ಇನ್ಫೋಸಿಸ್ ಸಿಇಒ, ಎಂಡಿ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ
ಬೆಂಗಳೂರು, ಆಗಸ್ಟ್ 18 : ದೈತ್ಯ ಐಟಿ ಸಂಸ್ಥೆ ಇನ್ಫೊಸಿಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹುದ್ದೆಗೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದಾರೆ.
ವಿಶಾಲ್ ಸಿಕ್ಕಾ ರಾಜೀನಾಮೆಯಿಂದಾಗಿ ಮಧ್ಯಂತರ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರವೀಣ್ ರಾವ್ ಅವರನ್ನು ನೇಮಿಸಿಲಾಗಿದೆ ಎಂದು ಇನ್ಫೋಸಿಸ್ ನ ಕಾರ್ಯದರ್ಶಿ ಎಜಿಎಸ್ ಮಣಿಕಾಂತ್ ತಿಳಿಸಿದ್ದಾರೆ.

ಆಗಸ್ಟ್ 18ರಂದು ನಡೆದ ಬೋರ್ಡ್ ಸಭೆಯಲ್ಲಿ ವಿಶಾಲ್ ಸಿಕ್ಕಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ರಿತಿಕಾ ಸೂರಿ ರಾಜೀನಾಮೆಯಿಂದ ತೆರವಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹುದ್ದೆಯನ್ನು ಸಿಕ್ಕಾ ಅವರು ನಿಭಾಯಿಸಲಿದ್ದಾರೆ ಎಂದು ಮಣಿಕಾಂತ್ ಹೇಳಿದ್ದಾರೆ.
2017 ಆಗಸ್ಟ್ 1 ರಂದು ಇನ್ಫೋಸಿಸ್ ನ ಸಿಇಒ ಮತ್ತು ಎಂಡಿಯಾಗಿ ಅಂದಿನ ಸಿಇಒ ಆಗಿದ್ದ ಎಸ್ ಡಿ ಶಿಬುಲಾಲ್ ಅವರಿಂದ ವಿಶಾಲ್ ಸಿಕ್ಕಾ ಅವರು ಅಧಿಕಾರ ಸ್ವೀಕರಿಸಿದ್ದರು.












Click it and Unblock the Notifications