Get Updates
Get notified of breaking news, exclusive insights, and must-see stories!

ಟ್ವಿಟ್ಟರ್ ಬಾಸ್ ಮಾಡಿದ್ದ ಮೊದಲ ಟ್ವೀಟ್ ಭಾರಿ ಮೊತ್ತಕ್ಕೆ ಮಾರಾಟ

ವಾಷಿಂಗ್ಟನ್, ಮಾರ್ಚ್ 23: ಅಮೆರಿಕ ಮೂಲದ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಸಿಇಒ ಜಾಕ್ ಡೋರ್ಸಿ ಅವರ ಮೊಟ್ಟ ಮೊದಲ ಟ್ವೀಟ್ ಕೊನೆಗೂ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ಪ್ರಭಾವಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್‌ನಲ್ಲಿ ತಾವು ಹಲವು ವರ್ಷಗಳ ಮಾಡಿದ್ದ ಮೊದಲ ಟ್ವೀಟ್ ಹರಾಜಿಗಿಟ್ಟಿರುವುದಾಗಿ ಎರಡು ವಾರಗಳ ಹಿಂದೆ ಜಾಕ್ ಹೇಳಿದ್ದರು.

ಟ್ವೀಟ್ ಡಿಜಿಟಲ್ ಹರಾಜು ಮೊತ್ತ 2.9 ಮಿಲಿಯನ್ ಡಾಲರ್ (ಸುಮಾರು 20.9 ಕೋಟಿ ರು) ಎಂದು ಇದೀಗ ಬಹಿರಂಗಗೊಂಡಿದೆ. ಸುಮಾರು 15 ವರ್ಷಗಳ ಹಿಂದಿನ ಈ ಟ್ವೀಟ್ non-fungible token (NFT) (ಒಂದು ರೀತಿಯ ಡಿಜಿಟಲ್ ಆಸ್ತಿ) ಆಗಿ ಪರಿಗಣಿಸಲಾಗುತ್ತಿದೆ.

Twitter CEOs First Tweet Sold For $2.9 Million As Non-Fungible Token

2006ರ ಮಾರ್ಚ್ 21ರಂದು "just setting up my twttr" ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ನೋಡಿ

ಕ್ರಿಪ್ಟೋಕರೆನ್ಸಿ ಎಥರ್ ಬಳಸಿ 1630.5825601 ETH ನೀಡಿ ಟ್ವೀಟ್ ಖರೀದಿಸಲಾಗಿದೆ. ಇದರ ಮೌಲ್ಯ $2,915,835.47 ಎಂದು NFT ಹರಾಜು ಹಾಕುವ ಯುಎಸ್ ಮೂಲದ ಕಂಪನಿ ಸೆಂಟ್ ಸಿಇಒ, ಸಹ ಸ್ಥಾಪಕ ಕೆಮರೂನ್ ಹೆಜಾಜಿ ಹೇಳಿದ್ದಾರೆ.

ಈ ದಾಖಲೆ ಮೊತ್ತದ ಶೇ 95ರಷ್ಟು ಭಾಗ ಜಾಕ್ ಪಡೆಯಲಿದ್ದು, ಶೇ 5ರಷ್ಟು ಸೆಂಟ್ ಸಂಸ್ಥೆಗೆ ಸಲ್ಲಲಿದೆ. ಈ ಮೊತ್ತವನ್ನು ಆಫ್ರಿಕಾದಲ್ಲಿ ಕೊರೊನಾ ಪೀಡಿತ ಕುಟುಂಬಗಳಿಗೆ ನೀಡಲು ಬಯಸಿರುವುದಾಗಿ ಜಾಕ್ ಈಗಾಗಲೇ ಘೋಷಿಸಿದ್ದಾರೆ.

ಡೋರ್ಸಿ ಹರಾಜು ಮೊತ್ತದ ಬಿಟ್ ಕಾಯಿನ್ ರಸೀದಿಯನು ಟ್ವೀಟ್ ಮಾಡಿದ್ದಾರೆ. ಬಿಟ್ ಕಾಯಿನ್ ಮೌಲ್ಯ ಇಂದು 54,893.74 ಡಾಲರ್ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+