ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಸುಸ್ತಿದಾರನಾದರೂ ಸುಸ್ತಾಗದ ಮಲ್ಯ

By Mahesh
|
Google Oneindia Kannada News

ಕೋಲ್ಕತ್ತಾ, ಅ.28: ಅತಿ ಹೆಚ್ಚು ಸಾಲಗಾರ ಎಂಬ ಹಣೆಪಟ್ಟಿ ಯುಬಿ ಸಮೂಹ, ಕಿಂಗ್ ಫಿಷರ್ ಸಂಸ್ಥೆಯ ವಿಜಯ್ ಮಲ್ಯ ಅವರಿಗೆ ದಕ್ಕಿದ ಬೆನ್ನಲ್ಲೇ ಮದ್ಯದ ದೊರೆ ವಿಜಯಮಲ್ಯ ಅವರನ್ನ ಸುಸ್ತಿದಾರ (wilful defaulter) ಎಂದು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿತ್ತು. ಈಗ ಯುಸಿಒ ಬ್ಯಾಂಕ್ ಕೂಡಾ ಇದೇ ಟ್ಯಾಗ್ ಮಲ್ಯ ಕೊರಳಿಗೆ ಹಾಕಿದೆ.

ಸಾಲದ ಹೊರೆಯಿಂದ ಕುಸಿದು ನೆಲಕಚ್ಚಿರುವ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ ಸಾಲವನ್ನು ತೀರಸಲು ಆಗದೆ ಈ ಬಗ್ಗೆ ಪ್ರತಿಕ್ರಿಯಿಸದೆ ಇರುವುದರಿಂದ ಸಂಸ್ಥೆ ಮಾಲೀಕ ವಿಜಯ್ ಮಲ್ಯರನ್ನು ಸುಸ್ತಿದಾರ ಎಂದು ಪರಿಗಣಿಸಲಾಗಿದೆ ಎಂದು ಹೇಳಿರುವ ಯುಸಿಒ ಬ್ಯಾಂಕ್ ಹೇಳಿದೆ.[ಮಲ್ಯರಿಂದ ಸಾಲ ವಸೂಲಿ ಕಷ್ಟ ಕಷ್ಟ]

UCO Bank identifies Kingfisher Airlines as 'wilful defaulter'

ಯುನೈಟೆಡ್ ಬ್ಯಾಂಕ್ ,ಯುಸಿಒ ಬ್ಯಾಂಕ್ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ಮಲ್ಯರನ್ನು ಸುಸ್ತಿದಾರ ಎಂದು ಘೋಷಿಸಲು ಸಜ್ಜಾಗಿವೆ. ಯುನೈಟೆಡ್ ಬ್ಯಾಂಕಿನಿಂದ ಕಿಂಗ್ ಫಿಷರ್ ಸಂಸ್ಥೆ ಸುಮಾರು 350 ಕೋಟಿ ರು ಸಾಲ ಪಡೆದುಕೊಂಡಿದ್ದರೆ, ಯುಸಿಒ ಬ್ಯಾಂಕಿನಿಂದ 450 ಕೋಟಿ ರು ಸಾಲ ಪಡೆದಿದೆ. [ಸಾಲದ ವಿಷ್ಯದಲ್ಲೂ ಮಲ್ಯ ಇಸ್ ಕಿಂಗ್]

ಸಾಲದ ಖಾತೆಯಲ್ಲಿ 91ನೇ ದಿವಾದರೂ ವಾಪಸಾತಿ ಬಾರದಿದ್ದರೆ ಸಾಲ ನೀಡಿದ ಕಂಪನಿಯ ಆಸ್ತಿಪಾಸ್ತಿ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಗ್ಯಾರಂಟಿ ನೀಡಿದ ಇತರೆ ಕಂಪನಿ ಅಥವಾ ವ್ಯಕ್ತಿಯ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. [ಬಾಟ್ಲಿ ಕೇಸ್, ಮಲ್ಯಗೆ ಸ್ವಲ್ಪ ರಿಲೀಫ್]

ಸದ್ಯದ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಹರಾಜು ಹಾಕಬಹುದಾಗಿದೆ. ಅಂದರೆ 2014ನೇ ಸಾಲಿನ ಆರ್ಥಿಕ ವರ್ಷ ಆರಂಭಕ್ಕೂ ಮುನ್ನ ಕೂಡಾ ವಿಜಯ್ ಮಲ್ಯ ಅವರ ಕಿಂಗ್ ವಿಮಾನ ಒಂದು ಪೈಸೆಯನ್ನೂ ಮರುಪಾವತಿ ಮಾಡಿಲ್ಲ. ಕೈಯಲ್ಲಿ ಮೊತ್ತ ಇಲ್ಲ ಎಂದು ಮಲ್ಯ ಕೈಯಾಡಿಸಿದ್ದಾರೆ. ಸುಸ್ತಿದಾರನೆಂದರೂ ಸರಿ ಸಾಲ ವಾಪಸ್ ಪಡೆಯುವುದು ಕಷ್ಟ ಕಷ್ಟ.

English summary
Kolkata City-based UCO Bank on Monday said it has "identified" Vijay Mallya-owned Kingfisher Airlines (KFA) as a "wilful defaulter" and will be sending a notice to the defunct carrier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X