ಭಾರತದಲ್ಲಿ ನಿರುದ್ಯೋಗ ಪ್ರಮಾಣ ಇಳಿಕೆ: ಕರ್ನಾಟಕದಲ್ಲಿ ಎಷ್ಟಿದೆ?

ನವದೆಹಲಿ, ಏಪ್ರಿಲ್‌ 04: ದೇಶದಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದ ನಿರುದ್ಯೋಗ ದರವು ಮಾರ್ಚ್‌ನಲ್ಲಿ ಇಳಿಕೆ ಕಂಡಿದೆ. ಸೆಂಟರ್‌ ಫಾರ್‌ ಮಾನೆಟರಿಂಗ್ ಇಂಡಿಯನ್‌ ಇಕಾನಮಿ ಪ್ರತಿ ತಿಂಗಳು ಭಾರತದಲ್ಲಿನ ನಿರುದ್ಯೋಗ ಪ್ರಮಾಣದ ಬಗ್ಗೆ ಪರೀಶಿಲನೆ ನಡೆಸಿ ಡೇಟಾ ಬಿಡುಗಡೆ ಮಾಡುತ್ತದೆ. ಈ ಡೇಟಾ ಪ್ರಕಾರ ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲಿ ನಿರುದ್ಯೋಗ ಪ್ರಮಾಣವು ಕಡಿಮೆಯಾಗಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಸಿಕ ದತ್ತಾಂಶದ ಪ್ರಕಾರ ಫೆಬ್ರವರಿ 2022 ರಲ್ಲಿ ಭಾರತದಲ್ಲಿ ಒಟ್ಟಾರೆ ನಿರುದ್ಯೋಗ ದರವು ಶೇಕಡಾ 8.10 ರಷ್ಟಿತ್ತು. ಇದು ಮಾರ್ಚ್‌ನಲ್ಲಿ ಶೇಕಡಾ 7.6 ಕ್ಕೆ ಇಳಿದಿದೆ. ಆದರೆ ಈ ಸಂದರ್ಭದಲ್ಲೇ ದೇಶದಲ್ಲಿ ಮಾರ್ಚ್ ತಿಂಗಳಿನಲ್ಲಿ ನಿರುದ್ಯೋಗ ದರವು ಇಳಿಕೆಯಾಗಿದೆ ಹೊರತು ಒಟ್ಟಾರೆಯಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿಯೇ ಇದೆ ಎಂದು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಅಭಿರೂಪ್ ಸರ್ಕಾರ್ ಹೇಳಿದ್ದಾರೆ.

ಏಪ್ರಿಲ್ 2 ರಂದು, ನಿರುದ್ಯೋಗ ಅನುಪಾತವು ಶೇಕಡಾ 7.5 ಕ್ಕೆ ಇಳಿದಿದೆ. ನಗರ ನಿರುದ್ಯೋಗ ದರವು ಶೇಕಡಾ 8.5 ಮತ್ತು ಗ್ರಾಮೀಣ ಭಾಗವು ಶೇಕಡಾ 7.1 ರಷ್ಟಿದೆ. ಒಟ್ಟಾರೆ ನಿರುದ್ಯೋಗ ದರವು ಕಡಿಮೆಯಾಗುತ್ತಿದ್ದರೂ, ಭಾರತದಂತಹ "ಬಡ" ದೇಶಕ್ಕೆ ಇದು ಇನ್ನೂ ಅಧಿಕವಾಗಿದೆ ಎಂದು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಅಭಿರೂಪ್ ಸರ್ಕಾರ್ ಹೇಳಿದ್ದಾರೆ. ಹಾಗಾದರೆ ದೇಶದಲ್ಲಿ ಎಲ್ಲಿ ಹೆಚ್ಚು ನಿರುದ್ಯೋಗ ಪ್ರಮಾಣವಿದೆ. ಕರ್ನಾಟಕದಲ್ಲಿ ಎಷ್ಟು ನಿರುದ್ಯೋಗ ಪ್ರಮಾಣವಿದೆ ಎಂದು ತಿಳಿಯೋಣ ಮುಂದೆ ಓದಿ...

Unemployment rate decreasing in India, Heres A Full Details

ಅತೀ ಹೆಚ್ಚು, ಅತೀ ಕಡಿಮೆ ನಿರುದ್ಯೋಗ ದರ ಎಲ್ಲಿದೆ?

ಅಂಕಿಅಂಶಗಳ ಪ್ರಕಾರ, ಹರಿಯಾಣದಲ್ಲಿ ಮಾರ್ಚ್‌ನಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಇದೆ. ಈ ರಾಜ್ಯದಲ್ಲಿ 26.7 ಶೇಕಡ ನಿರುದ್ಯೋಗ ದರವಿದೆ. ಛತ್ತೀಸ್ ಗಢದಲ್ಲಿ ಅತೀ ಕಡಿಮೆ ನಿರುದ್ಯೋಗ ದರವಿದೆ. ಈ ರಾಜ್ಯದಲ್ಲಿ ಶೇಕಡ 0.6ರಷ್ಟು ನಿರುದ್ಯೋಗ ಪ್ರಮಾಣವಿದೆ.

ಕರ್ನಾಟಕದಲ್ಲಿ ಎಷ್ಟಿದೆ ನಿರುದ್ಯೋಗ ಪ್ರಮಾಣ?

ಕಡಿಮೆ ನಿರುದ್ಯೋಗ ಪ್ರಮಾಣ ಇರುವ ರಾಜ್ಯಗಳ ಪೈಕಿ ಕರ್ನಾಟಕವು ಕೂಡಾ ಒಂದಾಗಿದೆ. ಕರ್ನಾಟಕದಲ್ಲಿ ಶೇಕಡ 1.8 ನಿರುದ್ಯೋಗ ಪ್ರಮಾಣವಿದೆ. ಇನ್ನು ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ 2.0 ನಿರುದ್ಯೋಗ ಪ್ರಮಾಣವಿದ್ದು, ಅದಕ್ಕೆ ಹೋಲಿಕೆ ಮಾಡಿದಾಗ ಮಾರ್ಚ್‌ನಲ್ಲಿ ನಿರುದ್ಯೋಗ ಪ್ರಮಾಣವು ಕೊಂಚ ಇಳಿಕೆ ಕಂಡಿದೆ.

Unemployment rate decreasing in India, Heres A Full Details

ಆಂಧ್ರಪ್ರದೇಶದಲ್ಲಿ ಶೇಕಡ 9.2, ಅಸ್ಸಾಂನಲ್ಲಿ ಶೇಕಡ 7.7, ಬಿಹಾರದಲ್ಲಿ ಶೇಕಡ 14.4 ನಿರುದ್ಯೋಗ ಪ್ರಮಾಣವಿದೆ. ಕೇರಳದಲ್ಲಿ ಶೇಕಡ 6.7 ನಿರುದ್ಯೋಗ ಪ್ರಮಾಣವಿದೆ. ಇನ್ನು ಮಹಾರಾಷ್ಟ್ರದಲ್ಲಿ ಶೇಕಡ 4.0 ನಿರುದ್ಯೋಗ ಪ್ರಮಾಣವಿದೆ. ಪಂಜಾಬ್‌ನಲ್ಲಿ ಶೇಕಡ 7.0 ನಿರುದ್ಯೋಗ ಪ್ರಮಾಣವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+