ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭರವಸೆ : ಉಬರ್ ನಿಂದ ಶೀಘ್ರವೇ ಏರ್ ಟ್ಯಾಕ್ಸಿ ಹಾರಾಟ

By Mahesh
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08: ಉಬರ್ ನಿಂದ ಶೀಘ್ರದಲ್ಲೇ ಭಾರತದಲ್ಲಿ ಏರ್ ಟ್ಯಾಕ್ಸಿ ಕ್ಯಾಬ್ ಸೇವೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತಂತೆ ಭರವಸೆ ನೀಡಿದ್ದಾರೆ ಎಂದು ಉಬರ್ ಸಂಸ್ಥೆ ಹೇಳಿದೆ.

ಗ್ಲೋಬಲ್ ಮೊಬಿಲಿಟಿ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅವರ ಜತೆ ಉಬರ್ ಏವಿಯೇಷನ್ ಪ್ರೋಗ್ರಾಮ್ ನ ಎರಿಕ್ ಅಲ್ಲಿಸನ್ ಹಾಗೂ ನಿಖಿಲ್ ಗೋಯಲ್ ಅವರು ಮಾತುಕತೆ ನಡೆಸಿದ್ದಾರೆ. ಇದು ಪರಿಸರ ಸ್ನೇಹಿಯಾಗಿದ್ದು, ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಲಿದೆ ಎನ್ನಲಾಗಿದೆ.

Uber top executives meet Modi, discuss aerial taxi service

ಉಬರ್ ಒಟ್ಟು ಐದು ದೇಶಗಳಲ್ಲಿ ಹಾರಾಟ ಕ್ಯಾಬ್ ಸೇವೆ ನೀಡಲು ನಿರ್ಧರಿಸಿದ್ದು, ಆ ಪಟ್ಟಿಯಲ್ಲಿ ಭಾರತ ಕೂಡ ಇದೆ. ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಉಬರ್ ಏರ್ ಸಿಟಿ ಆರಂಭವಾಗಲಿದೆ.

ಸಾಧಕ-ಬಾಧಕಗಳನ್ನೆಲ್ಲ ಗಣನೆಗೆ ತೆಗೆದುಕೊಂಡಿರುವ ಉಬರ್, ಜಪಾನ್, ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್ ಹಾಗೂ ಫ್ರಾನ್ಸ್ ದೇಶಗಳಲ್ಲಿ ಹಾರಾಟದ ಕ್ಯಾಬ್ ಸೇವೆ ಒದಗಿಸಲು ತೀರ್ಮಾನ ಕೈಗೊಂಡಿದೆ. ಟೊಕಿಯೋದಲ್ಲಿ ನಡೆದ ಮೊದಲ ಉಬರ್ ಎಲಿವೇಟ್ ಏಷ್ಯಾ ಪೆಸಿಫಿಕ್ ಎಕ್ಸ್ ಪೋನಲ್ಲಿ ಈ ಬಗ್ಗೆ ಮೊದಲಿಗೆ ಪ್ರಕಟಿಸಲಾಗಿತ್ತು.

ಮುಂಬೈ, ದೆಹಲಿ ಹಾಗೂ ಬೆಂಗಳೂರು ಜಗತ್ತಿನ ಬಹಳ ಕಿರಿದಾದ ನಗರಗಳು. ಕೆಲವೇ ಕಿಲೋಮೀಟರ್ ಸಾಗಲು ಸಹ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಇಂಥ ಸಮಸ್ಯೆಯಿಂದ ಹೊರಬರುವುದಕ್ಕೆ ಉಬರ್ ಏರ್ ಸೇವೆ ಬಹಳ ಸಹಾಯಕ ಆಗಿರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಆದರೆ, ಎಲ್ಲವೂ ಕಾರ್ಯಗತವಾಗಲು 2020ರ ತನಕ ಕಾಯಬೇಕಿದೆ. 2023ರ ವೇಳೆಗೆ ಮೂರ ನಗರಗಳಲ್ಲಿ ವಾಣಿಜ್ಯ ಹಾರಾಟ ಆರಂಭಗೊಳ್ಳುವ ನಿರೀಕ್ಷೆಯಿದೆ.

ಎಲ್ಲವೂ ಅಂದು ಕೊಂಡಂತೆ ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೋನಿನಿಂದ ಕ್ಯಾಬ್ ಬುಕ್ ಮಾಡುವಂತೆ ಏರ್ ಟ್ಯಾಕ್ಸಿ ಬುಕ್ ಮಾಡಬಹುದು. ಬಹು ಮಹಡಿ ಕಟ್ಟಡದ ಮೇಲಿನ ಹೆಲಿಪ್ಯಾಡ್ ನ ಮೇಲೆ ವರ್ಟಿಕಲ್ ಟೇಕ್ ಆಫ್ ಅಂಡ್ ಲ್ಯಾಂಡಿಂಗ್ (VTOL) ಏರ್ ಕ್ರಾಫ್ಟ್ ಏರಿ ಹಾರಾಟ ನಡೆಸಬಹುದಾಗಿದೆ.

English summary
Ride-hailing app Uber on Saturday said its top executives met Prime Minister Narendra Modi and showcased its futuristic aerial taxi service under Uber Elevate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X