ಐದು ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ

By: ಒನ್ಇಂಡಿಯಾ ಸಿಬ್ಬಂದಿ
Subscribe to Oneindia Kannada

ನಿಜ ಹೇಳಬೇಕೆಂದರೆ ಜೂನ್ ಮತ್ತು ಜುಲೈ ಬಂತೆಂದರೆ ಪ್ರವಾಸದ ಸಮಯ. ಕೆಲವೊಂದು ಶಾಲೆಗಳು ಶುರುವಾಗಿದ್ದರೂ, ಕೆಲವು ಶಾಲೆಗಳಿಗೆ ಇನ್ನೂ ಬಿಡುವಿರುವುದರಿಂದ ಮಕ್ಕಳು ಮರಿಗಳನ್ನೆಲ್ಲ ಕಟ್ಟಿಕೊಂಡು ಪ್ರವಾಸಕ್ಕೆ ತೆರಳುವ ಸುಸಮಯ.

ನಮ್ಮ ಸುಂದರ ದೇಶವೇ ಆಗಲಿ ಅಥವಾ ವಿದೇಶವೇ ಆಗಲಿ, ಸ್ನೇಹಿತರೊಡಗೂಡಿ ಸುತ್ತಾಡಿ ಅತ್ಯದ್ಭುತ ಸಮಯವನ್ನು ಕಣ್ಣಲ್ಲಿ, ಮನದಲ್ಲಿ ತುಂಬಿಕೊಳ್ಳುವ ಕಾಲ. ಈ ಬಾರಿ ನೀವೇನಾದರೂ ವಿದೇಶ ಪ್ರಯಾಣ ಕೈಗೊಳ್ಳಬೇಕೆಂಬು ಪ್ಲಾನಿಂಗ್ ಹಾಕಿಕೊಂಡಿದ್ದರೆ, ಈ ಲೇಖನ ನೀವು ಓದಲೇಬೇಕು.

ಹೋಗಬೇಕೆಂದುಕೊಂಡ ಸ್ಥಳಕ್ಕೆ ನಾವು ಯಾವ ರೀತಿ ಹೋಗುತ್ತೇವೆ ಎಂಬುದರ ಮೇಲೆ ಪ್ರವಾಸದ ಯಶಸ್ಸು ನಿಂತಿರುತ್ತದೆ. ಅದಕ್ಕಾಗಿ ನಿಮಗೆ ಸಹಾಯ ಮಾಡಲು ನಾವಿದ್ದೇವೆ. ಹಲವರು ಅಂತಾರಾಷ್ಟ್ರೀಯ ವಿಮಾನಯಾನವನ್ನು ಆಯ್ದುಕೊಳ್ಳುತ್ತಾರೆ. ಆದರೆ, ನಾವು ಮರೆಯುವ ಒಂದು ಪ್ರಮುಖ ಅಂಶವೆಂದರೆ, ನಮ್ಮ ಸುರಕ್ಷತೆ!

ಸ್ವತಂತ್ರ ಪ್ರಾಡಕ್ಟ್ ರೇಟಿಂಗ್ ವಿಮಾನ ಸುರಕ್ಷತಾ ವೆಬ್ ಸೈಟ್ ಏರ್‌ಲೈನ್ಸ್ ರೇಟಿಂಗ್ ಸಂಸ್ಥೆ ಸಮೀಕ್ಷೆ ನಡೆಸಿದ್ದು, 20 ಅತ್ಯಂತ ಸುರಕ್ಷಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಪಟ್ಟಿ ಮಾಡಿ ಉಪಕಾರ ಮಾಡಿದೆ. ಈ ವಿಮಾನಗಳಿಗೆ ಅಂತಾರಾಷ್ಟ್ರೀಯ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ನಿಂದ ಸುರಕ್ಷತಾ ಪ್ರಮಾಣಪತ್ರ ಕೂಡ ಲಭಿಸಿದೆ.

ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿರುವ ಮತ್ತು ವಿಮಾನ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವ ಅತ್ಯುತ್ತಮ 5 ವಿಮಾನಯಾನ ಸಂಸ್ಥೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಕ್ಯಾಥಿ ಪೆಸಿಫಿಕ್ ಏರ್ ವೇಸ್

ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಆಗಬೇಕೆಂಬ ಮಹದಾಸೆ ಹೊತ್ತುಕೊಂಡಿರುವ ಕ್ಯಾಥಿ ಪೆಸಿಫಿಕ್ ಪ್ರಯಾಣಿಕರ ಸುರಕ್ಷತೆ ಮತ್ತು ಸುಖಪ್ರಯಾಣದ ಬಗ್ಗೆ ಕಾಳಜಿ ವಹಿಸುತ್ತದೆ. 190ಕ್ಕೂ ಹೆಚ್ಚು ಸ್ಥಳಗಳಿಗೆ ಪ್ರಯಾಣಿಕರನ್ನು ಕೊಂಡೊಯ್ಯುವ ಈ ಸಂಸ್ಥೆ ನಿರಂತರವಾಗಿ ಉತ್ತಮ ಸೇವೆ ನೀಡುತ್ತ ಬಂದಿದ್ದು, ಪ್ರಾಡಕ್ಟ್ ಮತ್ತು ಸುರಕ್ಷತೆಗಾಗಿ 7 ಸ್ಟಾರ್ ಏರ್‌ಲೈನ್ಸ್‌ರೇಟಿಂಗ್ ಪಡೆದುಕೊಂಡಿದೆ.

ಸುರಕ್ಷತೆಯ ಜೊತೆಗೆ, ವಿಮಾನದಲ್ಲಿ ನೀಡುವ ಆದರಾತಿಥ್ಯ ಮತ್ತು ಮನರಂಜನೆಯಿಂದ ಹೆಚ್ಚು ಹೆಸರುವಾಸಿಯಾಗಿದೆ. ಇನ್ನೇನು ಬೇಕು? ಇದಲ್ಲದೆ, ಹಲವಾರು ಅಂತಾರಾಷ್ಟ್ರೀಯ ಪ್ರವಾಸಿ ಸಂಸ್ಥೆಗಳಿಂದ ಅತ್ಯುತ್ತಮ ಏರ್‌ಲೈನ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ನೀವು ಕಳವಳ ರಹಿತವಾದ ಪ್ರವಾಸ ಮಾಡಬೇಕೆಂದಿದ್ದರೆ ಕ್ಯಾಥಿ ಪೆಸಿಫಿಕ್ ಬೆಸ್ಟ್.

Top 5 Safest International Airlines That You Must Try On Your Next Vacation

2. ಎಮಿರೇಟ್ಸ್

ಕಳೆದ ಎರಡು ದಶಕಗಳಿಂದ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಸಾಕಷ್ಟು ಬೆಳವಣಿಗಳನ್ನು ಕಂಡಿದೆ. ಈ ಸಂಸ್ಥೆ ಜನರನ್ನು ತಲುಪುವಲ್ಲಿ ಮತ್ತು ಪ್ರಯಾಣಿಕರಿಗೆ ಉತ್ಕೃಷ್ಟ ಸೇವೆ ನೀಡುವಲ್ಲಿ ಮಾತ್ರ ಶ್ರಮಿಸುತ್ತಿಲ್ಲ, ಪ್ರಯಾಣಿಕರಿಗೆ ಸುರಕ್ಷತೆ ನೀಡುವುದು ಇದರ ಆದ್ಯತೆಯಾಗಿದೆ.

ಹಿಂದೆ ಸಂಭವಿಸಿದ ಕೆಲವು ಅವಘಡಗಳನ್ನು ಸರಿಯಾಗಿ ನಿಭಾಯಿಸಿರುವ ಎಮಿರೇಟ್ಸ್, ವಿಮಾನಯಾನ ಅತ್ಯಂತ ಸುರಕ್ಷಿತವಾಗಿದೆ ಮತ್ತು ಅಪಘಾತರಹಿತವಾಗಿರುವಂತೆ ನೋಡಿಕೊಂಡಿದೆ. ವೈವಿಧ್ಯಮಯ ವಿಮಾನಗಳು, ವಿಮಾನದಲ್ಲಿ ನೀಡುವ ಸೇವೆಯನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಪಯಣಕ್ಕೆ ಎಮಿರೇಟ್ಸ್ ಒಳ್ಳೆಯ ಆಯ್ಕೆಯಾಗಲಿದೆ.

Top 5 Safest International Airlines That You Must Try On Your Next Vacation

3. ಎತಿಹಾದ್ ಏರ್ವೇಸ್

ತನ್ನ ಉತ್ಕೃಷ್ಟ ಉತ್ಪನ್ನ, ಸುರಕ್ಷತೆ ಮತ್ತು ಅತೀ ಹೆಚ್ಚು ಬಳಸಲಾಗುತ್ತಿರುವ ಸಂಗತಿಗಳನ್ನು ಪರಿಗಣಿಸಿ ಎತಿಹಾಸ್ ಏರ್ವೇಸ್ ಏಳರಲ್ಲಿ ಏಳು ಅಂಕಗಳನ್ನು ಪಡೆದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ವಿಮಾನದಲ್ಲಿರುವ ಹಸನ್ಮುಖಿ ಗಗನಸಖಿಯರು, ಪರಿಚಾರಕಿಯರು ನಿಮ್ಮ ಮಾತ್ರವಲ್ಲ ನಿಮ್ಮ ಮಕ್ಕಳ ಯೋಗಕ್ಷೇಮವನ್ನೂ ತೆಗೆದುಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ವಲಯದಲ್ಲಿ ಎತಿಹಾದ್ ಏರ್ವೇಸ್ ಅತೀ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ವಿಮಾನಯಾನ ಸಂಸ್ಥೆ.

Top 5 Safest International Airlines That You Must Try On Your Next Vacation

4. ಲುಫ್ತಾನ್ಸಾ

ವಿಮಾನಯಾನ ಮಾಡುವವರಿಂದ ಮತ್ತು ಟೀಕಾರಾರರಿಂದ ಸತತವಾಗಿ ಪ್ರಶಂಸೆ ಪಡೆಯುತ್ತಿರುವ ಏಕೈಕ ವಿಮಾನಯಾನ ಸಂಸ್ಥೆಯೆಂದರೆ ಲುಫ್ತಾನ್ಸಾ. ಸುರಕ್ಷತೆಗಾಗಿ ಏರ್‌ಲೈನ್ಸ್‌ರೇಟಿಂಗ್‌ನಿಂದ 7 ಸ್ಟಾರ್ ಮತ್ತು ವಿಮಾನದಲ್ಲಿರುವ ಉತ್ಪನ್ನಗಳಿಗಾಗಿ 6 ತಾರಾ ಶ್ರೇಯಾಂಕ ಪಡೆದಿರುವ ಲುಫ್ತಾನ್ಸಾ ಜಗತ್ತಿನ ಅತ್ಯುತ್ತಮ ಐದು ವಿಮಾನಯಾನ ಸಂಸ್ಥೆಗಳಲ್ಲಿ ಒಂದು.

ಅದರಲ್ಲೂ ನೀವು ತಿನಿಸಿನ ಅಸ್ವಾದಕರಾಗಿದ್ದರೆ ಲುಫ್ತಾನ್ಸಾ ವಿಮಾನದಲ್ಲಿ ಅತ್ಯಂತ ರುಚಿಕಟ್ಟಾದ ತಿಂಡಿತಿನಿಸುಗಳು ದೊರೆಯುತ್ತದೆ. ಸುಖಕರ ಸೀಟುಗಳು, ಅತ್ಯುತ್ತಮ ಮನರಂಜನೆ ಮತ್ತು ಆದರಾತಿಥ್ಯದಿಂದಾಗಿ ಮೊದಲ ಬಾರಿ ಪಯಣಿಸುವವರಿಗೆ ಸಖತ್ ಅನುಭವ ಸಿಗುವುದಂತೂ ಗ್ಯಾರಂಟಿ.

Top 5 Safest International Airlines That You Must Try On Your Next Vacation

5. ಸಿಂಗಪುರ ಏರ್ ಲೈನ್ಸ್

ಕಡೆಯದಾದರೂ, ಸುರಕ್ಷತೆ ಮತ್ತು ಸುಖಕರ ಅನುಭವ ನೀಡುವಲ್ಲಿ ಸಿಂಗಪುರ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆ ಮುಂಚೂಣಿಯಲ್ಲಿದೆ. ಸುಖಕರ ಪ್ರವಾಸ ಬೇಕೆಂದರೆ, ವಿದೇಶ ಪಯಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಸಿಂಗಪುರ ಏರ್‌ಲೈನ್ಸನ್ನು ಆಯ್ಕೆ ಮಾಡಿಕೊಳ್ಳಲು ಅಡ್ಡಿಯಿಲ್ಲ.

Top 5 Safest International Airlines That You Must Try On Your Next Vacation

Disclaimer : ಮೇಲಿನವುಗಳನ್ನು ಹೊರತುಪಡಿಸಿ ಉಳಿದ ವಿಮಾನಯಾನ ಸಂಸ್ಥೆಗಳು ಕಳಪೆ ಮಟ್ಟದ ಸೇವೆ ನೀಡುತ್ತಿವೆ ಎಂಬುದು ಈ ಲೇಖನದ ಅರ್ಥವಲ್ಲ. ಇವುಗಳನ್ನು ಪರಿಗಣಿಸಬಹುದು ಎಂದು ಮಾತ್ರ ಇಲ್ಲಿ ಸೂಚಿಸಲಾಗಿದೆ. ಪ್ರಯಾಣ ಮಾಡುವಾಗ ಯಾವುದು ಅತ್ಯುತ್ತಮ ಎಂಬುದನ್ನು ನಿರ್ಧರಿಸಲು ನೀವೇ ಬೆಸ್ಟ್.

ಅಲ್ಲದೆ, ನೀವು ಇತರ ವಿಮಾನಯಾನ ಸಂಸ್ಥೆಯಲ್ಲಿ ಪಯಣಿಸಿ, ಅಲ್ಲಿಯೂ ಉತ್ಕೃಷ್ಟ ಸೇವೆ, ಸುರಕ್ಷತೆ ದಕ್ಕಿದ್ದರೆ ಅದರ ಬಗ್ಗೆ ಇಲ್ಲಿ ಬರೆಯಲು ಮರೆಯಬೇಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Are you planning for foreign tour during vacation? Be a domestic trip or a foreign tour, but these are the times when you can make beautiful memories with your friends and family! And this year, if you're planning an international trip, this article may be of interest to you.
Please Wait while comments are loading...