ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳ ಸಾಮೂಹಿಕ ರಾಜೀನಾಮೆಯಿಂದ ಎಲ್ಲಾ ಕಚೇರಿ ಮುಚ್ಚಿದ ಟ್ವಿಟ್ಟರ್‌

|
Google Oneindia Kannada News

ನವದೆಹಲಿ, ನವೆಂಬರ್‌ 18: ಟ್ವಿಟ್ಟರ್‌ ಸಿಇಒ ಎಲಾನ್ ಮಸ್ಕ್ ಅವರು ಹಾರ್ಡ್‌ಕೋರ್ ಟ್ವಿಟ್ಟರ್‌ 2.0 ಎಂದು ವಜಾ ಪ್ರಕ್ರಿಯೆಗಳನ್ನು ಘೋಷಿಸಿದ್ದಾರೆ. ನಂತರ ನೂರಾರು ಟ್ವಿಟ್ಟರ್‌ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಟ್ವಿಟ್ಟರ್ ಕಚೇರಿಗಳನ್ನು ಮುಚ್ಚಲಾಗುತ್ತಿದೆ.

ದ ವರ್ಜ್‌ ಹಾಗೂ ನ್ಯೂಯಾರ್ಕ್‌ ಟೈಮ್ಸ್‌ ವರದಿಗಳ ಪ್ರಕಾರ, ಟ್ವಿಟ್ಟರ್‌ ಉದ್ಯೋಗಿಗಳ ಕಂಪೆನಿಯಲ್ಲಿ ಉಳಿಯಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಗೂಗಲ್‌ ಫಾರ್ಮ್‌ನಲ್ಲಿ ಹೌದು ಎಂಬ ಆಯ್ಕೆಗೆ ಗುರುವಾರ ಮಧ್ಯಾಹ್ನ 2 ಗಂಟೆಯ ವರೆಗೆ ಸಮಯಾವಕಾಶವಿತ್ತು. ಆದರೆ ಉದ್ಯೋಗಿಗಳು ಸೆಲ್ಯೂಟ್‌ ಎಮೋಜಿಗಳನ್ನು ಕಳುಹಿಸಿ ವಿದಾಯ ಸಂದೇಶಗಳನ್ನು ಪೋಸ್ಟ್‌ ಮಾಡಲು ಪ್ರಾರಂಭಿಸಿದರು.

Largest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವುLargest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವು

ಟ್ವಿಟ್ಟರ್‌ನಲ್ಲಿ ಉತ್ತೇಜಕ ಪ್ರಯಾಣ ಮುಂದುವರೆಸಲು ಉದ್ಯೋಗಿಗಳು ಸೈನ್ ಇನ್ ಮಾಡಬಹುದು. ಇಲ್ಲವೇ ಕಂಪನಿಯಿಂದ ಬೇರ್ಪಡುವಿಕೆಗೆ ರಾಜೀನಾಮೆ ಮಾಡಬಹುದು ಎಂದು ಉದ್ಯೋಗಿಗಳಿಗೆ ಈ ಹಿಂದೆ ತಿಳಿಸಲಾಗಿತ್ತು. ಈಗ ರಾಜೀನಾಮೆಗಳ ರಾಶಿಯೇ ಬರುತ್ತಿದ್ದಂತೆ ಟ್ವಿಟ್ಟರ್ ಕಂಪೆನಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚುತ್ತಾ ಬರುತ್ತಿದೆ ಎಂದು ಟೆಕ್‌ ಪತ್ರಕರ್ತ ಝೋ ಸ್ಕಿಫರ್ ವರದಿ ಮಾಡಿದ್ದಾರೆ.

 Twitter closes all offices due to mass resignation of employees

ಆದರೆ ಕಂಪೆನಿಯನ್ನು ಹಾಳು ಮಾಡಲು ಉದ್ಯೋಗಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸಿಇಒ ಎಲಾನ್‌ ಮಸ್ಕ್‌ ಹಾಗೂ ಅವರ ತಂಡ ಭಯಭೀತರಾಗಿದ್ದಾರೆ. ಎಲಾನ್‌ ಮಸ್ಕ್‌ ಮತ್ಯಾವ ಉದ್ಯೋಗಿಗಳನ್ನು ತೆಗೆಯಬಹುದು ಎಂದು ನೋಡುತ್ತಿದ್ದಾರೆ ಎಂದು ಸ್ಕಿಫರ್ ಎಂಬುವವರು ವರದಿ ಮಾಡಿದ್ದಾರೆ.

Twitter lays off : ಟ್ವಿಟರ್‌ನಿಂದ ಮತ್ತೆ 4,400 ನೌಕರರ ವಜಾTwitter lays off : ಟ್ವಿಟರ್‌ನಿಂದ ಮತ್ತೆ 4,400 ನೌಕರರ ವಜಾ

ಸ್ಕಿಫರ್ ಅವರ ಪ್ರಕಾರ, ನವೆಂಬರ್ 21 ರಂದು ಟ್ವಿಟ್ಟರ್‌ ಕಚೇರಿಗಳು ಮತ್ತೆ ತೆರೆಯಲ್ಪಡುತ್ತವೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಮಸ್ಕ್ ಕಂಪನಿಯನ್ನು ಖರೀದಿಸಿದಾಗಿನಿಂದ ಟ್ವಿಟ್ಟರ್‌ನಲ್ಲಿ ರಾಜೀನಾಮೆ ಮತ್ತು ವಜಾಗೊಳಿಸುವಿಕೆ ನಡೆಯುತ್ತಿದೆ. ಹೊಸ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್‌ ಪರಿಶೀಲನೆಗಾಗಿ ಚಂದಾ ಪಾವತಿಸುವ ಕಾರ್ಯತಂತ್ರಕ್ಕಾಗಿ ಇದು ಮಾರಕವಾದ ಹೊಂದಿಕೆಯಾಗಿದೆ.

ಈ ಮಧ್ಯೆ ಟ್ವಿಟರ್ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ)ನಿಂದ ಅಪಾಯಕ್ಕೆ ಒಳಗಾಗಬಹುದಾಗಿದೆ. ಏಕೆಂದರೆ ಶುಕ್ರವಾರ ಮುಂಜಾನೆ ಏಳು ಡೆಮಾಕ್ರಟಿಕ್ ಸೆನೆಟರ್‌ಗಳು ಟ್ವಿಟರ್ ತನ್ನ ಗ್ರಾಹಕ ಗೌಪ್ಯತೆ ಒಪ್ಪಂದವನ್ನು ಉಲ್ಲಂಘಿಸಿದೆಯೇ ಎಂದು ತನಿಖೆ ಮಾಡುವಂತೆ ಏಜೆನ್ಸಿಗೆ ಪತ್ರವನ್ನು ಕಳುಹಿಸಿದ್ದಾರೆ. ಈಗ ಟ್ವಿಟರ್‌ನ 7,500 ಉದ್ಯೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ರಾಜೀನಾಮೆ ನೀಡಿ ಹಾಗೂ ವಜಾಗೊಳಿಸಲ್ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಟ್ವಿಟ್ಟರ್‌ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.

English summary
Hundreds of Twitter employees have resigned en masse after Twitter CEO Elon Musk announced layoffs as hardcore Twitter 2.0. In this background, Twitter offices are being closed everywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X