'ಟೊಮೊಟೊ ಬೆಲೆ ಇಳಿಯಲು ಇನ್ನೂ 15ದಿನಗಳು ಬೇಕು'

Posted By:
Subscribe to Oneindia Kannada

ನವದೆಹಲಿ, ಜುಲೈ 30: ದೇಶದ ಹಲವೆಡೆ ಒಂದು ಕೆಜಿ ಟೊಮೊಟೊ ಬೆಲೆ 100 ರೂಪಾಯಿ ತನಕ ಏರಿಕೆಯಾಗಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ-ಅಂಶಗಳ ಲೆಕ್ಕಾಚಾರದಂತೆ ಟೊಮಾಟೊ ಬೆಲೆ ಇಳಿಯಲು ಕನಿಷ್ಠ ಇನ್ನೂ 15ದಿನಗಳ ಸಮಯ ಬೇಕಾಗಿದೆ.

ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!

ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಲ ಹಾಗೂ ಒಡಿಶಾ ರಾಜ್ಯಗಳು ದೇಶದಲ್ಲಿ ಹೆಚ್ಚು ಟೊಮ್ಯಾಟೊ ಉತ್ಪಾದಿಸುವ ರಾಜ್ಯಗಳಾಗಿವೆ.'ದಕ್ಷಿಣ ರಾಜ್ಯಗಳು ಮತ್ತು ಟೊಮೊಟೊ ಬೆಳೆಯುತ್ತಿರುವ ಇತರ ಪ್ರದೇಶಗಳಿಂದ ಸರಬರಾಜಿನಲ್ಲಿ ಸುಧಾರಣೆಯಾಗಲಿದೆ' ಎಂದು ಕೃಷಿ ಸಂಶೋಧನಾ ಮಂಡಳಿಯ ತೋಟಗಾರಿಕಾ ವಿಜ್ಞಾನ ವಿಭಾಗದ ಪ್ರಧಾನ ಉಪ ನಿರ್ದೇಶಕ ಜನರಲ್ ಎ.ಕೆ ಸಿಂಗ್‌ ತಿಳಿಸಿದ್ದಾರೆ.

‘Tomato prices likely to decline in next 15 days’

ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ವ್ಯತ್ಯಾಸ ಕಂಡು ಬಂದಿದೆ. ಇನ್ನು ಹರ್ಯಾಣ, ಪಂಜಾಬ್ ಸೇರಿದಂತೆ ಹಲವೆಡೆ ಅಕಾಲಿಕ ಮಳೆಗೆ ಟೊಮ್ಯಾಟೊ ಬೆಳೆ ಹಾಳಾಗಿದೆ. ಉತ್ತರ ಭಾರತದಲ್ಲಿ ಕಳೆದ ತಿಂಗಳು ಬಿಸಿಲಿಗೂ ಟೊಮ್ಯಾಟೊ ಬಾಡಿ ಹೋಗಿದೆ.

ಈರುಳ್ಳಿಗೆ ಹೋಲಿಸಿದರೆ ಟೊಮ್ಯಾಟೊಗೆ ಆಯಸ್ಸು ಕಮ್ಮಿ. ಚಟ್ನಿ, ಸಾರು, ಜಾಮ್, ಗೊಜ್ಜು ಹೀಗೆ ಮಾರುಕಟ್ಟೆಯಿಂದ ತಂದ ದಿನವೇ ಬಳಸುವುದು ಮಾಮೂಲಿ. ಹೀಗಾಗಿ ಕಳೆದ ವಾರದ ಟೊಮ್ಯಾಟೊ ಯಾರು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಮಾರಾಟಗಾರರು ಹಾಗೂ ಗ್ರಾಹಕರಿಬ್ಬರಿಗೂ ಆತಂಕ ಸಹಜವಾಗಿದೆ.

Tomato Prices Are Ruling To Rs.100 Per KG | Oneindia Kannada

ನಗೆ ಉಕ್ಕಿಸುತ್ತಿರುವ ಟೊಮೆಟೋ ಜೋಕ್ಸ್!

ಒಂದು ಕೆಜಿ ಟೊಮೊಟೊಗೆ ಕೋಲ್ಕತ್ತಾದಲ್ಲಿ 95 ರೂ., ದೆಹಲಿಯಲ್ಲಿ 95 ರೂ., ಮುಂಬೈನಲ್ಲಿ 80 ರೂ., ಚೆನ್ನೈನಲ್ಲಿ 55 ರೂ., ಲಕ್ನೋದಲ್ಲಿ 95ರೂ., ಭೋಪಾಲ್‌, ತಿರುವನಂತಪುರಂನಲ್ಲಿ 90 ರೂ., ಜೈಪುರ್‌ 65 ರೂ., ಅಹ್ಮದಾಬಾದ್‌, ಪಾಟ್ನಾದಲ್ಲಿ 60 ರೂ., ಬೆಂಗಳೂರಲ್ಲಿ 75 ರೂ., ಹೈದರಾಬಾದ್‌ನಲ್ಲಿ 75 ರೂ.ಗೆ ಮಾರಾಟವಾಗಿದೆ. ಗುಣಮಟ್ಟದ ಟೊಮೊಟೊ ಬೆಲೆಯಲ್ಲಿ ಬದಲಾಗುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tomato prices in metros were ruling at Rs 95/kg in Kolkata, Rs 92/kg in Delhi, Rs 80/kg in Mumbai and Rs 55/kg in Chennai on June 29, as per the ministry data. The rates in producing centres have also gone up sharply. The prices vary depending on the variety and quality.
Please Wait while comments are loading...