ಯುಪಿಐ ದಾಖಲೆ: ಜನವರಿಯಲ್ಲಿ 4.3 ಲಕ್ಷ ಕೋಟಿ ರೂಪಾಯಿ ವಹಿವಾಟು
ನವದೆಹಲಿ, ಫೆಬ್ರವರಿ 03: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಜನವರಿಯಲ್ಲಿ ಯುಪಿಐ ಪಾವತಿ ಬರೋಬ್ಬರಿ 4.31 ಲಕ್ಷ ಕೋಟಿ ಮೌಲ್ಯದ್ದಾಗಿದ್ದು , ದಾಖಲೆಯ 2.3 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಯುಪಿಐ ವಹಿವಾಟು ಮೊದಲ ಬಾರಿಗೆ ಒಂದು ತಿಂಗಳಲ್ಲಿ 4 ಲಕ್ಷ ಕೋಟಿ ರೂಪಾಯಿ ರೂ. ದಾಟಿತ್ತು. ಇದೀಗ ಜನವರಿಯಲ್ಲಿ ಯುಪಿಐ ದಾಖಲೆಯ ವಹಿವಾಟು ನಡೆದಿದ್ದು, 4.31 ಲಕ್ಷ ಕೋಟಿ ಮೌಲ್ಯದ್ದಾಗಿದೆ.
ಇದು ಡಿಸೆಂಬರ್‌ನಿಂದ ಯುಪಿಐಗೆ ಶೇಕಡಾ 3ರಷ್ಟು ಹೆಚ್ಚಳವಾಗಿದ್ದು, ಶೇಕಡಾ 3.6ರಷ್ಟು ಏರಿಕೆಯಾಗಿದೆ. ಇದು 2.23 ಬಿಲಿಯನ್ ವಹಿವಾಟುಗಳನ್ನು 4,16,176.21 ಕೋಟಿ ಅಥವಾ 4.16 ಟ್ರಿಲಿಯನ್ ರೂ.ನಷ್ಟಿದೆ.

ಫೋನ್‌ಪೇ ಮತ್ತು ಗೂಗಲ್ ಪೇ ಒಟ್ಟಾಗಿ ಯುಪಿಐ ವಹಿವಾಟು ವ್ಯವಸ್ಥೆಯಲ್ಲಿ ಶೇಕಡಾ 80ರಷ್ಟು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತಿವೆ. ಉಳಿದಂತೆ ಪೇಟಿಎಂ, ಅಮೆಜಾನ್ ಪೇ, ಭೀಮ್ ಇತರೆ ಯುಪಿಐ ಆ್ಯಪ್‌ಗಳು ಉಳಿದ ಮಾರುಕಟ್ಟೆ ಪಾಲನ್ನು ಹೊಂದಿದೆ.
ನವೆಂಬರ್ ಆರಂಭದಲ್ಲಿ ಹೆಚ್ಚಿನ ಬಳಕೆದಾರರಿಗಾಗಿ ಯುಪಿಐ ಆಧಾರಿತ ಪಾವತಿ ವೈಶಿಷ್ಟ್ಯವನ್ನು ಹೊರತರಲು ವಾಟ್ಸಾಪ್‌ಗೆ ಎನ್‌ಪಿಸಿಐ ಅವಕಾಶ ನೀಡಿತ್ತು. ಆದಾಗ್ಯೂ, ಆರಂಭಿಕ ಎರಡು ತಿಂಗಳಲ್ಲಿ ಫೇಸ್‌ಬುಕ್ ಒಡೆತನದ ತ್ವರಿತ ಮೆಸೆಂಜರ್ ನಿರೀಕ್ಷಿತ ವೇಗವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಎನ್‌ಪಿಸಿಐ ಅಂಕಿಅಂಶಗಳ ಪ್ರಕಾರ, ವಾಟ್ಸಾಪ್ ಡಿಸೆಂಬರ್‌ನಲ್ಲಿ 29.72 ಕೋಟಿ ರೂ. ಮೌಲ್ಯದ 0.81 ಮಿಲಿಯನ್ ವಹಿವಾಟುಗಳನ್ನು ಮತ್ತು ಹಿಂದಿನ ತಿಂಗಳಲ್ಲಿ 13.87 ಕೋಟಿ ರೂ. ಸಾಧಿಸಿದೆ.












Click it and Unblock the Notifications