ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮೈಲಿಗಲ್ಲು: ಟಿವಿಎಸ್ ಸಂಸ್ಥೆಯ ಅಪಾಚೆ 40 ಲಕ್ಷ ಮಾರಾಟ

|
Google Oneindia Kannada News

ಹೊಸೂರು, ಅಕ್ಟೋಬರ್ 12: ವಿಶ್ವದಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹಗಳನ್ನು ಉತ್ಪಾದಿಸುವ ಪ್ರತಿಷ್ಠಿತ ಕಂಪನಿಯಾದ ಟಿವಿಎಸ್ ಮೋಟರ್ ಕಂಪನಿಯ ಪ್ರಿಮಿಯಮ್ ಮೋಟರ್ ಸೈಕಲ್ ಬ್ರಾಂಡ್ ಟಿವಿಎಸ್ ಅಪಾಚೆ ಜಾಗತಿಕ ಮಟ್ಟದಲ್ಲಿ 40 ಲಕ್ಷ ಮಾರಾಟದ ಮೈಲುಗಲ್ಲು ದಾಟಿದೆ.

2005ರಲ್ಲಿ ಬಿಡುಗಡೆಯಾದ ಟಿವಿಎಸ್ ಅಪಾಚೆ ಸರಣಿಯು ದೇಶದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಪ್ರಿಮಿಯಂ ಮೋಟರ್ ಸೈಕಲ್ ಬ್ರಾಂಡ್ ಆಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಕೂಡಾ ಪ್ರಬಲ ಅಸ್ತಿತ್ವವನ್ನು ಹೊಂದಿದೆ.

ಟಿವಿಎಸ್ ಮೋಟಾರ್ ಮಾರಾಟ ಪ್ರಮಾಣ ಜೂನ್‌ನಲ್ಲಿ ಶೇಕಡಾ 33ರಷ್ಟು ಇಳಿಕೆಟಿವಿಎಸ್ ಮೋಟಾರ್ ಮಾರಾಟ ಪ್ರಮಾಣ ಜೂನ್‌ನಲ್ಲಿ ಶೇಕಡಾ 33ರಷ್ಟು ಇಳಿಕೆ

ಈ ಅಭೂತಪೂರ್ವ ಸಾಧನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಟಿವಿಎಸ್ ಮೋಟರ್ ಕಂಪನಿಯ ನಿರ್ದೇಶಕ & ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್.ರಾಧಾಕೃಷ್ಣನ್, "ಜಾಗತಿಕ ಮಟ್ಟದಲ್ಲಿ ನಮ್ಮ ಪ್ರಿಮಿಯಮ್ ಮೋಟರ್ ಸೈಕಲ್ ಬ್ರಾಂಡ್ 40 ಲಕ್ಷ ಮಾರಾಟದ ಮೈಲುಗಲ್ಲು ದಾಟಿರುವ ಇಂದು ಟಿವಿಎಸ್ ಮೋಟರ್ ಕಂಪನಿಗೆ ಸ್ಮರಣೀಯ ದಿನವಾಗಿದೆ.

4 ಮಿಲಿಯನ್ ಜಾಗತಿಕ ಮಾರಾಟದ ಮೈಲಿಗಲ್ಲು ಆಚರಣೆಯ ನೆನಪಿಗಾಗಿ, ಟಿವಿಎಸ್ ಮೋಟಾರ್ ಕಂಪನಿ ತನ್ನ ಟಿವಿಎಸ್ ಅಪಾಚೆ ಗ್ರಾಹಕರ ಸಹಯೋಗದೊಂದಿಗೆ 957 ಅಡಿ "ಉದ್ದದ ಚೆಕ್ಕರ್ಡ್ ಫ್ಲ್ಯಾಗ್" ಅನ್ನು ರಚಿಸಿದೆ. ಜಾಗತಿಕವಾಗಿ ತಮ್ಮ ಗ್ರಾಹಕರಿಂದ ಚಿತ್ರಗಳನ್ನು ಸೋಸಿರ್ಂಗ್ ಮಾಡುವ ಮೂಲಕ, ಧ್ವಜವು ಅವರ ಪ್ರೀತಿ ಮತ್ತು ಬ್ರ್ಯಾಂಡ್ ಮೇಲಿನ ನಂಬಿಕೆಗೆ ಕೃತಜ್ಞತೆಯ ಅಭಿವ್ಯಕ್ತಿಯಾಗಿದೆ.

ಟಿವಿಎಸ್ ಮೈಸೂರು ಕಾರ್ಖಾನೆಯಲ್ಲಿ ಧ್ವಜ

ಟಿವಿಎಸ್ ಮೈಸೂರು ಕಾರ್ಖಾನೆಯಲ್ಲಿ ಧ್ವಜ

2,000 ಕ್ಕೂ ಹೆಚ್ಚು ಚಿತ್ರಗಳೊಂದಿಗೆ, ಚೆಕರ್ಡ್ ಧ್ವಜವು ತನ್ನ ಟಿವಿಎಸ್ ಮೈಸೂರು ಕಾರ್ಖಾನೆಯಲ್ಲಿ ಅತಿ ಉದ್ದದ ಚೆಕ್ಕರ್ ಧ್ವಜವನ್ನು ರಚಿಸಿದ್ದಕ್ಕಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದೆ. ಕಳೆದ ಹಲವು ವರ್ಷಗಳಿಂದ ಯುವ ಮತ್ತು ಮಹತ್ವಾಕಾಂಕ್ಷಿ ಸವಾರರು ಈ ಕ್ಷಮತೆ ಗುರಿಯಾಗಿಸಿದ ಪ್ರಿಮಿಯಂ ಮೋಟರ್ ಸೈಕಲ್ ಬ್ಗಗೆ ಅತೀವ ಆಸಕ್ತಿಯನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿ, ಟಿವಿಎಸ್ ಅಪಾಚೆ ಬ್ರಾಂಡ್, ಜಾಗತಿಕ ಮಟ್ಟದ ಮೋಟರ್ ಸೈಕಲ್ ಉತ್ಸಾಹಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಸೃಷ್ಟಿಸಿಕೊಂಡಿದೆ. ಅಪಾಚೆ ಮೋಟರ್ ಸೈಕಲ್‍ನ ಪ್ಲಾಟ್‍ಫಾರಂ ಕಂಪನಿಯ ತಂತ್ರಜ್ಞಾನಾತ್ಮಕ ಶಕ್ತಿಯನ್ನು ಪ್ರದರ್ಶಿಸಿದ್ದು, ಇದಕ್ಕಾಗಿ ಹಲವು ವರ್ಷಗಳ ಅನುಭವವನ್ನು ಮತ್ತು ರೇಸಿಂಗ್ ಪರಂಪರೆಯನ್ನು ಬಳಸಿಕೊಂಡಿದೆ.

ರಾಧಾಕೃಷ್ಣನ್ ಅಭಿಪ್ರಾಯ

ರಾಧಾಕೃಷ್ಣನ್ ಅಭಿಪ್ರಾಯ

ಮೋಟರ್ ಸೈಕಲ್ ಶ್ರೇಣಿ 160 ಸಿಸಿಯಿಂದ ಹಿಡಿದು 310ಸಿಸಿ ವರೆಗೂ ಇದ್ದು, ಮೋಟರ್ ಸೈಕಲ್ ಅನ್ನು ಪ್ರಿಮಿಯಂ ಮೋಟರ್ ಸೈಕಲ್ ಆಗಿ ರೂಪಿಸುವ ನಮ್ಮ ಪ್ರಯತ್ನವು ಈ ಉದ್ಯಮದಲ್ಲೇ ಮೊಟ್ಟಮೊದಲನೆಯದು ಎನಿಸುವ ಹಲವು ವೈಶಿಷ್ಟ್ಯಗಳನ್ನು ಸೇರಿಸಿದೆ. ಇಡೀ ವರ್ಗದಲ್ಲೇ ಅತ್ಯುತ್ತಮವಾದ ತಂತ್ರಜ್ಞಾನವನ್ನು ನಮ್ಮ ಗ್ರಾಹಕರಿಗೆ ಪರಿಚಯಿಸಿದ್ದು, ಇದರಲ್ಲಿ ಆರ್‍ಟಿ-ಫೈ ಎಂಜಿನ್ ಟೆಕ್, ಜಿಟಿಟಿ (ಗ್ಲೈಡ್ ಥ್ರೂ ಟೆಕ್ನಾಲಜಿ, ರೈಡ್ ಮೋಡ್ಸ್, ಸ್ಮಾರ್ಟ್‍ಎಕ್ಸೊನೆಟ್ ಮತ್ತು ಸ್ಲಿಪ್ಪರ್ ಕ್ಲಚ್ ಸೇರಿದೆ

"ಈ ಮೈಲುಗಲ್ಲನ್ನು ತಲುಪವ ನಿಟ್ಟಿನಲ್ಲಿ ನಮ್ಮ ಪಯಣವು ನಮ್ಮ ಅಪಾರವಾದ ಪರಿಶ್ರಮ ಅಡಗಿದ್ದು, ಇದು ಟಿವಿಎಸ್ ಅಪಾಚೆಯನ್ನು ನಿಜವಾಗಿಯೂ ಜಾಗತಿಕ ಬ್ರಾಂಡ್ ಆಗಿ ರೂಪಿಸಿದೆ. ಈ ಮೈಲುಗಲ್ಲು ಉತ್ಕೃಷ್ಟ ಉತ್ಪನ್ನವನ್ನು ನಮ್ಮ ಅಮೂಲ್ಯ ಗ್ರಾಹಕರಿಗೆ ಒದಗಿಸುವ ನಮ್ಮ ಬದ್ಧತೆಯ ಪ್ರತೀಕವಾಗಿದೆ" ಎಂದು ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.

ಅತಿ ಉದ್ದದ ಚೆಕ್ಕರ್ಡ್ ಧ್ವಜ

ಅತಿ ಉದ್ದದ ಚೆಕ್ಕರ್ಡ್ ಧ್ವಜ

40 ಲಕ್ಷದ ಮಾರಾಟ ಗಡಿ ತಲುಪಿದ ಸಂಭ್ರಮವನ್ನು ಆಚರಿಸುವ ನಿಟ್ಟಿನಲ್ಲಿ ಟಿವಿಎಸ್ ಅಪಾಚೆ, ಗ್ರಾಹಕರ ಸಹಭಾಗಿತ್ವದೊಂದಿಗೆ ಅತಿ ಉದ್ದದ ಚೆಕ್ಕರ್ಡ್ ಧ್ವಜವನ್ನು ಸೃಷ್ಟಿಸಿದ್ದು, ಇದು 957 ಅಡಿ ಉದ್ದವಿದೆ. ವಿಶ್ವದ ವಿವಿಧೆಡೆಯಿಂದ ಪಡೆದ ಗ್ರಾಹಕ ಮೂಲದ ಚಿತ್ರಗಳನ್ನು ಇದು ಹೊಂದಿದ್ದು, ಇದು ಬ್ರಾಂಡ್ ಮೇಲೆ ಪ್ರೀತಿ ಮತ್ತು ವಿಶ್ವಾಸವನ್ನು ಇರಿಸಿದ ನಮ್ಮ ಪ್ರತಿಷ್ಠಿತ ಗ್ರಾಹಕರಿಗೆ ನಾವು ವ್ಯಕ್ತಪಡಿಸುತ್ತಿರುವ ಕೃತಜ್ಞತೆಯ ಸಂಕೇತವಾಗಿದೆ. 2000ಕ್ಕೂ ಅಧೀಕ ಚಿತ್ರಗಳೊಂದಿಗೆ ಈ ಮಾಸ್ಟರ್‍ಪೀಸ್ ಸೃಷ್ಟಿಸಲಾಗಿದ್ದು, ಈ ಧ್ವಜವು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್‍ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ.

ಟಿವಿಎಸ್ ಅಪಾಚೆ ಸರಣಿಯು ಪ್ರಿಮಿಯಂ ಮೋಟರ್ ಸೈಕಲ್ ಬ್ರಾಂಡ್ ಆಗಿದ್ದು, ನೇಕೆಡ್ ಹಾಗೂ ಸೂಪರ್ ಸ್ಪೋರ್ಟ್ಸ್ ಹೀಗೆ ಎರಡು ವರ್ಗಗಳಲ್ಲಿದೆ. ಆರ್‍ಟಿಆರ್ (ರೇಸಿಂಗ್ ಥ್ರೋಟಲ್ ರೆಸ್ಪಾನ್ಸ್) ಸರಣಿಯ ನೇಕೆಡ್ ಮೋಟರ್ ಸೈಕಲ್ ವರ್ಗದಲ್ಲಿ ಟಿವಿಎಸ್ ಅಪಾಚೆ ಆರ್‍ಟಿಆರ್160, ಟಿವಿಎಸ್ ಅಪಾಚೆ ಆರ್‍ಟಿಆರ್ 1604ವಿ, ಟಿವಿಎಸ್ ಅಪಾಚೆ ಆರ್‍ಟಿಆರ್ 180 ಮತ್ತು ಟಿವಿಎಸ್ ಅಪಾಚೆ ಆರ್‍ಟಿಆರ್200 4ವಿಯನ್ನು ಹೊಂದಿದೆ.

ಬ್ರಾಂಡ್ ಟಿವಿಎಸ್ ಅಪಾಚೆ ಆರ್‍ಆರ್ 310

ಬ್ರಾಂಡ್ ಟಿವಿಎಸ್ ಅಪಾಚೆ ಆರ್‍ಆರ್ 310

ಸೂಪರ್ ಸ್ಪೋರ್ಟ್ಸ್ ಸರಣಿಯಲ್ಲಿ, ಬ್ರಾಂಡ್ ಟಿವಿಎಸ್ ಅಪಾಚೆ ಆರ್‍ಆರ್ 310 (ರೇಸ್ ರಿಪ್ಲಿಕಾ) (ಸೂಪರ್ ಪ್ರಿಮಿಯಂನಲ್ಲಿ ಮೊದಲ ಪ್ರವೇಶ) ವರ್ಗವನ್ನು 2017ರಲ್ಲಿ ಬಿಡುಗಡೆ ಮಾಡಿದೆ. ಇದು ಉತ್ಕೃಷ್ಟ ಕ್ಷಮತೆ ಮತ್ತು ಸವಾರಿ ಸಕ್ರಿಯತೆಯನ್ನು ಹೊಂದಿದ್ದು, ಆಕರ್ಷಕ, ಅಭಿವ್ಯಕ್ತಾತ್ಮಕ ವಿನ್ಯಾಸವನ್ನು ಹೊಂದಿದೆ. ಟಿವಿಎಸ್ ಅಪಾಚೆ ಆರ್‍ಆರ್ 310 ಮೋಟರ್ ಸೈಕಲ್ ಉತ್ಕೃಷ್ಟ ರೇಸ್ ತಂತ್ರಜ್ಞಾನವನ್ನು ಹೊಂದಿದ್ದು, ಇದರ ಪ್ರಮುಖ ವಿಶೇಷತೆಗಳಲ್ಲಿ ಥ್ರೋಟರ್ ಬೈ ವೈರ್ ತಂತ್ರಜ್ಞಾನ, ನಾಲ್ಕು ಸವಾರಿ ಮೋಡ್‍ಗಳು, ಅತ್ಯಾಧುನಿಕ ಟಿವಿಎಸ್ ಸ್ಮಾರ್ಟ್ ಎಕ್ಸೊನೆಟ್ ಸಶಕ್ತವಾದ 5 ಇಂಚಿನ ವರ್ಚುವಲ್ ಟಿಎಫ್‍ಟಿ ಮತ್ತು ಇತರ ಸೌಲಭ್ಯವನ್ನು ಹೊಂದಿದೆ.

English summary
Two-wheeler major TVS Motor Company on Monday said it has sold 40 lakh motorcycles of its premium brand, TVS Apache, globally since its launch in 2005.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X