ಯುಬಿಯಿಂದ ವಿಭಿನ್ನ ರುಚಿಯ ಕಿಂಗ್ ಫಿಷರ್ ಸ್ಟಾರ್ಮ್ ಬಿಯರ್

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 12: ಯುನೈಟೆಡ್ ಬ್ರಿವರೀಸ್ ನಿಂದ ಕಿಂಗ್ ಫಿಷರ್ ಸ್ಟಾರ್ಮ್ ಬಿಯರ್ ಬಿಡುಗಡೆಯ ಘೋಷಣೆ ಮಾಡಿದೆ. ಈ ಬಿಯರ್ ನೀಲಿ ಬಾಟಲಿಯಲ್ಲಿ ಬರಲಿದೆ. 650 ಮಿ.ಲೀ ಹಾಗೂ 500 ಮಿ.ಲೀಯ ಬಿಯರ್ ಬಿಡುಗಡೆ ಮಾಡಲಾಗಿದೆ. ಈ ಬಿಯರ್ ನ ಟ್ಯಾಗ್ ಲೈನ್ 'ಸ್ವಾಗ್ ಮೇರಾ ಸ್ಟೈಲ್' ಎಂದು ಕೊಡಲಾಗಿದೆ. ಸದ್ಯಕ್ಕೆ ಕರ್ನಾಟಕ ಹಾಗೂ ಪಶ್ಚಿಮ ಬಂಗಾಲದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇನ್ನು ಕೆಲ ತಿಂಗಳಲ್ಲಿ ದೇಶದಾದ್ಯಂತ ಲಭ್ಯವಾಗಲಿದೆ. ಬಿಯರ್ ಪ್ರಿಯರಿಗಾಗಿ ವಿಭಿನ್ನ ರುಚಿಯನ್ನು ಒದಗಿಸುವ ಉದ್ದೇಶದಿಂದ ಸ್ಟಾರ್ಮ್ ಪರಿಚಯಿಸಲಾಗುತ್ತಿದೆ. ಯುನೈಟೆಡ್ ಬ್ರಿವರೀಸ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸಮರ್ ಸಿಂಗ್ ಶೆಖಾವತ್ ಬಿಡುಗಡೆಯ ವೇಳೆ ಮಾತನಾಡಿದರು.[ಬಿಯರ್ ಬಾಟಲಿ ಮೇಲೆ ಗಣೇಶನ ಚಿತ್ರ, ಯುಎಸ್ ಕಂಪನಿ ಮೇಲೆ ಎಫ್ ಐ ಆರ್]

United Breweries launches Kingfisher STORM

ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪೆನಿಯು ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ. ತುಂಬ ವಿಶಿಷ್ಟವಾದ ಪ್ರೀಮಿಯಂ ಸ್ಟ್ರಾಂಗ್ ಬಿಯರ್ ರೂಪಿಸಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಿಯರ್ ಗಲ ಪೈಕಿ ಕಿಂಗ್ ಫಿಷರ್ ಸ್ಟಾರ್ಮ್ ಅತ್ಯುತ್ತಮವಾದದ್ದು ಎಂದು ಶೆಖಾವತ್ ಹೇಳಿದ್ದಾರೆ.[ಬಿಯರ್ ಕುಡುಕರ ಆಸೆಗೆ ಮೋದಿ ತಣ್ಣೀರೆರಚಿದ ಪ್ರಸಂಗ!]

ಅಂದಹಾಗೆ, ಬೆಲೆ ಎಷ್ಟು ಗೊತ್ತಾಯ್ತಾ? ಕರ್ನಾಟಕದಲ್ಲಿ 650 ಮಿ.ಲೀಗೆ 135 ರು., 500 ಮಿ.ಲೀಗೆ ರು. 100, ಇನ್ನು ಪಶ್ಚಿಮ ಬಂಗಾಲದಲ್ಲಿ 650 ಮಿ.ಲೀಗೆ 120 ರು., 500 ಮಿ.ಲೀಗೆ ರು. 95.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
United Breweries Limited announced the launch of Kingfisher STORM, a new premium strong beer. Kingfisher STORM is made from the finest imported malts and hops which have a distinctive taste. An easy to drink smooth beer, it is set to cater to beer lovers from across the country.
Please Wait while comments are loading...