ವಿಳಂಬವಾದ ಡಿಲೆವರಿ, ಜೊಮ್ಯಾಟೋ, ಸ್ವಿಗ್ಗಿ ವಿರುದ್ಧ ಟ್ವೀಟ್ಸ್
ಬೆಂಗಳೂರು, ಏಪ್ರಿಲ್ 06: ಆನ್ ಲೈನ್ ಮೂಲಕ ಫುಡ್ ಆರ್ಡರ್ ಮಾಡಲು ಬಳಸು ಅಪ್ಲಿಕೇಷನ್ ಗಳ ಪೈಕಿ ಜೊಮ್ಯಾಟೋ ಹಾಗೂ ಸ್ವಿಗ್ಗಿ ಅತ್ಯಂತ ಜನಪ್ರಿಯ ಎನ್ನಬಹುದು. ಏಪ್ರಿಲ್ 6ರಂದು ಮಧ್ಯಾಹ್ನದ ವೇಳೆ ಊಟ, ತಿಂಡಿ ಆರ್ಡರ್ ಮಾಡಿದವರ ಸಹನೆ ಪರೀಕ್ಷೆಯಾಗಿದೆ. ಸಿಟ್ಟಿಗೆದ್ದವರು ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ವಿಳಂಬವಾಗಿದ್ದಕ್ಕೆ ಕ್ಷಮಿಸಿ, ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಆರ್ಡರ್ ಸರಿಯಾದ ಸಮಯಕ್ಕೆ ಡೆಲಿವರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಎರಡು ಸಂಸ್ಥೆಗಳು ಟ್ವೀಟ್ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡಿವೆ. ಸದ್ಯ ಆನ್ ಲೈನ್ ಬುಕ್ಕಿಂಗ್ ಪ್ರಕ್ರಿಯೆ ಸಹಜ ಸ್ಥಿತಿಗೆ ಮರಳಿದೆ.
How come @swiggy_in @SwiggyCares and @zomatocare stopped working at the same time 😭
— FriesBeforeGuys (blue tick) (@alltimefoodie24) April 6, 2022
ಎರಡು ಸಂಸ್ಥೆಗಳಿಗೂ ಒಮ್ಮೆಗೆ ತಾಂತ್ರಿಕ ದೋಷ ಎದುರಾಗಿದ್ದು, ಅಚ್ಚರಿಯಾದರೂ ಸತ್ಯ. ಭಾರತದ ಹಲವೆಡೆ ಒಂದೇ ಬಾರಿಗೆ ಗ್ರಾಹಕರ ಅವಕೃಪೆಗೆ ಈ ಎರಡು ಸಂಸ್ಥೆಗಳು ಒಳಗಾಗಿವೆ. ಜೊಮ್ಯಾಟೊ ಮತ್ತು ಸ್ವಿಗ್ಗಿ ಮೊಬೈಲ್ ಅಪ್ಲಿಕೇಷನ್ ಬಳಸಿ ಆಹಾ ಆರ್ಡರ್ ಮಾಡಲು ಕೆಲವರಿಗೆ ಕಷ್ಟವಾಗಿದ್ದರೆ, ಹಲವರಿಗೆ ಆರ್ಡರ್ ಮಾಡಿದ್ದ ಫುಡ್ ಡೆಲಿವರಿ ಆಗದೆ ಕಿರಿಕಿರಿ ಉಂಟಾಗಿದೆ.
Placed an order from Domino's Pizza through your app. Payment got deducted.I called Domino's they said we haven't received any such order yet. Neither the chat works nor the customer care is picking up the call@SwiggyCares @swiggy_in
— n (@clobberinntime) April 6, 2022
ಇದರ ಪರಿಣಾಮ, ಎರಡು ಸಂಸ್ಥೆಗಳ ವಿರುದ್ಧ ಹ್ಯಾಶ್ ಟ್ಯಾಗ್ ಹಾಕಿ ಹಸಿದವರು ಶಾಪ ಹಾಕಿದ್ದಾರೆ. ಹೊಟ್ಟೆ ಹಸಿದು, ಊಟಕ್ಕಾಗಿ ಕಾದಿದ್ದ ಸಂದರ್ಭದಲ್ಲೆ ಆಪ್ ಕ್ರ್ಯಾಶ್ ಆಗಿದೆ. ಇಷ್ಟಾದರೂ ಷೇರು ಪೇಟೆಯಲ್ಲಿ ಜೋಮ್ಯಾಟೋ ಷೇರುಗಳು ಇಂದು ಶೇ 0.95ರಷ್ಟು ಏರಿಕೆ ಕಂಡು 84.70 ರು ನಂತೆ ಬಿಎಸ್ಇಯಂತೆ ವ್ಯವಹಾರ ಕಂಡಿದೆ.
@zomatocare @zomatocare What is this? I have 2 orders But i am not able to track both of them Very bad service Do something as soon as possible pic.twitter.com/SXitK7bkNn
— Rohit Sharma (@RohitSh58436052) April 6, 2022
ಜೊಮ್ಯಾಟೋ ಮತ್ತು ಸ್ವಿಗ್ಗಿ ಅಪ್ಲಿಕೇಶನ್‌ಗಳು ಸಮಸ್ಯೆ ಎದುರಿಸಿದ ಅರ್ಧ ಗಂಟೆಯೊಳಗೆ ಸರಿಯಾಗಿವೆ. ಭಾರತದ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ಸುಮಾರು 10 ಬಿಲಿಯನ್ ಮೌಲ್ಯದ ಪ್ರಾಬಲ್ಯ ಹೊಂದಿರುವ ಸಂಸ್ಥೆಗಳು ಬೇಡದ ಕಾರಣಕ್ಕೆ ಟ್ರೆಂಡ್ ನಲ್ಲಿ ಇದ್ದಿದ್ದು ನಿಜ.
Wow, looks like @swiggy_in and @zomato appear to be having technical issues at the same time. pic.twitter.com/xz3cFn7V6L
— Sivakaminathan Muthusamy (@rsiva229) April 6, 2022
ಆನ್ಲೈನ್ನಲ್ಲಿ ಆಹಾರಕ್ಕಾಗಿ 30 ಅರ್ಧ ಗಂಟೆ ಕಾಯಬೇಕಾದ ಅಗತ್ಯವಿಲ್ಲ 10 ನಿಮಿಷಕ್ಕೆ ಆಹಾರ ನಿಮ್ಮ ಕೈ ಸೇರಲಿದೆ ಎಂದು ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಇತ್ತೀಚೆಗೆ ಹೊಸ ವ್ಯವಸ್ಥೆ ಬಗ್ಗೆ ಭರ್ಜರಿಯಾಗಿ ಘೋಷಿಸಿದ್ದರು.
@SwiggyCares
— suyash (@suyashvaidya1) April 6, 2022
Order from your favorite restaurant be like on swiggy 👏
No option for adding it to cart pic.twitter.com/nJPK6vUyJr
ಆದರೆ, ಇಂದು ಅನುಭವಿಸಿದ ಕಿರಿಕಿರಿ ಬಗ್ಗೆ ಗ್ರಾಹಕರು ವಿವರಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಅಣಕವಾಡಿದ್ದಾರೆ. ಸಾಲದ್ದಕ್ಕೆ ನೆಟ್ ಫ್ಲಿಕ್ಸ್ ಕೂಡಾ ತನ್ನ ಶೋ ಪ್ರಮೋಟ್ ಮಾಡಿ ಮಜಾ ತಗೊಂಡಿದೆ.
If the apps are down, who's taking the order of the Peaky Blinders? 🥺🍽️
— Netflix India (@NetflixIndia) April 6, 2022
-
ಮುಂಬೈಗೆ ಪರಿಸರ ಸ್ನೇಹಿ ವಿದ್ಯುತ್ ಪೂರೈಕೆ: ಅದಾನಿ ಎನರ್ಜಿಯಿಂದ 1,000 ಮೆಗಾವ್ಯಾಟ್ ಸಾಮರ್ಥ್ಯದ ಪವರ್ ಲಿಂಕ್ ಚಾಲನೆ -
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications