ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯ, ಲೇಟೆಸ್ಟ್ ಆಗಿ ರಾಜೀನಾಮೆ ನೀಡಿದ ಕಂಪನಿ ಯಾವುದು?

By Mahesh
|
Google Oneindia Kannada News

ನವದೆಹಲಿ, ಜೂನ್ 21 : ಜರ್ಮನಿ ಮೂಲದ ಫಾರ್ಮಾ ಸಂಸ್ಥೆ ಬಾಯರ್ ಕ್ರಾಪ್ ಸೈನ್ ಚೇರ್ಮನ್ ಹುದ್ದೆಗೆ ಉದ್ಯಮಿ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ. ಈ ವಿಷಯವನ್ನು ಬಾಯರ್ ಸಂಸ್ಥೆ ಮಂಗಳವಾರ ಪ್ರಕಟಿಸಿದೆ.

ಜೂನ್ 30, 2016ರಿಂದ ಅನ್ವಯವಾಗುವಂತೆ ಮಲ್ಯ ಅವರ ಸ್ವಯಂಪ್ರೇರಿತ ರಾಜೀನಾಮೆಯನ್ನು ಒಪ್ಪಿಕೊಳ್ಳಲಾಗಿದೆ. ಸಂಸ್ಥೆಯ ಚೇರ್ಮನ್ ಹುದ್ದೆಗೆ ಹೊಸಬರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

Vijay Mallya resigns as Bayer CropScience chairman

2004ರಲ್ಲಿ ಬೋರ್ಡ್ ಆಫ್ ಡೈರೆಕ್ಟರ್ ಮತ್ತು ಚೇರ್ಮನ್ ಸ್ಥಾನಕ್ಕೆ ವಿಜಯ್ ಮಲ್ಯ ನೇಮಕವಾಗಿದ್ದರು. ಬಹುಕೋಟಿ ಮನಿ ಲಾಂಡ್ರಿಂಗ್, ಸಾಲ ಪಡೆದು ಉದ್ದೇಶಪೂರ್ವಕ ಸುಸ್ತಿದಾರ ಆಗಿರುವ ವಿಜಯ್ ಮಲ್ಯ ಅವರು ಭಾರತ ತೊರೆದು ಲಂಡನ್ನಿನಲ್ಲಿ ನೆಲೆಸಿದ್ದಾರೆ.

ಬಾಯರ್ ಕ್ರಾಪ್ ಸೈನ್ಸ್ ಸಂಸ್ಥೆ ಆರೋಗ್ಯ ಮತ್ತು ಕೃಷಿ ವಿಜ್ಞಾನ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಸಂಸ್ಥೆಯಾಗಿದೆ. 2015ರ ಆರ್ಥಿಕ ವರ್ಷದಲ್ಲಿ ಈ ಜಾಗತಿಕ ಸಂಸ್ಥೆ ಸುಮಾರು 1,17,000 ಉದ್ಯೋಗಿಗಳನ್ನು ಹೊಂದಿದ್ದು, 46 ಬಿಲಿಯನ್ ಯುರೋ ವಹಿವಾಟು ನಡೆಸಿದೆ.(ಐಎಎನ್ಎಸ್)

English summary
Liquor baron Vijay Mallya resigned as chairman of Bayer CropScience Ltd, the Indian subsidiary of the German pharma major Bayer AG on Tuesday(June 21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X