RCB ವಿಡಿಯೋ ಹಂಚಿಕೊಂಡ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್‌ಗೆ ಸಂಕಷ್ಟ!
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಗೆಲುವನ್ನು ಸಂಭ್ರಮಿಸಿದ್ದ ಮದ್ಯ ದೊರೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯಗೆ ಸಂಕಷ್ಟ ಎದುರಾಗಿದೆ. ಆರ್‌ಸಿಬಿ ತಂಡವು ಬರೋಬ್ಬರಿ 17 ವರ್ಷಗಳ ನಂತರ ಮೊದಲ ಬಾರಿ ಕಪ್‌ಗೆದಿದ್ದೆ. ಆದರೆ, ಈ ಕಪ್ ಗೆದ್ದ ಸಂಭ್ರಮದ ಬೆನ್ನಲ್ಲೇ ಕೆಲವೊಂದು ಅನಾಹುತಗಳು ಸಂಭವಿಸಿದ್ದು. ಇದನ್ನು ಆರ್‌ಸಿಬಿ ಅಭಿಮಾನಿಗಳು ಕೆಟ್ಟ ಕಣ್‌ದೃಷ್ಟಿ ಬಿದ್ದಿದೆ ಅಂತ ಹೇಳುತ್ತಿರುವುದೂ ಇದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್‌ನ ನಡುವೆ ನಡೆದ ಪಂದ್ಯವನ್ನು ಎಂಜಾಯ್ ಮಾಡಿದ್ದ ಸಿದ್ಧಾರ್ಥ್ ಮಲ್ಯಗೂ ಇದೀಗ ಸಂಕಷ್ಟ ಎದುರಾಗಿದೆ. ಆರ್‌ಸಿಬಿ ಗೆದ್ದಾಗ ಸಿದ್ಧಾರ್ಥ್ ಮಲ್ಯ ಅವರು ಸಂಭ್ರಮಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಸಂಕಷ್ಟ ಎದುರಾಗಿದೆ.
ಆರ್‌ಸಿಬಿ ತಂಡವನ್ನು ಖರೀದಿ ಮಾಡಿದ್ದೇ ಮದ್ಯ ದೊರೆ ವಿಜಯ್ ಮಲ್ಯ ಅವರು ಆದರೆ ಸಣ್ಣದೊಂದು ವಿಡಿಯೋವನ್ನು ಹಂಚಿಕೊಂಡ ಅವರ ಮಗ ಸಿದ್ಧಾರ್ಥ್ ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅವರೇ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಚೆಗೆ ವಿಜಯ್ ಮಲ್ಯ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿರುವ ವಿಡಯೋ ಸಹ ವೈರಲ್ ಆಗಿದೆ. ಜೂನ್ 3ರಂದು ಪಂಜಾಬ್ ಕಿಂಗ್ಸ್‌ನ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದ ಮೇಲೆ ಸಿದ್ಧಾರ್ಥ್ ಅವರು ಬರೋಬ್ಬರಿ 17 ವರ್ಷಗಳ ನಂತರ ಆರ್‌ಸಿಬಿ ತಂಡ ಕಪ್ ಗೆದ್ದಿದೆ ಎಂದು ಸಂಭ್ರಮಿಸಿದ್ದರು. ಕಣ್ಣೀರು ಹಾಕಿ ಭಾವನಾತ್ಮಕವಾಗಿ ನಮ್ಮ ತಂಡ ಗೆದ್ದಿದೆ ಎಂದಿದ್ದರು. ಇದೇ ಅವರಿಗೆ ಮುಳುವಾಗಿ ಬದಲಾಗಿದೆ.

ಆರ್‌ಸಿಬಿ ತಂಡವನ್ನು ಖರೀದಿ ಮಾಡಿರುವ ತಂಡಕ್ಕೆ ಸಣ್ಣ ಕಾರಣಕ್ಕೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಸಿದ್ಧಾರ್ಥ್ ಅವರೇ ಲೈವ್ ವಿಡಿಯೋದಲ್ಲಿ ಮಾತನಾಡಿದ್ದಾರೆ. ನಾನು ಆರ್‌ಸಿಬಿ ತಂಡ ಗೆದ್ದ ಮೇಲೆ ಸಂಭ್ರಮಿಸಿ ಸಣ್ಣದೊಂದು ವಿಡಿಯೋ ಹಂಚಿಕೊಂಡಿದ್ದೆ. ನಾನು ಆರ್‌ಸಿಬಿ ತಂಡವು ಸುದೀರ್ಘ ವರ್ಷಗಳ ನಂತರ ಗೆದ್ದಿದೆ ಎನ್ನುವ ಪೋಸ್ಟ್ ಮಾಡಿದ್ದೆ. ಅದಕ್ಕೆ ಲಕ್ಷಾಂತರ ಜನ ಲೈಕ್ ಮಾಡಿದ್ದಿರಿ, ಕಮೆಂಟ್, ರೀ ಪೋಸ್ಟ್‌ಗಳನ್ನು ಮಾಡಿ ಸಂಭ್ರಮಿಸಿದ್ದೀರಿ. ನನ್ನ ಭಾವನಾತ್ಮಕ ವಿಡಿಯೋವನ್ನು ನೀವೆಲ್ಲಾರೂ ಸಂಭ್ರಮಿಸಿದ್ದೀರಿ. ಆದರೆ.... ಎಂದು ಅವರು ಮಾತು ಮುಂದುವರಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ನಾನು ಈ ವಿಡಿಯೋವನ್ನು ಹಂಚಿಕೊಂಡಿದ್ದೆ. ಆದರೆ, ಇನ್ಸ್ಟಾಗ್ರಾಮ್ ಈ ವಿಡಿಯೋವನ್ನು ತೆಗೆದು ಹಾಕಿದೆ. ಅಲ್ಲದೇ ಮುಂದಿನ ಕೆಲವು ದಿನಗಳ ವರೆಗೆ ನನ್ನನ್ನು ಇನ್ಸ್ಟಾಗ್ರಾಮ್ ಬ್ಲಾಕ್ ಮಾಡಲಾಗಿದೆ. ಯಾವ ಕಾರಣಕ್ಕೆ ಈ ಬೆಳವಣಿಗೆ ನಡೆದಿದೆ ಎನ್ನುವುದು ನನಗೆ ತಡವಾಗಿ ಗೊತ್ತಾಯ್ತು. ಐಪಿಎಲ್ ದೂರು ನೀಡಿದೆ. ಅದರ ಪ್ರಕಾರ ನಾನು Copyright ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿದ್ದೇನೆ ಎಂದು ಆರೋಪಿಸಲಾಗಿದೆ ಎಂದು ಸಿದ್ಧಾರ್ಥ್ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಇದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ನಾನು ಯಾವುದೇ ಕಾಪಿರೈಟ್ಸ್ ಬ್ರೇಕ್ ಮಾಡಿಲ್ಲ. ನಾನು ಹಂಚಿಕೊಂಡ ವಿಡಿಯೋ ಒಂದು ನಿಮಿಷಕ್ಕಿಂತಲೂ ಕಡಿಮೆ ಇದೆ. ಓಕೆ ನಾನು ಹಂಚಿಕೊಂಡ ವಿಡಿಯೋದಲ್ಲಿ ಬ್ರ್ಯಾಕ್‌ಗ್ರೋಂಡ್ ಸ್ಕ್ರೀನ್‌ನಲ್ಲಿ ಮ್ಯಾಚ್ ವಿಡಿಯೋ ಇದೆ (ಮ್ಯಾಚ್‌ನ ವಿನ್ನಿಂಗ್ ಕ್ಷಣಗಳು) ಆದರೆ, ನಾನು ಹಂಚಿಕೊಂಡ ವಿಡಿಯೋ ನನಗೆ ಸಂಬಂಧಿಸಿದ್ದು. ಅದರಲ್ಲಿ ನಾನು ನನ್ನ ಎಮೋಷನ್ ಹಂಚಿಕೊಂಡಿದ್ದೇನೆ. ಅವರು ನನ್ನ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೇ ಆರ್‌ಸಿಬಿ ಅಭಿಮಾನಿಗಳು ನನ್ನೊಂದಿಗೆ ಕನೆಕ್ಟ್ ಆಗಿದ್ದ ಹಾಗೂ ಮಾತುಕತೆ ನಡೆಸುವುದಕ್ಕೂ ತಡೆಯೊಡ್ಡಿದ್ದಾರೆ. ಇದು ನನಗೆ ನಿಜಕ್ಕೂ ಶಾಕ್ ಆಗಿದೆ. ಅಭಿಮಾನಿಗಳು ಎಲ್ಲರೂ 18 ವರ್ಷದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ನಾನು ಅದರಲ್ಲಿ ಭಾಗಿಯಾಗಿದ್ದೆ ಆದರೆ ಐಪಿಎಲ್ ನಡೆಯು ನನಗೆ ಆಘಾತವನ್ನುಂಟು ಮಾಡಿದೆ ಅಂತ ಅವರು ಹೇಳಿದ್ದಾರೆ.
Sidharth Mallya's emotional celebration video of RCB winning the cup was removed from Instagram due to a copyright strike by JioStar 😭
— Sree Harsha (@AapathBandhava) June 9, 2025
Get ready for some epic lafda between Mallya and Ambani 💀🍿 pic.twitter.com/IynUzeo57i
ವಿಡಿಯೋ ವೈರಲ್: ಇನ್ನು ಸಿದ್ಧಾರ್ಥ್ ಅವರು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಿಯೋಸ್ಟಾರ್‌ನ ಹಕ್ಕುಸ್ವಾಮ್ಯ ಸ್ಟ್ರೈಕ್‌ನಿಂದಾಗಿ ಆರ್‌ಸಿಬಿ ಕಪ್ ಗೆದ್ದ ಸಂದರ್ಭದಲ್ಲಿ ಸಿದ್ಧಾರ್ಥ್ ಮಲ್ಯ ಅವರ ಭಾವನಾತ್ಮಕ ಸಂಭ್ರಮಾಚರಣೆಯ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಿಂದ ತೆಗೆದುಹಾಕಲಾಗಿದೆ 😭 ಮಲ್ಯಾ ಮತ್ತು ಅಂಬಾನಿ ನಡುವಿನ ಕೆಲವು ಪೈಪೋಟಿ ಅಥವಾ ವೈಮನಸ್ಸು ಮೂಡುವುದಕ್ಕೆ ಇದು ಕಾರಣವಾಗಬಹುದು ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿ ಅಭಿಮಾನಿಗಳ ಬೇಸರ: ಇನ್ನು ಈ ವಿಡಿಯೋ ನೋಡಿರುವ ಆರ್‌ಸಿಬಿಯ ಕೆಲವು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಐಷಾರಾಮಿ ಜೀವನ ನಡೆಸಿದ ವಿಜಯ್ ಮಲ್ಯ ಕುಟುಂಬಕ್ಕೆ ಈ ರೀತಿಯ ಸಂಕಷ್ಟ ಬರಬಾರದಾಗಿತ್ತು ಅಂತ ಹೇಳುತ್ತಿದ್ದಾರೆ. ಇದೀಗ ನನ್ನ ಹಳೆಯ ವಿಡಿಯೋ ಡಿಲೀಟ್ ಆಗಿದೆ. ನೀವೆಲ್ಲರೂ ಎಲ್ಲಿ ಆ ವಿಡಿಯೋ ಅಂತ ಕೇಳುತ್ತಿದ್ದೀರಿ ಅದಕ್ಕೋಸ್ಕರ ಈ ವಿಡಿಯೋ ಮಾಡಿದೆ ಅಂತ ವೈರಲ್ ವಿಡಿಯೋದಲ್ಲಿ ಸಿದ್ಧಾರ್ಥ್ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications