ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ : ಶ್ರೀಸಾಮಾನ್ಯನಿಗೆ ತಟ್ಟಲಿದೆಯಾ ತೆರಿಗೆ ಬಿಸಿ?

|
Google Oneindia Kannada News

ದೇಶದ ಆರ್ಥಿಕ ನೀತಿಗಳಲ್ಲಿ ಬದಲಾವಣೆ ಹೆಚ್ಚು ಹೆಚ್ಚು ಆದಂತೆ ಬಜೆಟ್ ನ ಹೊರಗಿರುವಂಥ ಅಂಶಗಳೇ ಹೆಚ್ಚಾಗಿವೆ. ಪ್ರತಿ ವರ್ಷದ ತಾಲೀಮಾದ ಬಜೆಟ್ ನ ಪ್ರಾಮುಖ್ಯತೆಯೇ ಅಷ್ಟರ ಮಟ್ಟಿಗೆ ಕಡಿಮೆ ಆಗಿದೆ. ಇನ್ನು ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಪರಿಚಯ ಆದ ಮೇಲಂತೂ ಪರಿಸ್ಥಿತಿ ಇನ್ನೂ ಬದಲಾಗಿದೆ.

ಅಬಕಾರಿ ಸುಂಕ, ವ್ಯಾಟ್ ಇಂಥ ಹಲವು ಪರೋಕ್ಷ ತೆರಿಗೆಗಳು ಜಿಎಸ್ ಟಿಯಲ್ಲಿ ಸೇರಿಹೋಗಿವೆ. ಆದ್ದರಿಂದಲೇ ಬಜೆಟ್ ನ ವ್ಯಾಪ್ತಿಯೊಳಗಿಂದ ಆಚೆ ಹೋಗಿವೆ. ಆದರೂ ಸರಕಾರ ಯಾವಾಗಲೂ ಬದಲಾವಣೆ ಅಂತ ಕೈ ಹಾಕುವುದು ನೇರ ತೆರಿಗೆ ಮತ್ತು ಆಮದು ಸುಂಕಕ್ಕೆ. ನಿಜವಾದ ಆತಂಕ ಇರುವುದು ಅಲ್ಲೇ.

ಚಿತ್ರಗಳಲ್ಲಿ : ಜೇಟ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳುಚಿತ್ರಗಳಲ್ಲಿ : ಜೇಟ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು

ಇನ್ನು ಅನಿಶ್ಚಿತತೆಯಲ್ಲಿ ತುಯ್ದಾಡುತ್ತಿರುವ ಜಿಎಸ್ ಟಿ ಕೂಡ ಒಂದಿಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ತಿಂಗಳು ಜಿಎಸ್ ಟಿ ಸಂಗ್ರಹದಲ್ಲಿ ಇಳಿಕೆ ಆಗುತ್ತಾ ಹೋಗಿದ್ದರಿಂದ ಆದಾಯ ಹೆಚ್ಚಳದ ದಿಸೆಯಲ್ಲಿ ಸರಕಾರ ಕೆಲವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಗ್ರಾಂಟ್ ಥ್ರೋಂಟಾನ್ ನಿರ್ದೇಶಕ ಅಖಿಲ್ ಚಂದ್ರ ಎಚ್ಚರಿಸುತ್ತಾರೆ.

ಷೇರುಗಳ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ತೆರಿಗೆ

ಷೇರುಗಳ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ತೆರಿಗೆ

ಷೇರುಗಳ ಮೇಲಿನ ದೀರ್ಘಾವಧಿ ಹೂಡಿಕೆಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ತೆರಿಗೆ ಹಾಕಲು ಸರಕಾರ ಚಿಂತಿಸುವುದಕ್ಕೆ ಕೆಲ ಕಾರಣಗಳಿವೆ. ಲಿಸ್ಟೆಡ್ ಮತ್ತು ಅನ್ ಲಿಸ್ಟೆಡ್ ಷೇರುಗಳಿವೆ. ಅದರಲ್ಲಿ ಲಿಸ್ಟೆಡ್ ಷೇರುಗಳು ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಪಡೆದಿವೆ. ಆದರೆ ಲಿಸ್ಟ್ ಆಗದ ಷೇರುಗಳಿಗೆ ತೆರಿಗೆ ಇದೆ.

ಷೇರು ವ್ಯವಹಾರ ಮಾಡುವ ಬ್ರೋಕರ್ ಗಳು ಹಾಗೂ ವ್ಯವಹಾರಸ್ಥರ ಲಾಭವನ್ನು ವ್ಯವಹಾರದ ಆದಾಯ ಎಂದು ಪರಿಗಣಿಸಿ ಸ್ವಲ್ಪ ಪ್ರಮಾಣದ ತೆರಿಗೆ ಹಾಕಲಾಗುತ್ತಿದೆ. ಇತರ ಆದಾಯವನ್ನು ಲಾಂಗ್ ಕ್ಯಾಪಿಟಲ್ ಗೇಯ್ನ್ಸ್ ಅಂತ ಕರೆಯುವುದಕ್ಕೆ ಮೂರು ವರ್ಷ ಎಂಬ ಕಾಲ ಮಿತಿ ಇದೆ. ಇದೇ ಮಿತಿಯನ್ನು ಷೇರುಗಳಿಗೂ ಅನ್ವಯಿಸುವ ಸಾಧ್ಯತೆ ಇದೆ.

ಹೀಗೆ ಮಾಡುವುದರ ಅರ್ಥ ಹಾಗೂ ಪರಿಣಾಮ ಏನು?

ಹೀಗೆ ಮಾಡುವುದರ ಅರ್ಥ ಹಾಗೂ ಪರಿಣಾಮ ಏನು?

ಹೀಗೆ ಮಾಡುವುದರಿಂದ ನಿಮ್ಮ ತೆರಿಗೆ ಜವಾಬ್ದಾರಿ ಹೆಚ್ಚುತ್ತದೆ. ಇದರಿಂದ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಆಗುತ್ತದೆ. ವಿದೇಶಿ ಹೂಡಿಕೆದಾರರಿಗೆ ಒಂದಿಷ್ಟು ಹೊಡೆತ ಕೊಡುತ್ತದೆ. ಹಲವು ದೇಶಗಳಲ್ಲಿ ಕ್ಯಾಪಿಟಲ್ ಗೇಯ್ನ್ಸ್ ಮೇಲೆ ತೆರಿಗೆ ಇಲ್ಲ. ಹಾಗಾದರೆ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹಣ ಹೂಡುವುದಿಲ್ಲ ಎನ್ನುತ್ತಾರೆ ತಜ್ಞರು. ಒಂದು ವೇಳೆ ತೆರಿಗೆ ಹಾಕಲೇಬೇಕು ಎಂದಾದರೆ ಶೇ ಐದಕ್ಕಿಂತ ಹೆಚ್ಚಿಗೆ ಹಾಕಬಾರದು ಎಂಬುದು ಕೂಡ ತಜ್ಞರದೇ ಅಭಿಪ್ರಾಯ.

ಸೆಕ್ಯೂರಿಟಿ ಟ್ರ್ಯಾನ್ಸಾಕ್ಷನ್ ಟ್ಯಾಕ್ಸ್ (ಎಸ್ ಟಿಟಿ)ನಲ್ಲಿ ಹೆಚ್ಚಳ

ಸೆಕ್ಯೂರಿಟಿ ಟ್ರ್ಯಾನ್ಸಾಕ್ಷನ್ ಟ್ಯಾಕ್ಸ್ (ಎಸ್ ಟಿಟಿ)ನಲ್ಲಿ ಹೆಚ್ಚಳ

ಲಾಂಗ್ ಕ್ಯಾಪಿಟಲ್ ಗೇಯ್ನ್ಸ್ ವಿದೇಶಿ ಹೂಡಿಕೆದಾರರನ್ನು ಆತಂಕಕ್ಕೆ ದೂಡಿದರೆ, ಎಸ್ ಟಿಟಿ ಏರಿಕೆ ಮೂಲಕ ಆದಾಯ ಮೂಲ ಪಡೆಯಲು ಸರಕಾರ ಮುಂದಾಗಬಹುದು. ಹೀಗೆ ಮಾಡುವುದರಿಂದ ಮತ್ತೊಂದು ಅನುಕೂಲವೂ ಇದೆ. ಬಿಎಸ್ ಇ ಹಾಗೂ ಎನ್ ಎಸ್ ಇ ಯಿಂದಲೇ ತೆರಿಗೆ ಕಡಿತ ಮಾಡಿ, ಸರಕಾರಕ್ಕೆ ಸಲ್ಲಿಸಬಹುದು. ಆಗ ಸರಕಾರಕ್ಕೆ ಹೂಡಿಕೆದಾರರ ಬೆನ್ನಟ್ಟುವ ಅಗತ್ಯವಿಲ್ಲ.

ಹೀಗೆ ಮಾಡುವುದರಿಂದ ಹೂಡಿಕೆದಾರರ ಮೇಲೆ ಏನು ಪರಿಣಾಮ?

ಹೀಗೆ ಮಾಡುವುದರಿಂದ ಹೂಡಿಕೆದಾರರ ಮೇಲೆ ಏನು ಪರಿಣಾಮ?

ಸದ್ಯಕ್ಕೆ ಇರುವ ಎಸ್ ಟಿಟಿ ವಿಪರೀತ ಕಡಿಮೆ (0.1%. ಅದು ಕೂಡ ಡೆಲಿವೆರಿ ಆಧಾರಿತ ವ್ಯವಹಾರಗಳಿಗೆ ಮತ್ತು ಇತರರಿಗೆ ಇನ್ನೂ ಕಡಿಮೆ ಇದೆ). ಎ ಟಿಟಿ ಹೆಚ್ಚಿಸುವುದರಿಂದ ಅಲ್ಪಾವಧಿ ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಆದರೆ ದೀರ್ಘಾವಧಿ ಹೂಡಿಕೆದಾರರ ಮೇಲೆ ಇದರ ಪರಿಣಾಮ ತೀರಾ ಕಡಿಮೆ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಪರಿಚಯಿಸಿದರೆ ಸಾಂಸ್ಥಿಕ ಹೂಡಿಕೆದಾರರ ಮೇಲೆ ಪರಿಣಾಮ ಬೀರಿ, ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ.

ಇನ್ ಹೆರಿಟೆನ್ಸ್ ಟ್ಯಾಕ್ಸ್ ಪರಿಚಯಿಸಬಹುದು

ಇನ್ ಹೆರಿಟೆನ್ಸ್ ಟ್ಯಾಕ್ಸ್ ಪರಿಚಯಿಸಬಹುದು

ತೆರಿಗೆ ಆದಾಯ ಹೆಚ್ಚಿಸಿಕೊಳ್ಳಲು ಸರಕಾರ ಮತ್ತೆ ಇನ್ ಹೆರಿಟೆನ್ಸ್ ತೆರಿಗೆ ಪರಿಚಯಿಸಬಹುದು. ಈ ಹಿಂದೆ ಅದನ್ನು ಎಸ್ಟೇಟ್ ಸುಂಕ ಅಂತ ಕರೆಯಲಾಗುತ್ತಿತ್ತು. ಬಿಜೆಪಿಗೆ ಈ ತೆರಿಗೆಯನ್ನು ಪರಿಚಯಿಸುವುದಕ್ಕೆ ಆಸಕ್ತಿಯಿದೆ.

ಇದರಿಂದ ಪರಿಣಾಮ ಏನು?

ಇದರಿಂದ ಪರಿಣಾಮ ಏನು?

ಈ ತೆರಿಗೆ ಪರಿಚಯಿಸುವುದರಿಂದ ಸಣ್ಣ ಪ್ರಮಾಣದ ತೆರಿಗೆದಾರರ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಐದು ಕೋಟಿಗೂ ಹೆಚ್ಚು ಮೊತ್ತದ ಆಸ್ತಿ ವರ್ಗಾವಣೆಗೆ ಮಾತ್ರ ಇದು ಅನ್ವಯ ಆಗುತ್ತದೆ.

ಕಸ್ಟಮ್ಸ್ ಸುಂಕದ ಮೇಲೆ ಏರಿಕೆ

ಕಸ್ಟಮ್ಸ್ ಸುಂಕದ ಮೇಲೆ ಏರಿಕೆ

ವಿವಿಧ ತೆರಿಗೆಗಳು ಜಿಎಸ್ ಟಿ ಜತೆ ಸೇರಿದ ಮೇಲೆ ಸರಕಾರದ ಹತೋಟಿಯಲ್ಲಿರುವ ಕಸ್ಟಮ್ಸ್ ಸುಂಕ. ಆದಾಯ ಖೋತಾ ಆಗಬಹುದು ಎಂಬ ಗುಮಾನಿ ಬಂದರೆ ಅದನ್ನು ತುಂಬಿಕೊಳ್ಳಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡಲು ಕಸ್ಟಮ್ಸ್ ಸುಂಕ ಹೆಚ್ಚಿಸುವುದಾಗಿ ಹೇಳಿಕೊಳ್ಳಬಹುದು. ಮೊಬೈಲ್ ಫೋನ್ಸ್, ಸೋಲಾರ್ ಪ್ಯಾನಕ್ ಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ.

ಇದರಿಂದ ಏನು ಪರಿಣಾಮ?

ಇದರಿಂದ ಏನು ಪರಿಣಾಮ?

ಮೊಬೈಲ್ ಫೋನ್ ಗಳ ಬೆಲೆಯಲ್ಲಿ ಹಾಗೂ ಸೋಲಾರ್ ಪ್ಯಾನಲ್ ಮತ್ತಿತರ ಆಮದು ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುತ್ತದೆ. ಅದರ ಪ್ರತಿಕೂಲ ಪರಿಣಾಮ ಏನೆಂದರೆ ಸೌರ ಶಕ್ತಿಯಿಂದ ಉತ್ಪಾದನೆ ಆಗುವ ವಿದ್ಯುತ್ ಯೂನಿಟ್ ದರ ಹೆಚ್ಚಳ ಆಗುತ್ತದೆ.

English summary
Economic policies of NDA government moving beyond the Budget, the significance of the annual fiscal exercise may have diminished to some extent. The introduction of the GST has reduced its importance further.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X