• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೈಟಾನ್ ನಿಂದ ಫೈಬರ್ ಸರಣಿ ಹೊಸ ಗಡಿಯಾರ

By Mahesh
|

ಬೆಂಗಳೂರು, ಆಗಸ್ಟ್ 25: ದೇಶದಲ್ಲಿ ಬೃಹತ್ ಮಾರಾಟ ಹೊಂದಿರುವ ಕೈಗಡಿಯಾರ ಬ್ರ್ಯಾಂಡ್ ಟೈಟಾನ್ ಕಂಪನಿ ಲಿಮಿಟೆಡ್ ನ ಸೊನಾಟ, ತನ್ನ ಬ್ರ್ಯಾಂಡ್ ನ ಸೂಪರ್ ಫೈಬರ್ ಸರಣಿಯಲ್ಲಿ ಹೊಸ ಕೈಗಡಿಯಾರಗಳನ್ನು ಪರಿಚಯಿಸಿದೆ.

ಸೊನಾಟ ಎಸ್‍ಎಫ್, ಸಾಹಸಮಯರಿಗೆ ಉತ್ತೇಜನ ನೀಡುವ ಏಕೈಕ ಕೈಗಡಿಯಾರ ಮತ್ತು ತನ್ನ ಗ್ರಾಹಕರಿಗೆ ಕ್ರಾಂತಿಕಾರಕ ಉತ್ಪನ್ನ ನೀಡುವ ಗುರಿ ಹೊಂದಿದೆ. ವಿಭಿನ್ನ ಸರಣಿಯ ಟಚ್‍ಸ್ಕ್ರೀನ್ ಕೈಗಡಿಯಾರಗಳು ಇದಾಗಿವೆ.

ಟೈಟಾನ್ ಕಂಪನಿ ಲಿಮಿಟೆಡ್ ನ ವಾಚ್ ಮತ್ತು ಸಂಬಂಧಿ ಸರಕು ವಿಭಾಗದ ಸಿಇಒ ಎಸ್.ರವಿಕಾಂತ್ ಹಾಗೂ ಇದೇ ವಿಭಾಗದ ಮುಖ್ಯ ಮಾರುಕಟ್ಟೆ ಅಧಿಕಾರಿ ಸುಪರ್ಣ ಮಿತ್ರ ಸೊನಾಟ ಎಸ್‍ಎಫ್ ನ ಹೊಸ ಲಾಂಛನವನ್ನು ಬಿಡುಗಡೆಗೊಳಿಸಿದರು. ಈ ಮೈಲುಗಲ್ಲನ್ನು ಸಂಭ್ರಮಿಸಿದ ಇವರು, ಕ್ರೀಡೆ ಮತ್ತು ತಂತ್ರಜ್ಞಾನದ ಮಿಶ್ರಣವಾಗಿರುವ ಟಚ್ ಸರಣಿಯ ಕೈಗಡಿಯಾಗಳನ್ನು ಬಿಡುಗಡೆ ಮಾಡಿದರು.

ಸಿಇಒ ಎಸ್.ರವಿಕಾಂತ್: ಈ ಕುರಿತು ಪ್ರತಿಕ್ರಿಯಿಸಿದ ಟೈಟಾನ್ ಕಂಪನಿ ಲಿಮಿಟೆಡ್‍ನ ವಾಚ್ ಮತ್ತು ಸಂಬಂಧಿ ಸರಕು ವಿಭಾಗದ ಸಿಇಒ ಎಸ್.ರವಿಕಾಂತ್, ಸೊನಾಟ ಸೂಪರ್ ಫೈಬರ್ ನಿಜವಾಗಿ ಆಟ ಬದಲಿಸಿದ ಆಟಗಾರ. ದೇಶದ ಮೊದಲ ಟಚ್‍ಸ್ಕ್ರೀನ್‍ನಿಂದ ಸಂಶೋಧನಾತ್ಮಕ ಓಷಿಯಾನ ಸರಣಿವರೆಗಿನ ಸಂಗ್ರಹವನ್ನು ನೀಡಿದೆ. ಇಂದು ಸೂಪರ್ ಫೈಬರ್‍ನಲ್ಲಿ ಹೊಸ ಹೆಗ್ಗುರುತಾದ ಎಸ್‍ಎಫ್ ಅನ್ನು ಬಿಡುಗಡೆಗೊಳಿಸಲು ಸಂತಸವಾಗುತ್ತಿದೆ.

ಎಸ್‍ಎಫ್ ನೊಂದಿಗೆ ಭಾರತದ ಗ್ರಾಹಕರಿಗೆ ವಿಭಿನ್ನ ಮತ್ತು ಮಾರ್ಗ ಬದಲಿ ಉತ್ಪನ್ನ ನೀಡುವುದನ್ನು ಎದುರು ನೋಡುತ್ತಿದ್ದೇವೆ. ಎಲ್ಲರ ಹೃದಯದಲ್ಲೂ ಸಾಹಸವನ್ನು ಮೂಡಿಸುತ್ತೇವೆ ಎಂದರು.

ಸ್ಲೈಡ್ ಟಚ್ ಕೈಗಡಿಯಾರಗಳನ್ನು ಟಚ್‍ಸ್ಕ್ರೀನ್ ಫೋನ್ ಗಳಿಗೆ ಸಾಟಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ನೀವು 4 ದಿಕ್ಕುಗಳಲ್ಲಿಯೂ ಸ್ವೈಪ್ ಮಾಡಬಹುದು.

ಡ್ಯುಯಲ್ ಟೈಂ, ಟಚ್ ಪ್ಯಾಡ್, ವಾಟರ್ ಸಿಸ್ಟೆನ್ಸ್, ಇಎಲ್ ಬ್ಯಾಕ್‍ಲೈಟ್, ಕೌಂಟ್ ಡೌನ್ ಟೈಮರ್, ಆಲಾರಾಂ, ಸ್ಟಾಪ್‍ವಾಚ್, 100 ವರ್ಷದ ಕ್ಯಾಲೆಂಡರ್ ಮೊದಲಾದವುಗಳನ್ನು ಹೊಂದಿದೆ. ಇತರ ಎಲ್ಲ ಎಸ್‍ಎಫ್ ಕೈಗಡಿಯಾರಗಳಂತೆ ಅಕ್ರಿನೊನೈಟ್ರೈಲ್ ಉತ್ಪನ್ನದಿಂದ(ಎಬಿಎಸ್) ಮಾಡಲಾಗಿದೆ.

3 ವಿಭಿನ್ನ ವಿನ್ಯಾಸ ಹಾಗೂ 13 ಮಾದರಿಗಳಲ್ಲಿ ಕೈಗಡಿಯಾರ ಲಭ್ಯವಿದೆ. ದರ 1,799 ಮತ್ತು 2,899ರೂ. ದೇಶದ 8000ಕ್ಕೂ ಅಧಿಕ ವಲ್ರ್ಡ್ ಆಫ್ ಟೈಟಾನ್ ಮಳಿಗೆಗಳು, ಮಲ್ಟಿಬ್ರ್ಯಾಂಡ್ ಮಳಿಗೆ ಹಾಗೂ ಅಧಿಕೃತ ವಿತರಕರಲ್ಲಿ ಲಭ್ಯವಿದೆ.

ಸೊನಾಟ ಕುರಿತು : ದೇಶದ ಕೈಗಡಿಯಾರ ಉದ್ಯಮದ ಬೃಹತ್ ಸಂಸ್ಥೆ ಟೈಟಾನ್ ಇಂಡಸ್ಟ್ರಿಯ ಅತಿ ಹೆಚ್ಚು ಮಾರಾಟ ಹೊಂದಿರುವ ಕೈಗಡಿಯಾರ ಬ್ರ್ಯಾಂಡ್ ಸೊನಾಟ. ಅತ್ಯುತ್ತಮ ಗುಣಮಟ್ಟದೊಂದಿಗೆ ಹಣಕ್ಕೆ ತಕ್ಕ ಮೌಲ್ಯ ನೀಡುವ ಕೈಗಡಿಯಾರವಾಗಿದ್ದು ವಾರ್ಷಿಕ 46 ಲಕ್ಷ ಕೈಗಡಿಯಾರಗಳ ಮಾರಾಟ ಹೊಂದಿದೆ.

ದೇಶದ 8,000 ರೀಟೇಲ್ ಗಳಲ್ಲಿ ಲಭ್ಯವಿದೆ. ಕನಿಷ್ಠ 1 ವರ್ಷ ವಾರೆಂಟಿ ಹೊಂದಿದೆ. 550ಕ್ಕೂ ಅಧಿಕ ಮಾದರಿ ಕೈಗಡಿಯಾರಗಳು ಮಹಿಳೆ ಹಾಗೂ ಪುರುಷರಿಗೆ ನಾನಾ ಬಗೆಯ ವಿನ್ಯಾಸ, ಬಣ್ಣಗಳಲ್ಲಿ ಲಭ್ಯ. ಸ್ಟೀಲ್ ವಾಚ್, ಫೈಬರೆ, ಬಿ ಮೆಟಲ್, ಲೆದರ್‍ಸ್ಟ್ರಾಪ್ ಮತ್ತು ಗೋಲ್ಡ್ ವಾಚ್ ಗಳಿವೆ. ಹೆಚ್ಚಿನ ಮಾಹಿತಿಗೆ www.sonatawatches.in ತಾಣ ನೋಡಬಹುದು.

ಟೈಟಾನ್ ಕಂಪನಿ ಲಿಮಿಟೆಡ್: ಟೈಟಾನ್ ಕಂಪನಿ ಲಿಮಿಟೆಡ್(ಈ ಹಿಂದಿನ ಟೈಟಾನ್ ಇಂಡಸ್ಟ್ರೀಸ್), ಟಾಟಾ ಸಮೂಹ ಹಾಗೂ ತಮಿಳುನಾಡು ಕೈಗಾರಿಕೆ ಅಭಿವೃದ್ಧಿ ನಿಗಮ(ಟಿಐಡಿಸಿಒ) ಸಹಭಾಗಿತ್ವದೊಂದಿಗೆ ರಚನೆಗೊಂಡಿದೆ. 1984ರಿಂದ ಟೈಟಾನ್ ವಾಚಸ್ ಲಿಮಿಟೆಡ್ ಹೆಸರಿನಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ. 1994ರಲ್ಲಿ ಟೈಟಾನ್ ಇಂಡಸ್ಟ್ರೀಸ್, ತಾನಿಷ್ಕ್‍ನೊಂದಿಗೆ ಆಭರಣ ಉದ್ಯಮದತ್ತ ದಾಪುಗಾಲಿಟ್ಟಿತು. ಪ್ರಸ್ತುತ ಕನ್ನಡಕ ವಹಿವಾಟಿನಲ್ಲೂ ಸಕ್ರಿಯವಾಗಿದೆ.

ಈ ನಿಟ್ಟಿನಲ್ಲಿ ಟೈಟಾನ್ ಐ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಟೈಟಾನ್ ಇಂಡಸ್ಟ್ರೀಸ್, ಆಭರಣ ಮತ್ತು ಕೈಗಡಿಯಾರ ಉತ್ಪಾದನೆ ಹಾಗೂ ಮಾರಾಟದ ಮುಂಚೂಣಿ ಸಂಸ್ಥೆಯಾಗಿದೆ. ಸ್ಕಿನ್ ಮೂಲಕ ಸುಗಂಧ ಕ್ಷೇತ್ರವನ್ನೂ ಪ್ರವೇಶಿಸಿದೆ. ಇತ್ತೀಚಿನ ವರ್ಷದಲ್ಲಿ ಫಾಸ್ಟ್‍ಟ್ರ್ಯಾಕ್ ಬ್ರ್ಯಾಂಡ್ ಅಡಿಯಲ್ಲಿ ಹೆಲ್ಮೆಟ್ ಕ್ಷೇತ್ರಕ್ಕೂ ಕಾಲಿಟ್ಟಿದೆ.

ಇಂದು ಟೈಟಾನ್ ಕಂಪನಿ ಟಾಟಾ ಸಮೂಹದ ಬೃಹತ್ ಗ್ರಾಹಕ ಆಧಾರಿತ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಶೇ. 70ರಷ್ಟು ಷೇರು ಹೊಂದಿದ್ದು, 2014-15ರಲ್ಲಿ 11,791 ಕೋಟಿ ರೂ. ಮಾರಾಟ ಆದಾಯ ನಡೆಸಿದೆ. ಕಳೆದ ವರ್ಷಕ್ಕಿಂತ ಶೇ.9ರಷ್ಟು ಬೆಳವಣಿಗೆ ದಾಖಲಿಸಿದೆ.

English summary
Sonata, the watch brand from Titan Company, has unveiled a new range of touch-screen adventure watches that combine sports and technology. It has launched SF, a brand new identity for its Super Fibre range of watches. the new SF touch-screen collection is priced between ₹1,799 and ₹2,899.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X