ತೆರಿಗೆ ತಪ್ಪಿಸಿದ್ದಲ್ಲಿ ಸರಿಪಡಿಸಿಕೊಳ್ಳಲು ಇಲ್ಲಿದೆ ದಾರಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ಕ್ಲಿಯರ್ ಟ್ಯಾಕ್ಸ್.ಕಾಮ್ ನ ಸಹಾಯವಾಣಿಗೆ ಬರುತ್ತಿರುವ ಕರೆಗಳ ಲೆಕ್ಕ ಇಡುವುದೇ ಕಷ್ಟವಾಗಿದೆ. ನವೆಂಬರ್ 9ರಿಂದ ಅರಂಭವಾಗಿರುವ ಈ ಕರೆಗಳಿಗೆ ಕಾರಣವಾಗಿರುವುದು 500, 1000 ರುಪಾಯಿ ನೋಟುಗಳ ರದ್ದು ಸುದ್ದಿ. 'ತೆರಿಗೆ ಕಟ್ಟದ ನಗದು ಹಣವನ್ನು ಹೇಗೆ ಘೋಷಿಸಬಹುದು' ಎಂಬುದೇ ಬಹುತೇಕರ ಪ್ರಶ್ನೆ ಎನ್ನುತ್ತಾರೆ ಈ ಪೋರ್ಟಲ್ ನ ಸ್ಥಾಪಕರು ಹಾಗೂ ಸಿಇಒ ಆದ ಅರ್ಚಿತ್ ಗುಪ್ತಾ.

ಆದಾಯ ತೆರಿಗೆ ಕಟ್ಟಲು ಸಹಾಯ ಮಾಡುವ ವೃತ್ತಿಪರರು ಮಾತೂ ಅದೇ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರು ಹೆದರುವ ಯಾವ ಅಗತ್ಯವೂ ಇಲ್ಲ. 'ನಿಮ್ಮ ಹತ್ತಿರ 500, 1000 ರುಪಾಯಿ ನೋಟುಗಳಿದ್ದಲ್ಲಿ ಹೆದರುವ ಅಗತ್ಯ ಇಲ್ಲ. ಅದರ ಮೂಲವನ್ನು ವಿವರಿಸಿದರೆ ಸಾಕು' ಎನ್ನುತ್ತಾರೆ ತೆರಿಗೆ ಹಾಗೂ ಬಂಡವಾಳ ಹೂಡಿಕೆ ತಜ್ಞರು.[ಹಣ ವಿನಿಮಯಕ್ಕೆ ಗುರುತಿನ ಚೀಟಿ ತೋರಿಸಿದರೆ ಸಾಕು]

ನೀವು ಬ್ಯಾಂಕ್ ಗೆ ಹೋಗಿ ಹಣ ಕಟ್ಟುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ನಿಮ್ಮ ಆದಾಯ ತೆರಿಗೆ ಘೋಷಣೆಗೂ ಜಮೆ ಮಾಡುವ ಹಣಕ್ಕೂ ತಾಳೆ ಅಗಲಿಲ್ಲ ಅಂದರೆ ಮಾತ್ರ ಆದಾಯ ತೆರಿಗೆ ವಿಚಾರ ಬರುತ್ತದೆ. '2.5 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತ ಜಮೆ ಮಾಡಿದಾಗ, ಅವರ ಆದಾಯ ಘೋಷಣೆಯಲ್ಲಿ ವ್ಯತ್ಯಾಸ ಬಂದಾಗಷ್ಟೇ ತೆರಿಗೆ ತಪ್ಪಿಸಿದ ಪ್ರಕರಣವಾಗಿ ಪರಿಗಣಿಸ್ತೀವಿ' ಎಂದಿದ್ದಾರೆ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ.

'ಕಳೆದ ಸೆಪ್ಟೆಂಬರ್ 30ರವರೆಗೆ ಆದಾಯ ಘೋಷಣೆಗೆ ಅವಕಾಶ ನೀಡಲಾಗಿತ್ತು. ಆಗ ಘೋಷಿಸಿಕೊಂಡವರು ಶೇ 45ರಷ್ಟು ತೆರಿಗೆ ಕಟ್ಟಿದರು ಮತ್ತು ಅವರನ್ನು ಯಾವ ಪ್ರಶ್ನೆಯೂ ಕೇಳಲಿಲ್ಲ. ಈಗ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಜತೆಗೆ ಹೆಚ್ಚಿನ ತೆರಿಗೆ ಕಟ್ಟಬೇಕು. ಯಾವುದೇ ಕೇಸುಗಳನನ್ನು ಹಾಕಲ್ಲ ಎಂಬ ಖಾತ್ರಿಯೂ ಇಲ್ಲ' ಎಂದು ತಜ್ಞರೊಬ್ಬರು ಅಭಿಪ್ರಾಯ ಪಡುತ್ತಾರೆ.[ಕೋಟಿಗಟ್ಟಲೆ ಹಣ ಬ್ಯಾಂಕ್ ಗೆ ಕಟ್ಟಿ, ತೆರಿಗೆ ಪಾವತಿಸಿ ಸಾಕು!]

ಸದ್ಯಕ್ಕಂತೂ ಚಾರ್ಟರ್ಡ್ ಅಕೌಂಟೆಂಟ್ಸ್, ಟ್ಯಾಕ್ಸ್ ಕನ್ಸಲ್ಟೆಂಟ್ಸ್ ಗೆ ಬಹಳ ಬೇಡಿಕೆ ಇದೆ. ಕಡಿಮೆ ತೆರಿಗೆ ಮೂಲಕ ಹಣವನ್ನು ಹೇಗೆ ನ್ಯಾಯಬದ್ಧವಾಗಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಸಲಹೆ ಕೊಡ್ತಿದ್ದಾರೆ. ಅದಕ್ಕಾಗಿ ಶೇ 5ರಿಂದ ಶೇ 25ರವರೆಗೆ ಫೀ ಕೂಡ ಪಡೆಯುತ್ತಿದ್ದಾರೆ. ಅವರ ಸಲಹೆಗಳ ಪೈಕಿ ಪ್ರಮುಖವಾದವು ಹೀಗಿವೆ.

ಹೆಂಡತಿಯ ಉಳಿತಾಯ

ಹೆಂಡತಿಯ ಉಳಿತಾಯ

ತಿಂಗಳಲ್ಲಿ ಮನೆಗೆ ಆಗುವ ಖರ್ಚಿನಲ್ಲಿ ಹೆಂಡತಿ ಉಳಿಸಿರುವ ದುಡ್ಡು ಅಂತ ತೋರಿಸಬಹುದು. ಗೃಹಿಣಿ ಕೂಡ ತಮ್ಮ ತಿಂಗಳ ಪಾಕೆಟ್ ಮನಿಯ ಉಳಿತಾಯ ಎಂದು ತೋರಿಸಬಹುದು. ಆದರೆ ಅದು ತಿಂಗಳ ಅದಾಯ ಹಾಗೂ ಖರ್ಚಿನ ಅಂತರವನ್ನು ದೃಢಪಡಿಸಬೇಕು. ಉದಾಹರಣೆಗೆ ತೆರಿಗೆದಾರನ ಆದಾಯ 80 ಸಾವಿರ ಅಂದುಕೊಳ್ಳಿ. ಮನೆ ಖರ್ಚು 40 ಸಾವಿರ ಆದರೆ, ಅತನ ಪತ್ನಿ ತಿಂಗಳಿಗೆ ಎಂಟರಿಂದ ಹತ್ತು ಸಾವಿರ ಉಳಿಸಬಹುದು.

ಆದರೆ ಇಂಥ ಸನ್ನಿವೇಶದಲ್ಲಿ ಮನೆ ಖರ್ಚಿನ ಬಜೆಟ್ ಗಿಂತ ಉಳಿತಾಯದ ಮೊತ್ತ ಶೇ 20-25ರಷ್ಟಾಗಿದ್ದರೆ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಶ್ನೆ ಮಾಡಬಹುದು.

ಮನೆಪಾಠ, ಅಡುಗೆ ತರಗತಿಗಳ ಅದಾಯ

ಮನೆಪಾಠ, ಅಡುಗೆ ತರಗತಿಗಳ ಅದಾಯ

ಮನೆಪಾಠ, ಅಡುಗೆ ತರಗತಿಗಳು ಗೃಹಿಣಿಯರಿಗೆ ಹಾಗೂ ಕಾಲೇಜು ಯುವತಿಯರಿಗೆ ಸಂಪಾದನೆಗೆ ಉತ್ತಮ ಮಾರ್ಗಗಳು. ಇದರಲ್ಲಿನ ಆದಾಯ 2.5 ಲಕ್ಷ ದಾಟಿದ್ದರೆ ಎರಡು ವರ್ಷದ್ದು(2014-15, 2015-16) ತೆರಿಗೆ ಒಟ್ಟಿಗೆ ಕಟ್ಟಲು ಇದು ಒಳ್ಳೆ ಸಮಯ. ತಡವಾಗಿರೋದಿಕ್ಕೆ ತೆರಿಗೆ ಕಟ್ಟಬೇಕಾದ ಮೊತ್ತಕ್ಕೆ ಶೇ 1ರ ಬಡ್ಡಿದರದಲ್ಲಿ ದಂಡ ಹಾಕ್ತಾರೆ ಅಷ್ಟೇ.

ಒಂದು ವೇಳೆ ಈ ಮೊತ್ತ ತುಂಬ ಜಾಸ್ತಿಯಾದರೆ ತೆರಿಗೆ ಇಲಾಖೆಯಿಂದ ವಿದ್ಯಾರ್ಥಿಗಳ ಹೆಸರನ್ನು ಕೇಳಬಹುದು. ಇನ್ನೂ ಅನುಮಾನಗಳಿದ್ದರೆ ತೆರಿಗೆದಾರರ ದಿನಚರಿಯನ್ನು ಗಮನಿಸಬಹುದು.

ಸಂಬಂಧಿಕರು ಕೊಟ್ಟ ಗಿಫ್ಟ್

ಸಂಬಂಧಿಕರು ಕೊಟ್ಟ ಗಿಫ್ಟ್

ಸಂಬಂಧಿಕರಿಂದ ನಗದು ಕೊಡುಗೆಯಾಗಿ ಬಂದಿದೆ ಅಂತ ತೋರಿಸಬಹುದು. ಕೆಲವು ನಗದು ಕೊಡುಗೆಗಳನ್ನು ನಿರ್ದಿಷ್ಟ ಸಂಬಂಧಿಕರಿಂದ ಪ್ರಾಪ್ತ ವಯಸ್ಕರೊಬ್ಬರು ಪಡೆದರೆ ಅದು ತೆರಿಗೆ ವ್ಯಾಪ್ತಿಗೆ ಬರೋದಿಲ್ಲ. ಯಾವುದಾದರೂ ಕುಟುಂಬಕ್ಕೆ ತಿಂಗಳಿಗೆ ಒಂದು ಲಕ್ಷ ಆದಾಯ ಇದ್ದರೆ ವರ್ಷದಲ್ಲಿ ನಲವತ್ತರಿಂದ ಐವತ್ತು ಸಾವಿರ ನಗದು ಕೊಡುಗೆ ಪಡೆಯಬಹುದು.

ಒಂದು ವೇಳೆ ನಗದು ಕೊಡುಗೆಯ ಮಿತಿಯನ್ನು ಮೀರಿದರೆ ಅದನ್ನು ಕೊಟ್ಟ ಸಂಬಂಧಿಕರ ಹೆಸರನ್ನು ಆದಾಯ ತೆರಿಗೆ ಇಲಾಖೆಯವರು ಕೇಳಬಹುದು.

ಮದುವೆ ಮತ್ತಿತರ ಸಮಾರಂಭದ ಕೊಡುಗೆ

ಮದುವೆ ಮತ್ತಿತರ ಸಮಾರಂಭದ ಕೊಡುಗೆ

ಈ ವರ್ಷ ಮದುವೆಯದವರು ಹಾಗೂ ಮಕ್ಕಳ ಕಾರ್ಯಕ್ರಮಗಳನ್ನು ಮಾಡಿದವರು ಈ ಸನ್ನಿವೇಶದಲ್ಲಿ ಅದೃಷ್ಟವಂತರು. ಅವರು ನಗದನ್ನು ತಮಗೆ ಮದುವೆ ಸಂದರ್ಭದಲ್ಲಿ ಬಂದಿದ್ದು ಎಂದು ತೋರಿಸಬಹುದು. ಆದರೆ ಈ ಕೊಡುಗೆ ಮೊತ್ತ ನಂಬುವಂತಿರಬೇಕು ಹಾಗೂ ಆ ಕುಟುಂಬದ ಆರ್ಥಿಕ ಸ್ಥಿತಿಗೆ ಹೊಂದಾಣಿಕೆಯಾಗಬೇಕು. ಇದೊಂಥರ ಎರಡು ಅಲುಗಿನ ಕತ್ತಿ. ಮದುವೆ ಅದ್ಧೂರಿಯಾಗಿ ಆಗಿದೆ, ತುಂಬ ನಗದು ಕೊಡುಗೆಯಾಗಿ ಬಂದಿದೆ ಅಂತ ತೋರಿಸಿಕೊಂಡರೆ ಮದುವೆಗೆ ಮಾಡಿದ ಖರ್ಚಿನ ಲೆಕ್ಕ ಕೇಳಬಹುದು.

ಒಂದು ವೇಳೆ ನಗದು ಮೊತ್ತ ವಿಪರೀತ ಹೆಚ್ಚಾದರೆ, ಕೊಡುಗೆ ನೀಡಿದವರ ಹೆಸರು, ಅವರ ಆದಾಯ ಮೂಲವನ್ನು ಸಹ ಕೇಳಬಹುದು.

ನೌಕರರಿಗೆ ನೀಡುವ ಸಾಲ ಹಾಗೂ ಮುಂಗಡ

ನೌಕರರಿಗೆ ನೀಡುವ ಸಾಲ ಹಾಗೂ ಮುಂಗಡ

ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಮತ್ತು ವೇತನದಾರರು ಮುಂಗಡ ವೇತನವಾಗಿ ನಗದನ್ನು ನೌಕರರಿಗೆ ಮತ್ತು ಮಾರಾಟಗಾರರಿಗೂ ಮುಂಗಡ ಹಣ ನೀಡಬಹುದು. ಈ ವಿಚಾರದಲ್ಲಿ ಯಾವುದೇ ಮಿತಿಯಿಲ್ಲ, ಆದರೆ ಅನುಮಾನ ಬರುವಷ್ಟು ಇರಬಾರದು. ಹಣ ಪಡೆದವರು ಸಂಕಷ್ಟಕ್ಕೆ ಸಿಲುಕುವಂತಾಗಬಾರದು.

ಈ ಸನ್ನಿವೇಶದಲ್ಲಿ ಒಟ್ಟಿಗೆ ಎರಡು-ಮೂರು ತಿಂಗಳು ವೇತನವನ್ನು ಕೊಡುವುದರಿಂದ ನೌಕರರು ಬೇರೆ ಕಡೆ ಕೆಲಸ ನೋಡಿಕೊಂಡು ಹೋಗಿಬಿಡಬಹುದು. ಸರಿಯಾದ ಕಾಗದ ಪತ್ರ ಇಟ್ಟುಕೊಂಡು ಸಾಲ ಕೊಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The tax helpline of Cleartax.com hasn’t stopped ringing since the morning of 9 November when Indians woke up to demonetisation of Rs 500 and Rs 1,000 notes. People are calling up to know how they can declare the cash they hold without incurring a tax liability.
Please Wait while comments are loading...