈಸೆ ಪಾವತಿಸಬೇಕಾಗುತ್ತದೆ.

ಎಸ್‍ಎಂಎಸ್ ಮೂಲಕ ರೀಚಾರ್ಜ್

ಎಸ್‍ಎಂಎಸ್ ಮೂಲಕ ರೀಚಾರ್ಜ್

ವೊಡಾಫೋನ್ ಐಡಿಯ ಬಳಕೆದಾರರು ಎಸ್‍ಎಂಎಸ್ ಮೂಲಕ ಈ ಸೇವೆಯನ್ನು ಬಳಸಲು ಲಿಂಕ್ ಪಡೆಯಲಿದ್ದಾರೆ. ವಿಐಸಿ ಅನ್ನು ವಾಟ್ಸ್ ಆ್ಯಪ್ ಮೂಲಕ ಬಳಸಬಹುದು. ಪರ್ಯಾಯವಾಗಿ, ಗ್ರಾಹಕರು ಸರಳವಾಗಿ ಕ್ಲಿಕ್ ಮಾಡಿ ಅಥವಾ ಕೆಳಕಂಡ ಸಂಖ್ಯೆಗಳಿಗೆ ಸಂದೇಶ ಕಳುಹಿಸುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. Vodafone Care - 9654297000 Idea Care - 7065297000 ವಿಐಸಿ ಅನ್ನು ಕೋವಿಡ್-19 ನಿಂದಾಗಿ ಮೂಡಿರುವ ಪರಿಸ್ಥಿತಿಗೆ ಅನುಗುಣವಾಗಿ ಕ್ಷಿಪ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ. ವಿಐಸಿ ಇದನ್ನು ವಿಶೇಷವಾಗಿ ವಿಐಎಲ್‍ಗೆ ಕೃತಕ ಬುದ್ಧಿಮತ್ತೆ, ಎನ್‍ಎಲ್‍ಪಿ, ಆಳವಾದ ಅಧ್ಯಯನ ಹಾಗೂ ತಂತ್ರಜ್ಞಾನ ಆಧರಿಸಿ ರೂಪಿಸಲಾಗಿದೆ. ಇದು ಪರಿಣಾಮಕಾರಿಯಾಗಿದ್ದು, ತ್ವರಿತಗತಿಯಲ್ಲಿ ಸ್ಪಂದಿಸಲಿದ್ದು, ವಿವಿಧ ಸೇವೆಯನ್ನು ಒದಗಿಸಲಿದೆ.

ತ್ತಳೆ ಮತ್ತು ಹಸಿರು ವಲಯಗಳಲ್ಲಿ ರೀಟೈಲ್ ಮಳಿಗೆ

ತ್ತಳೆ ಮತ್ತು ಹಸಿರು ವಲಯಗಳಲ್ಲಿ ರೀಟೈಲ್ ಮಳಿಗೆ

ದೇಶದ ವಿವಿಧೆಡೆ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ರೀಟೈಲ್ ಮಳಿಗೆಗಳು ಆರಂಭವಾಗುತ್ತಿದ್ದು, ವೊಡಾಫೋನ್ ಐಡಿಯಾ, ತನ್ನ ಎಲ್ಲ ಮಳಿಗೆಗಳಲ್ಲಿ ಸಾಮಾಜಿಕ ಅಂತರದ ಶಿಷ್ಟಾಚಾರವನ್ನು ಖಾತರಿಪಡಿಸಲು ಮುಂದಾಗಿದೆ. ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯವನ್ನು ಒದಗಿಸುವ ಸಲುವಾಗಿ ಸ್ಮಾರ್ಟ್ ಕನೆಕ್ಟ್ ಸಾಧನವು ಇದೀಗ ಧ್ವನಿ ಆಧರಿತ ರೀಚಾರ್ಜ್ ಲಕ್ಷಣವನ್ನು ಒಳಗೊಂಡಿರುತ್ತದೆ ಹಾಗೂ ಇದು ಎಲ್ಲ ವೊಡಾಫೋನ್ ಐಡಿಯಾದ ಸ್ವಂತ ಮಳಿಗೆಗಳಲ್ಲಿ ಮತ್ತು ಬಹು ಬ್ರಾಂಡ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ.

ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಧ್ವನಿ ಸಂದೇಶದ ಮೂಲಕ ದಾಖಲಿಸಬೇಕಾಗುತ್ತದೆ ಹಾಗೂ ಇದನ್ನು ಈ ಸಾಧನ ಸೆರೆಹಿಡಿದು ರೀಚಾರ್ಜ್ ಟ್ಯಾಬ್‍ನಲ್ಲಿ ಪ್ರದರ್ಶನಗೊಳ್ಳುತ್ತದೆ. ಇದಾದ ಬಳಿಕ ರೀಚಾರ್ಜ್ ಪಯಣವು ಹಾಲಿ ಇರುವ ಪ್ರಕ್ರಿಯೆಯಂತೆ ಮುಂದುವರಿಯುತ್ತದೆ.

ಧ್ವನಿ ಆಧರಿತ ಸಂಪರ್ಕ ರಹಿತ ರೀಚಾರ್ಜ್

ಧ್ವನಿ ಆಧರಿತ ಸಂಪರ್ಕ ರಹಿತ ರೀಚಾರ್ಜ್

ಹೊಸ ಧ್ವನಿ ಆಧರಿತ ಸಂಪರ್ಕ ರಹಿತ ರೀಚಾರ್ಜ್ ಸೇವೆಯ ಬಗ್ಗೆ ಮಾತನಾಡಿದ ವೊಡಾಫೋನ್ ಐಡಿಯಾದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಂಬರೀಷ್ ಜೈನ್, ''ಗ್ರಾಹಕ ಕೇಂದ್ರಿತ ದೂರಸಂಪರ್ಕ ಸೇವಾ ಸಂಸ್ಥೆಯಾಗಿ, ಆಯಾ ಕಾಲಘಟ್ಟಕ್ಕೆ ಅಗತ್ಯವಾದ ಉತ್ಪನ್ನ ಹಾಗೂ ಸೇವೆಗಳನ್ನು ಪರಿಚಯಿಸುವ ಬದ್ಧತೆ ನಮ್ಮದು. ನಮ್ಮ ಡಿಜಿಟಲ್ ಫಸ್ಟ್ ದೃಷ್ಟಿಕೋನಕ್ಕೆ ಅನುಗುಣವಾಗಿ, ನಮ್ಮ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲೀಕರಿಸಲು ನಾವು ನಿರ್ಧರಿಸಿದ್ದೇವೆ. ಇದು ನಮ್ಮ 300 ದಶಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಅನುಕೂಲಕರ ಹಾಗೂ ದಕ್ಷ ಸೇವೆಯನ್ನು ಒದಗಿಸಲು ಸಾಧ್ಯವಾಗಲಿದೆ. ಉದ್ಯಮದಲ್ಲೇ ಮೊದಲ ಬಾರಿಗೆ ಪರಿಚಯಿಸಲಾಗಿರುವ ಈ ವಿನೂತನ ಧ್ವನಿ ಆಧರಿತ ಸಂಪರ್ಕ ರಹಿತ ರೀಚಾರ್ಜ್ ಸೇವೆಯು ಯಾವುದೇ ಸ್ಪರ್ಶವಿಲ್ಲದೇ ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುರಕ್ಷೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಪ್ರಸ್ತುತ ಎನಿಸಿದೆ'' ಎಂದು ಹೇಳಿದರು.

English summary
Vodafone Idea has revised Rs. 98 add-on prepaid plan. This add-on pack now provides users with a total of 12GB of 4G data for a validity of 28 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X