ಉದ್ಯಮಿ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಅಮಾನತು

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 15: ಉದ್ಯಮಿ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಅಮಾನತುಗೊಂಡಿದೆ. ಮನಿ ಲಾಂಡ್ರಿಂಗ್ ಹಾಗೂ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿತ್ತು.

ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಜಾರಿ ನಿರ್ದೇಶನಾಲಯ ಬುಧವಾರ ಮನವಿ ಸಲ್ಲಿಸಿತ್ತು.

ಸುಮಾರು 9 ಸಾವಿರ ಕೋಟಿ ರು.ಗೂ ಅಧಿಕ ಸಾಲ ಹೊತ್ತುಕೊಂಡಿರುವ ಮಲ್ಯ ಅವರಿಗೆ ಈಗ ಐಡಿಬಿಐ ಬ್ಯಾಂಕಿನ 900 ಕೋಟಿ ರು ಸಾಲ ವಂಚನೆ ಮುಳುವಾಗುವ ಲಕ್ಷಣಗಳು ಕಂಡು ಬಂದಿದೆ. [ವಿಜಯ್ ಮಲ್ಯ ಭಾರತದಲ್ಲಿಲ್ಲ, ಲಂಡನ್ನಿಗೆ ಪರಾರಿ!]

ಈ ಹಿಂದೆ ಅನೇಕ ಬಾರಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್, ನೋಟಿಸುಗಳು ಜಾರಿಯಾದರೂ ಮಲ್ಯ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲು ಆಗಿರಲಿಲ್ಲ. ಸದ್ಯ ವಿದೇಶದಲ್ಲಿರುವ ಮಲ್ಯ ಅವರ ಸಂಪರ್ಕ ಕೂಡಾ ಸಾಧ್ಯವಾಗಿರಲಿಲ್ಲ, ಆದರೆ, ಈ ಬಾರಿ ವಿದೇಶಾಂಗ ಸಚಿವಾಲಯ ಬಯಸಿದರೆ ತಕ್ಷಣವೇ ವಿದೇಶದಲ್ಲಿರುವ ಮಲ್ಯರನ್ನು ಭಾರತಕ್ಕೆ ಕರೆಸಿಕೊಳ್ಳಬಹುದಾಗಿದೆ.

Vijay Mallya's diplomatic passport had been suspended

ಹಿನ್ನಲೆ: ಪಾಸ್ ಪೋರ್ಟ್ ಕಾಯ್ದೆ 1967ರಂತೆ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ಸೂಚನೆ ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. [ವಿಜಯ್ ಮಲ್ಯ ವಿರುದ್ಧ ಅರೆಸ್ಟ್ ವಾರೆಂಟ್ ಗೆ ಕೋರಿಕೆ]

ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10 (3) ಇ ಅನ್ವಯ ಪ್ರಯಾಣಿಕರೊಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೆ, ಅವರ ಪಾಸ್ ಪೋರ್ಟ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಏರ್ ಪೋರ್ಟ್ ನ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.

ಉದ್ಯಮಿ ವಿಜಯ್ ಮಲ್ಯ ಅವರು ಯಾವುದೇ ಕಾರಣಕ್ಕೂ ದೇಶ ಬಿಡಬಾರರು ಅವರ ಪಾಸ್ ಪೋರ್ಟ್ ಜಪ್ತಿ ಮಾಡಬೇಕು ಎಂದು ಎಸ್ಬಿಐ ನೇತೃತ್ವ ಸಾಲ ವಸೂಲಾತಿ ನ್ಯಾಯಾಧಿಕರಣ (DRT) ಮಂಗಳವಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vijay Mallya's diplomatic passport had been suspended following a request by the Enforcement Directorate.The passport issuing authority in the ministry for external affairs suspended Mallya's passport with immediate effect for a period of four weeks under Section 10 A of the Passports Act of 1967.
Please Wait while comments are loading...