ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಯುರಲ್ಸ್ ಕಚ್ಚಾ ತೈಲ ಖರೀದಿಸಿದ ಹೆಚ್‌ಪಿಸಿಎಲ್‌

|
Google Oneindia Kannada News

ನವದೆಹಲಿ, ಮಾರ್ಚ್ 17: ರಷ್ಯಾ ಹಾಗೂ ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧವು ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ಪ್ರಮುಖವಾಗಿ ತೈಲದ ಬೆಲೆ ಏರಿಕೆಗೆ ಕಾರಣವಾಗಿದೆ. ಈ ನಡುವೆ ಭಾರತದ ತೈಲ ಸಂಸ್ಕರಣಾ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ ರಷ್ಯಾದಿಂದ ಅತೀ ಅಪರೂಪಕ್ಕೆ ಯುರಲ್ಸ್ ಕಚ್ಚಾವನ್ನು ಖರೀದಿ ಮಾಡಿದೆ.

2 ಮಿಲಿಯನ್ ಬ್ಯಾರೆಲ್‌ ರಷ್ಯಾದ ಯುರಲ್ಸ್ ಕಚ್ಚಾವನ್ನು ಅಪರೂಪವಾಗಿ ಭಾರತದ ತೈಲ ಸಂಸ್ಕರಣಾ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ ಖರೀದಿ ಮಾಡಿದ್ದು, ಇದು ಮೇ ತಿಂಗಳಿನಲ್ಲಿ ರಷ್ಯಾದಿಂದ ಭಾರತಕ್ಕೆ ಆಮದು ಆಗಲಿದೆ ಎಂದು ವ್ಯಾಪಾರ ಮೂಲಗಳು ಗುರುವಾರ ತಿಳಿಸಿವೆ.

ರಷ್ಯಾದ ಕಚ್ಚಾತೈಲದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ!?ರಷ್ಯಾದ ಕಚ್ಚಾತೈಲದಿಂದ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ!?

ಸರಕುಗಳನ್ನು ಯುರೋಪಿಯನ್ ವ್ಯಾಪಾರಿ ವಿಟೋಲ್ ಮಾರಾಟ ಮಾಡಿದ್ದಾರೆ ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ. ಕಂಪನಿಗಳು ಸಾಮಾನ್ಯವಾಗಿ ವಾಣಿಜ್ಯ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ. ಆದರೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ ರಷ್ಯಾದಿಂದ ಅತೀ ಅಪರೂಪಕ್ಕೆ ಯುರಲ್ಸ್ ಕಚ್ಚಾವನ್ನು ಖರೀದಿ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

Ukraine-Russia War: Indian refiner HPCL buys rare Russian Urals crude

ದೇಶದ ಟಾಪ್ ರಿಫೈನರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ವಾರ ಅದೇ ರಷ್ಯಾದ ದರ್ಜೆಯ 3 ಮಿಲಿಯನ್ ಬ್ಯಾರೆಲ್‌ಗಳನ್ನು ಖರೀದಿಸಿದ ನಂತರ ಈ ಖರೀದಿ ನಡೆದಿದೆ. ರಷ್ಯಾದ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳು ಅನೇಕ ಕಂಪನಿಗಳು ಮತ್ತು ದೇಶಗಳು ರಷ್ಯಾದ ತೈಲವನ್ನು ನಿರ್ಬಂಧ ಮಾಡಿದೆ. ಇದರಿಂದಾಗಿ ರಷ್ಯಾದ ತೈಲಗಳೂ ಭಾರೀ ಕುಸಿತ ಕಂಡಿದೆ. ಆದರೆ ಈ ಬಗ್ಗೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸೆನ್ಸೆಕ್ಸ್ ಏರಿಕೆಯಾಗುತ್ತಿದ್ದಂತೆ ಹೆಚ್‌ಪಿಸಿಎಲ್‌ ಷೇರು ಏರಿಕೆ

ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 782.4 ಪಾಯಿಂಟ್‌ಗಳ ಏರಿಕೆಯೊಂದಿಗೆ 56559.25 ಕ್ಕೆ ವಹಿವಾಟು ನಡೆಸುತ್ತಿರುವಾಗ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಷೇರುಗಳು ಬುಧವಾರದ ಸೆಷನ್‌ನಲ್ಲಿ 1.24 ರಷ್ಟು ಏರಿಕೆಯಾಗಿ 276.95 ರೂಪಾಯಿಗೆ ತಲುಪಿದೆ.

ಹಿಂದಿನ ದಿನದಂದು ಸ್ಟಾಕ್ ಸೆಷನ್‌ನಲ್ಲಿ ಅಂತರ ಕಂಡು ಬಂದಿದೆ. ಸ್ಟಾಕ್ ಎನ್‌ಎಸ್‌ಇಯಲ್ಲಿ 52 ವಾರಗಳ ಗರಿಷ್ಠ ಬೆಲೆ ರೂ 354.55 ಮತ್ತು 52 ವಾರದ ಕನಿಷ್ಠ ರೂ 223.0 ಅನ್ನು ಉಲ್ಲೇಖಿಸಿದೆ. ಸ್ಟಾಕ್ ರೂ 277.0 ನಲ್ಲಿ ಪ್ರಾರಂಭವಾಯಿತು. ಇದುವರೆಗಿನ ರೂ 277.2 ಮತ್ತು ರೂ 271.5 ರ ಇಂಟ್ರಾಡೇ ಗರಿಷ್ಠ ಮತ್ತು ಕನಿಷ್ಠವನ್ನು ಮುಟ್ಟಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: Indian refiner HPCL buys rare Russian Urals crude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X