Get Updates
Get notified of breaking news, exclusive insights, and must-see stories!

ಸಂಬಳದಾರರ ತಲೆಗೆ ಹುಳ ಬಿಟ್ಟ ನಿರ್ಮಲಾ ತೆರಿಗೆ ಲೆಕ್ಕಾಚಾರ!

Recommended Video

      Union Budget 2020 : ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ಕೊಡುತ್ತಿರೋದು ಯಾಕೆ ಗೊತ್ತಾ..?

      ನವದೆಹಲಿ, ಫೆಬ್ರವರಿ 01: ಮಧ್ಯಮ ವರ್ಗದ ಕೈಲಿಗೆ ಹೆಚ್ಚಿನ ನಗದು ಸೇರಲಿದ್ದು, ಇದರಿಂದ ವ್ಯಾಪಾರ, ವಹಿವಾಟು, ಖರೀದಿ ಪ್ರಕ್ರಿಯೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂಬ ಎಣಿಕೆಯೂ ಸುಳ್ಳಾಗಿದೆ. ಆದಾಯ ತೆರಿಗೆ ಸ್ಲ್ಯಾಬ್ ಪುನರ್ ರಚನೆ ಮಾಡಲಾಗಿದೆ. ಹೀಗೆ ಮಧ್ಯಮ ವರ್ಗದ ಸಂಬಳದಾರರ ಆದಾಯ ತೆರಿಗೆ ಲೆಕ್ಕಾಚಾರ ಗೊಂದಲವಾಗಿದ್ದು, ತಲೆಗೆ ಹುಳ ಬಿಟ್ಟಂಗಾಗಿದೆ.

      ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಲಕ್ಷ ರು ತನಕ ವಾರ್ಷಿಕ ಆದಾಯವಿರುವ ಸಂಬಳದಾರರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಇದಲ್ಲದೆ, ಹೊಸ ದರದಲ್ಲಿ ತೆರಿಗೆ ಪಾವತಿಸುವಾಗ ಸುಮಾರು 70 ರಿಯಾಯಿತಿಗಳು ಮಾಯವಾಗಲಿದೆ. ಹೊಸ ದರ ಪದ್ಧತಿ ಬಳಸಿ ಐಟಿ ರಿಟರ್ನ್ಸ್ ಮಾಡಬೇಕಾದರೆ ನಿಮ್ಮ ಜೊತೆಗೆ ಲೆಕ್ಕ ಪರಿಶೋಧಕರೊಬ್ಬರು ಇದ್ದರೆ ಒಳ್ಳೆಯದು. ಇಲ್ಲವೇ, ಹಳೆ ಮಾದರಿಯಲ್ಲಿ ರಿಯಾಯಿತಿಯೊಂದಿಗೆ ರಿಟರ್ನ್ಸ್ ಫೈಲ್ ಮಾಡಬಹುದು.

      ವೇತನದಾರ ವರ್ಗಗಳ ಬೇಡಿಕೆಯನ್ನು ಪರಿಗಣಿಸಿರುವ ಮೋದಿ ಸರ್ಕಾರ ಹಾಲಿ 5 ಲಕ್ಷ ರುಗಳ ಮಿತಿ ಬದಲಾಗಿ 7 ಲಕ್ಷ ರು ಗಳ ತನಕ ಆದಾಯ ತೆರಿಗೆ ಅಗತ್ಯವಿಲ್ಲ ಎಂಬ ಸುದ್ದಿಗೆ ಕಾದಿದ್ದವರಿಗೆ ನಿರಾಶೆಯಾಗಿದೆ.

      Union Budget 2020: As per the new regime, 70 tax exemptions will be removed

      ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿತ್ತು. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸಿಲ್ಲ.

      ಏನೆಲ್ಲ ರಿಯಾಯಿತಿ ಸಿಗುತ್ತಿತ್ತು?:
      ಹಳೆ ತೆರಿಗೆ ಪದ್ಧತಿಯಲ್ಲಿ ವಿಮೆ, ಹೂಡಿಕೆ, ಮನೆ ಬಾಡಿಗೆ, ವೈದ್ಯಕೀಯ, ಮಕ್ಕಳ ಶಾಲಾ ಶುಲ್ಕದಂಥ ಒಟ್ಟು 100 ರಿಯಾಯಿತಿಗಳನ್ನು ನೀಡಲಾಗಿತ್ತು. ಇದರಲ್ಲಿ 70 ರಿಯಾಯಿತಿಗಳನ್ನು ರದ್ದುಪಡಿಸಲಾಗಿದೆ. ಆದರೆ, ತೆರಿಗೆದಾರರಿಗೆ ಹಾಲಿ ಆದಾಯ ತೆರಿಗೆ ಮಾದರಿ ಅಥವಾ ಹೊಸ ಆದಾಯ ತೆರಿಗೆ ದರವನ್ನು ಆಯ್ಕೆ ಮಾಡಬಹುದು.

      ಹಳೆಯ ಮಾದರಿಯಲ್ಲಿ ಆದಾಯ ತೆರಿಗೆಯನ್ನು ಪಾವತಿಸಿದರೆ, ತೆರಿಗೆಗೆ ಒಳಪಡುವ ಆದಾಯದಲ್ಲಿ ಲಭ್ಯವಿರುವ ಎಲ್ಲಾ ರಿಯಾಯಿತಿಗಳ ಲಾಭ ಸಿಗಲಿದೆ. ಹೊಸ ಮಾದರಿಯಲ್ಲಿ ತೆರಿಗೆ ಪಾವತಿಸಬೇಕಾದರೆ, ಎಲ್ಲಾ ರಿಯಾಯಿತಿಗಳು ಮಾಯವಾಗಲಿದೆ. ವಿಮೆ, ಸಣ್ಣ ಉಳಿತಾಯ ಯೋಜನೆಗಳ ಮೇಲೆ ಇದು ಪರಿಣಾಮ ಬೀರಲಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ರೀತಿಯ ತೆರಿಗೆ ಕಡಿತ, ರಿಯಾಯಿತಿಗಳನ್ನು ಕಡಿಮೆ ಮಾಡುವತ್ತ ಸರ್ಕಾರ ಹೆಜ್ಜೆ ಇರಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+