ಯುಎಸ್‌ಎಲ್‌ಗೆ ಬೈ ಹೇಳಿ ಇಂಗ್ಲೆಂಡ್ ವಿಮಾನ ಏರಿದ ಮಲ್ಯ

Subscribe to Oneindia Kannada

ಬೆಂಗಳೂರು, ಫೆಬ್ರವರಿ, 26: ಮೈತುಂಬಾ ಸಾಲ ಮಾಡಿಕೊಂಡಿರುವ ವಿಜಯ್ ಮಲ್ಯ ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯ ನಿರ್ವಹಣೇತರ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಮಕ್ಕಳೊಂದಿಗೆ ಇಂಗ್ಲೆಂಡಿನಲ್ಲಿ ವಾಸ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.['ಅರವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!']

ಮದ್ಯ ತಯಾರಿಕೆಯ ಜಾಗತಿಕ ದೈತ್ಯ ಸಂಸ್ಥೆ ಡಿಯಾಜಿಯೊದೊಂದಿಗೆ ಯುನೈಟೆಡ್ ಸ್ಪಿರಿಟ್ಸ್ ನ ಒಪ್ಪಂದಕ್ಕೆ ಬಂದಿತ್ತು. ಆದರೆ ಈಗ ಮಲ್ಯರೇ ಸ್ಥಾನ ತ್ಯಜಿಸಿರುವುದರಿಂದ ಆ ಒಪ್ಪಂದಗಳಿಗೆ ಅರ್ಥವಿಲ್ಲದಂತೆ ಆಗಿದೆ. ಆದರೆ ಮಲ್ಯಗೆ ಸುಮಾರು 515 ಕೋಟಿ ರು. ಪರಿಹಾರ ಸಿಗಲಿದೆ. ಇದರ ಜತೆಗೆ ಮಲ್ಯ ಯುನೈಟೆಡ್ ಸ್ಪಿರಿಟ್ಸ್ ನ ವಿಶ್ರಾಂತ ಸಂಸ್ಥಾಪಕರಾಗಿ ಮುಂದುವರೆಯಲಿದ್ದಾರೆ.[ಸಾಲ ತುಂಬದ ಮಲ್ಯರ ಮುಂಬೈ ಮನೆ ಹರಾಜು?]

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ 17 ಬ್ಯಾಂಕ್‌ಗಳು ಒಕ್ಕೂಟ ರಚಿಸಿ ಮಲ್ಯರ 6,963 ಕೋಟಿ ರೂ. ಸಾಲ ಹಿಂಪಡೆಯಲು ಕಾನೂನು ಕ್ರಮಕ್ಕೆ ಮುಂದಾಗಿವೆ. ಆರಂಭಿಕವಾಗಿ ನಾಲ್ಕು ಬ್ಯಾಂಕ್‌ಗಳು ಮಲ್ಯರ ಆಸ್ತಿ ಹರಾಜು ಹಾಕಲು ಹಕ್ಕು ಮಂಡನೆಗೆ ಮುಂದಾಗಿದ್ದವು. ಮಲ್ಯರ ಮುಂಬೈನ ಬಂಗಲೆಯನ್ನು ಹರಾಜು ಹಾಕಲು ತೀರ್ಮಾನ ತೆಗೆದುಕೊಂಡಿದ್ದರು.[ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ]

ಕಳೆದ ವರ್ಷವೇ ಡಿಯಾಜಿಯೊ ಕೇಳಿತ್ತು

ಕಳೆದ ವರ್ಷವೇ ಡಿಯಾಜಿಯೊ ಕೇಳಿತ್ತು

ಯುಬಿ ಗ್ರೂಪ್‌ನ ಅಂಗಸಂಸ್ಥೆಗಳು ಮತ್ತು ವಿಮಾನ ಯಾನ ಸಂಸ್ಥೆ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆ ಯುನೈಟೆಡ್‌ ಸ್ಪಿರಿಟ್‌ನ ನಿಧಿಗಳನ್ನು ವರ್ಗಾವಣೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಹುದ್ದೆ ತೊರೆಯಲು ಡಿಯಾಜಿಯೊ ಕಳೆದ ವರ್ಷವೇ ಮಲ್ಯ ಅವರನ್ನು ಕೇಳಿಕೊಂಡಿತ್ತು. ಈ ಬೇಡಿಕೆಯನ್ನು ಮಲ್ಯ ಅವರು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.

ಉದ್ದೇಶ ಪೂರ್ವಕ ಸುಸ್ತಿದಾರ

ಉದ್ದೇಶ ಪೂರ್ವಕ ಸುಸ್ತಿದಾರ

ಸಾಲ ಮರುಪಾವತಿ ಮಾಡದ ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಆಸ್ತಿ ಹರಾಜಿನ ಸಂಕಷ್ಟ ಎದುರಾಗಿದ್ದು ವಿವಿಧ ಬ್ಯಾಂಕ್ ಗಳು ಅವರನ್ನು ‘ಉದ್ದೇಶ ಪೂರ್ವಕ ಸುಸ್ತಿದಾರ' ಎಂದು ಘೋಷಣೆ ಮಾಡಿವೆ.

ರಾಯಲ್ ಚಾಲೆಂಜರ್ಸ್ ಬಿಡದ ಮಲ್ಯ

ರಾಯಲ್ ಚಾಲೆಂಜರ್ಸ್ ಬಿಡದ ಮಲ್ಯ

ಐಪಿಎಲ್ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ಒಡೆತನದಿಂದ ಮಲ್ಯ ಹಿಂದೆ ಸರಿದಿಲ್ಲ. ಬೆಂಗಳೂರು ತಂಡದ ಪ್ರಾಯೋಜಕತ್ವದ ಹೊಣೆಯನ್ನು ಮಲ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ

ಯಾವ ಯಾವ ಬ್ಯಾಂಕ್ ಗಳಲ್ಲಿ ಸಾಲ?

ಯಾವ ಯಾವ ಬ್ಯಾಂಕ್ ಗಳಲ್ಲಿ ಸಾಲ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಮತ್ತು ಐಡಿಬಿಐಯಲ್ಲಿ ತಲಾ 800 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಇಂಡಿಯಾ 650 ಕೋಟಿ, ಬ್ಯಾಂಕ್ ಆಫ್ ಬರೋಡ 550 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 410 ಕೋಟಿ, ಯುಕೋ ಬ್ಯಾಂಕ್ 320 ಕೋಟಿ, ಕಾರ್ಪೊರೇಷನ್ ಬ್ಯಾಂಕ್ 310 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 150 ಕೋಟಿ ಸೇರಿದಂತೆ ವಿವಿಧೆಡೆ ಮಲ್ಯ ಸುಸ್ತಿದಾರರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a sweetheart deal, flamboyant businessman Vijay Mallya on Thursday, Feb 25, quit as Chairman of United Spirits after its new majority owner Diageo agreed to pay Rs 515 crore and absolve him of all liabilities over alleged financial lapses at the company founded by his family. Mallya, who along with his group firms is fighting 'wilful defaulter' tags given by various lenders in relation to loans taken by long-defunct Kingfisher Airlines, said he would now "spend more time in England" closer to his children.
Please Wait while comments are loading...