Get Updates
Get notified of breaking news, exclusive insights, and must-see stories!

ಮುರಿದುಬಿದ್ದ ಟ್ವಿಟ್ಟರ ಖರೀದಿ ಒಪ್ಪಂದ: ಮಸ್ಕ್ ವಿರುದ್ಧ ಲೀಗಲ್ ಫೈಟ್‌ಗೆ ನಿರ್ಧಾರ

ಸಾಮಾಜಿಕ ಮಾಧ್ಯಮ ಟ್ವಿಟರ್‌ ಖರೀದಿ ಒಪ್ಪಂದ ಮುರಿದುಬೀಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಯಾಕೆಂದರೆ ಉದ್ಯಮಿ ಎಲಾನ್ ಮಸ್ಕ್ ಅವರು ಸ್ವತಃ ಟ್ವಿಟರ್ 44 ಬಿಲಿಯನ್ ಖರೀದಿ ಒಪ್ಪಂದವನ್ನು ಕೊನೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರ್‌ ಈಗ ಟೆಸ್ಲಾ ಸಿಇಒ ಎಲೋನ್‌ ಮಸ್ಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಜಿಸಿದೆ. ಪ್ಲಾಟ್‌ಫಾರ್ಮ್‌ನಲ್ಲಿನ ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಸಾಕಷ್ಟು ಮಾಹಿತಿ ನೀಡಲು ಟ್ವಿಟರ್ ವಿಫಲವಾಗಿದೆ ಎಂದು ಮಸ್ಕ್‌ ಆರೋಪಿಸಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಟ್ವಿಟ್ಟರ್ ಖರೀದಿ ಒಪ್ಪಂದ ಕೊನೆಗೊಳಿಸುತ್ತಿರುವುದಾಗಿ ಮಸ್ಕ್ ಹೇಳಿಕೊಂಡಿದ್ದಾರೆ.

ಆದರೆ, ಮಸ್ಕ್‌ ಅವರ ಈ ನಿರ್ಧಾರದ ವಿರುದ್ಧ ಟ್ವಿಟ್ಟರ್ ಕಾನೂನು ಕ್ರಮಕ್ಕೆ ಮುಂದಾಗಿದೆ. ಒಂದು ವೇಳೆ ಮಸ್ಕ್‌ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದರೆ, ಅವರು $1 ಬಿಲಿಯನ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಟ್ವಿಟರ್ ಮತ್ತು ಮಸ್ಕ್ ಇಬ್ಬರೂ ಏಪ್ರಿಲ್‌ನಲ್ಲಿ ನಡೆದ ಒಡಂಬಡಿಕೆ ವೇಳೆ ಒಪ್ಪಿಕೊಂಡಿದ್ದರು. ಆದರೆ ಸ್ಪ್ಯಾಮ್ ಖಾತೆಗಳ ಸಾಕಷ್ಟು ಕುರಿತ ಮಾಹಿತಿ(ಡೇಟಾ)ಯನ್ನು ಟ್ವಿಟರ್‌ ನೀಡಲು ವಿಫಲವಾಗಿದ್ದು, ಹೀಗಾಗಿ 44 ಶತಕೋಟಿ ಡಾಲರ್‌ಗೆ ಖರೀದಿಸುವ ಒಪ್ಪಂದಕ್ಕೆ ಬ್ರೇಕ್ ಬಿದ್ದಿದೆ ಎಂದು ಮಸ್ಕ್ ಹೇಳಿದ್ದಾರೆ.

Twitter to sue Elon Musk over termination of companys $44 billion takeover bid

ಟ್ವಿಟ್ಟರ್ ಅಗತ್ಯ ಮಾಹಿತಿಗಳ ಬಗ್ಗೆ ಎರಡು ತಿಂಗಳ ಕಾಲ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಕೆಲವೊಮ್ಮೆ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಟ್ವಿಟ್ಟರ್‌ ನಿರಾಕರಿಸಿದೆ ಅಥವಾ ಮಾಹಿತಿಯನ್ನು ಒದಗಿಸಲಿಲ್ಲ. ಕೆಲವೊಮ್ಮೆ ಟ್ವಿಟ್ಟರ್, ತನ್ನ ವಿನಂತಿಗಳನ್ನು ನಿರ್ಲಕ್ಷಿಸಿದೆ, ಕೆಲವೊಮ್ಮೆ ಅದು ಅಸಮರ್ಥಿಸಿಕೊಂಡಿದೆ ಈ ಎಲ್ಲಾ ಕಾರಣಗಳಿಗೆ ಈ ಒಪ್ಪಂದ ಮುರಿದುಬಿದ್ದಿದೆ ಎನ್ನಲಾಗುತ್ತಿದೆ.

Twitter to sue Elon Musk over termination of companys $44 billion takeover bid

ಏಪ್ರಿಲ್‌ನಲ್ಲಿ, ಮಸ್ಕ್ ಪ್ರತಿ ಷೇರಿಗೆ US$54.20 ರಂತೆ ಸರಿಸುಮಾರು US$44 ಶತಕೋಟಿಗೆ ಟ್ವಿಟರ್‌ನೊಂದಿಗೆ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು. ಆದಾಗ್ಯೂ, ಪ್ಲಾಟ್‌ಫಾರ್ಮ್‌ನಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಖಾತೆಗಳು ಬಾಟ್‌ಗಳು ಅಥವಾ ಸ್ಪ್ಯಾಮ್‌ಗಳಾಗಿವೆ ಎಂಬ ಟ್ವಿಟರ್‌ನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಮ್ಮ ತಂಡಕ್ಕೆ ಅವಕಾಶ ಮಾಡಿಕೊಡಲು ಮಸ್ಕ್ ಒಪ್ಪಂದವನ್ನು ಮೇ ತಿಂಗಳಲ್ಲಿ ನಿಲ್ಲಿಸಿದರು.

Twitter to sue Elon Musk over termination of companys $44 billion takeover bid

ಜೂನ್‌ನಲ್ಲಿ, ಮಸ್ಕ್ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ವಿಲೀನ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಬಹಿರಂಗವಾಗಿ ಆರೋಪಿಸಿದರು ಮತ್ತು ಸ್ಪ್ಯಾಮ್ ಮತ್ತು ನಕಲಿ ಖಾತೆಗಳಲ್ಲಿ ಅವರು ವಿನಂತಿಸಿದ ಡೇಟಾವನ್ನು ಒದಗಿಸದಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಕಂಪನಿಯ ಸ್ವಾಧೀನವನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು. ಒಪ್ಪಂದದ ಮೂಲಕ ವಿವರಿಸಿದಂತೆ ಟ್ವಿಟರ್ "ಅವರ ಮಾಹಿತಿ ಹಕ್ಕುಗಳನ್ನು ತಡೆಯುತ್ತಿದೆ" ಎಂದು ಮಸ್ಕ್ ಆರೋಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+