ಮಲ್ಯ ಅವರ ನೆಚ್ಚಿನ ಜೆಟ್ ವಿಮಾನ ಮಾರಾಟ

Recommended Video

      ಮಲ್ಯ ಅವರ ನೆಚ್ಚಿನ ಜೆಟ್ ವಿಮಾನ ಮಾರಾಟ | Oneindia Kannada

      ಬೆಂಗಳೂರು, ಜುಲೈ 01: ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ನೆಚ್ಚಿನ ಜೆಟ್ ವಿಮಾನವನ್ನು ಕೊನೆಗೂ ಹರಾಜು ಹಾಕಲಾಗಿದೆ. ಆದರೆ, ವಿಮಾನಕ್ಕೆ 35 ಕೋಟಿ ರು ಮಾತ್ರ ಲಭಿಸಿದೆ.

      ಅಮೆರಿಕ ಮೂಲದ ಏವಿಯೇಷನ್ ಮ್ಯಾನೇಜ್ಮೆಂಟ್ ಸೇಲ್ಸ್ ಎಎಲ್ ಸಿ 35 ಕೋಟಿ ರು ಗೆ ಐಷಾರಾಮಿ ಜೆಟ್ ವಿಮಾನವನ್ನು ಖರೀದಿಸಿದೆ. ಏರ್ ಬಸ್ ಎ 319-133 ಸಿ ವಿವಿ ವಿಜೆಎಂ ಎಂಎಸ್ಎನ್ 2650 ಜೆಟ್ ಹರಾಜು ಹಾಕಲಾಗಿದೆ.

      ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಸೇವಾ ತೆರಿಗೆ ಇಲಾಖೆಗೆ ನೀಡಬೇಕಾಗಿದ್ದ ತೆರಿಗೆ ಬಾಕಿ ವಸೂಲಿಗಾಗಿ ಈ ಜೆಟ್ ವಿಮಾನವನ್ನು ಹರಾಜು ಹಾಕಲಾಗಿದೆ.

      Vijay Mallya’s luxury jet finally gets sold for paltry Rs 35 crore

      ಮಲ್ಯ ಅವರಿಗೆ ಸೇರಿದ್ದ ಈ ಐಷಾರಾಮಿ ಜೆಟ್ ನಲ್ಲಿ 25 ಪ್ರಯಾಣಿಕರು, 6 ಸಿಬ್ಬಂದಿ ಪ್ರಯಾಣಿಸಬಹುದಾಗಿತ್ತು.ಬೆಡ್ ರೂಮ್, ಬಾತ್ ರೂಮ್, ಬಾರ್ ಹಾಗೂ ಕಾನ್ಫರೆನ್ಸ್ ಏರಿಯಾ ಸೇರಿದಂತೆ ಹಲವು ಸೌಲಭ್ಯಗಳಿತ್ತು.

      ಈ ಹಿಂದೆ ಮಲ್ಯರಿಂದ ಜಪ್ತಿ ಮಾಡಿದ ವಿಮಾನವನ್ನು ಮುಂಬೈನ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಟರ್ಮಿನಲ್ ಪಾರ್ಕ್ ಮಾಡಲಾಗಿತ್ತು. ವಿಮಾನ ಪಾರ್ಕಿಂಗ್ ಮಾಡಿದ್ದರಿಂದ ಗಂಟೆಗೆ 15,000ರು ನಷ್ಟವಾಗುತ್ತಿದೆ ಎಂದು ಇತರೆ ಏರ್ ಪೋರ್ಟ್ ಆಪರೇಟರ್ ಗಳು ಬಾಂಬೆ ಹೈಕೋರ್ಟ್ ಗೆ ತಿಳಿಸಿದ್ದರು. ನಂತರ ಹೈಕೋರ್ಟ್ ಆದೇಶದಂತೆ ಬೆಂಗಳೂರಿಗೆ ಜೆಟ್ ವಿಮಾನವನ್ನು ತಂದು ಹರಾಜು ಹಾಕಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+