ಡಿ.1 ರಿಂದ ಒಟಿಪಿ ಬಳಸಿ ಆಧಾರ್ ಹಾಗೂ ಸಿಮ್ ಜೋಡಣೆ ಜಾರಿ

ಬೆಂಗಳೂರು, ನವೆಂಬರ್ 16: ಒಟಿಪಿ ಬಳಸಿ ಮೊಬೈಲ್ ಫೋನ್ ಸಿಮ್ ನಂಬರ್ ಹಾಗೂ ಆಧಾರ್ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಜೋಡಣೆ ಮಾಡುವ ವಿಧಾನಕ್ಕೆ ಯುಐಡಿಎಐ ಒಪ್ಪಿಗೆ ಸೂಚಿಸಿದೆ.

ಮೊಬೈಲ್ ನಂಬರ್ ಜತೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯಕ್ಕೆ ಮೊಬೈಲ್ ಸೇವಾ ಸಂಸ್ಥೆಯ ಕಚೇರಿಗೆ ಗ್ರಾಹಕರು ಹೋಗುವುದು ಅನಿವಾರ್ಯವಾಗಿತ್ತು. ಆದರೆ, ಈಗ ನಾಲ್ಕು ಸರಳ ವಿಧಾನಗಳ ಬಗ್ಗೆ ಚರ್ಚಿಸಲಾಗಿತ್ತು. ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.

UIDAI approves telcos blueprint on new SIM reverification modes

ಈ ಮುಂಚೆ ಎಲ್ಲಾ ಟೆಲಿಕಾಂ ಸೇವಾಸಂಸ್ಥೆಗಳು ತನ್ನ ಗ್ರಾಹಕರಿಗೆ ಸೂಚನೆ ನೀಡಿದಂತೆ, ಗ್ರಾಹಕರು ಖುದ್ದು ಟೆಲಿಕಾಂ ಸಂಸ್ಥೆ ಕಚೇರಿಗೆ ತೆರಳಿ ಬೆರಳಚ್ಚು ನೀಡುವುದು ಕಡ್ಡಾಯವಾಗಿತ್ತು.

ಆದರೆ, ಈಗ ಆನ್ ಲೈನ್ ಮೂಲಕ ಅಥವಾ ಒಟಿಪಿ ಬಳಸಿ ಸುಲಭವಾಗಿ ಜೋಡಣೆ ಮಾಡಬಹುದು. ಇದಕ್ಕೆ ಕೊನೆ ದಿನಾಂಕ ಫೆಬ್ರವರಿ 6 2018 ಕೊನೆ ದಿನಾಂಕವಾಗಿದ್ದು, ಈ ರೀತಿ ಜೋಡಣೆ ವಿಧಾನ ಡಿಸೆಂಬರ್ 01ರಿಂದ ಜಾರಿಗೆ ತರುವಂತೆ ಟೆಲಿಕಾಂ ಸಂಸ್ಥೆ ಗಳಿಗೆ ಸೂಚಿಸಲಾಗಿದೆ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಆಧಾರಿತ ಆಯ್ಕೆಯನ್ನು ಬಳಸಿಕೊಂಡು ಆಧಾರ್‌ ಸಂಖ್ಯೆಯನ್ನು ನೀಡಬಹುದು ಅಥವಾ ಮೊಬೈಲ್‌ ಸೇವೆ ಒದಗಿಸುವ ಕಂಪೆನಿಗಳ ಆ್ಯಪ್‌ ಮೂಲಕ ಲಾಗ್‌ ಇನ್‌ ಆಗಿ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡಬಹುದು. ಇದಲ್ಲದೇ, ಐವಿಆರ್‌ಎಸ್‌ (ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌) ಮೂಲಕವೂ ಮೊಬೈಲ್‌ ಸಂಖ್ಯೆಗೆ ಆಧಾರ್‌ ಅನ್ನು ಜೋಡಣೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+