Union Budget: ರಸಗೊಬ್ಬರ ಮೇಲಿನ ಸಬ್ಸಿಡಿ ಕಡಿತ, ಶೇಕಡಾ 4.47ರಷ್ಟು ವೆಚ್ಚ ಇಳಿಕೆ
ಕೇಂದ್ರ ಸರ್ಕಾರ ಇಂದು ಬಜೆಟ್ ಮಂಡನೆ ಮಾಡಿದ್ದು, 2026-27ನೇ ಸಾಲಿನ ಬಜೆಟ್ ಮಂಡನೆ ಆಗಿದೆ. ಸತತ 9ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಅವರೇ ಬಜೆಟ್ ಮಂಡನೆ ಮಾಡಿದ್ದಾರೆ ಎಂಬುದು ವಿಶೇಷ. ಹೀಗಿದ್ದಾಗ ಹಲವು ವಿಚಾರಗಳಲ್ಲಿ ದೊಡ್ಡ ದೊಡ್ಡ ಬದಲಾವಣೆ ತಂದಿದೆ ಕೇಂದ್ರ ಸರ್ಕಾರ, ಪ್ರಮುಖವಾಗಿ ರಸಗೊಬ್ಬರ ಮೇಲಿನ ಸಬ್ಸಿಡಿ ಕಡಿತಕ್ಕೆ ಕೂಡ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹಾಗಾದರೆ ಯಾವೆಲ್ಲಾ ವಲಯದ ಮೇಲಿನ ಸಬ್ಸಿಡಿ ಕಡಿತವಾಗಿದೆ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.
ಅನ್ನದಾತ ರೈತರು ದೇಶದ ಬೆನ್ನೆಲುಬು ಎಂಬ ಬಿರುದು ಪಡೆದಿದ್ದು, ರೈತರು ಇಲ್ಲದೆ ಭಾರತದ ಅಭಿವೃದ್ಧಿ ಅಸಾಧ್ಯ ಎಂಬುದು ಇದರ ಅರ್ಥ. ದೇಶದ ಆರ್ಥಿಕತೆಗೆ ಮೊದಲಿನಿಂದ ಕೂಡ ಇದೇ ಕೃಷಿ ವಲಯ ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಹೀಗಿದ್ದಾಗ ದೇಶದಲ್ಲಿ ರೈತರ ಆದಾಯವು ಕೂಡ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಾ ಬಂದಿದ್ದು, ಸರ್ಕಾರ ಹಲವು ಕ್ರಮ ಜರುಗಿಸುತ್ತಿದೆ. ಇದೇ ರೀತಿ ಕೇಂದ್ರ ಬಜೆಟ್ 2026 ಕೂಡ ರೈತರಿಗೆ ಭರ್ಜರಿ ಸುದ್ದಿ ನೀಡಿದ್ದು, ರೈತರ ಆದಾಯ ಏರಿಕೆಗೆ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ರಸಗೊಬ್ಬರದ ಮೇಲಿನ ಸಬ್ಸಿಡಿ ಕೂಡ ಕಡಿತ ಮಾಡಲಾಗಿದೆ.

ಸಬ್ಸಿಡಿ ವೆಚ್ಚ ಇಳಿಕೆ ಮಾಡಲು ನಿರ್ಧಾರ
ಅಂದಹಾಗೆ 2026-27ರ ಆರ್ಥಿಕ ವರ್ಷದಲ್ಲಿ ಆಹಾರ, ರಸಗೊಬ್ಬರ ಮತ್ತು ಇಂಧನ ವಲಯದಲ್ಲಿ ಈಗ ಸಬ್ಸಿಡಿ ವೆಚ್ಚವನ್ನು ಶೇಕಡಾ 4.47ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಸರ್ಕಾರಕ್ಕೆ ಸಬ್ಸಿಡಿ ವೆಚ್ಚ 4,10,495 ಕೋಟಿ ರೂಪಾಯಿಗೆ ತಲುಪುತ್ತೆ ಎಂದು ಅಂದಾಜಿಸಲಾಗಿದೆ. 2025-26 ಆರ್ಥಿಕ ವರ್ಷದಲ್ಲಿ ಈ ಸಬ್ಸಿಡಿ ಮೌಲ್ಯವು 4,29,735 ಕೋಟಿ ಆಗಿತ್ತು, ಆದರೆ ಇದೀಗ ಸಬ್ಸಿಡಿ ವೆಚ್ಚವನ್ನು ಶೇಕಡಾ 4.47ರಷ್ಟು ಕಡಿಮೆ ಮಾಡಲು ನಿರ್ಧರಿಸಿರುವ ಹಿನ್ನೆಲೆ ಸಬ್ಸಿಡಿ ವೆಚ್ಚ 4,10,495 ಕೋಟಿ ರೂಪಾಯಿಗೆ ಇಳಿಕೆ ಆಗಿದೆ.
500 ಜಲಾಶಯಗಳ ಅಭಿವೃದ್ಧಿಗೆ ಕ್ರಮ
ದೇಶದಲ್ಲಿ ನೀರಾವರಿ ವ್ಯಸ್ಥೆಯನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಅಗತ್ಯ ಇರುವ ಕಡೆಗಳಲ್ಲಿ ಹೊಸ ಹೊಸ ಡ್ಯಾಂ ಅಥವಾ ಜಲಾಶಯ ನಿರ್ಮಾಣ ಮಾಡುವುದು ಅನಿವಾರ್ಯ. ನೀರಾವರಿ ಅಭಿವೃದ್ಧಿ ಮಾಡಿದರೆ ಕೃಷಿ ಕ್ಷೇತ್ರದಲ್ಲಿ ಕೂಡ ಅಭಿವೃದ್ಧಿ ಆಗುತ್ತದೆ. ಇದೇ ಕಾರಣಕ್ಕೆ ಕೇಂದ್ರವು ಈಗ ಭಾರತದಲ್ಲಿ ಸುಮಾರು 500 ಜಲಾಶಯಗಳನ್ನು ಅಭಿವೃದ್ಧಿಪಡಿಸಲು ಮಹತ್ವದ ಕ್ರಮವನ್ನು ಕೈಗೊಂಡಿದೆ. ಇದು ಮಾತ್ರವಲ್ಲದೆ ನೀರಾವರಿ ಅಭಿವೃದ್ಧಿಗಾಗಿ ಬೇಕಿರುವ ಇನ್ನಷ್ಟು ಕ್ರಮಗಳನ್ನ ಕೂಡ ಜಾರಿಗೆ ತರಲು ಯೋಜನೆ ಸಿದ್ಧಪಡಿಸಲಾಗಿದೆ.
ಒಟ್ನಲ್ಲಿ ಕೃಷಿ ಕ್ಷೇತ್ರದಲ್ಲಿ ಹಲವು ಬಹುಮುಖ್ಯ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಪ್ರಮುಖವಾಗಿ ರೈತರ ಆದಾಯ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮತ್ತೊಂದು ಕಡೆ ಕೃಷಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ, ಮಾರುಕಟ್ಟೆ ಅಭಿವೃದ್ಧಿ ಕಡೆಗೆ ಕೂಡ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ 2026-27ನೇ ಸಾಲಿನ ಕೇಂದ್ರ ಬಜೆಟ್ ಸಾಕಷ್ಟು ಗಮನ ಸೆಳೆದಿದೆ.












Click it and Unblock the Notifications