ಈತನೇ ಪಿಎನ್ ಬಿ ಹಗರಣದ ಮಾಸ್ಟರ್ ಮೈಂಡ್!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ಮಾರ್ಚ್ 07: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ತಂಡವು ಬಹು ಮುಖ್ಯ ಅರೋಪಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈತನೇ ಪಿಎನ್ ಬಿ ಹಗರಣದ ಮಾಸ್ಟರ್ ಮೈಂಡ್ ವಿಪುಲ್ ಚಿಟಾಲಿಯಾ.

ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಸಮೂಹ ಸಂಸ್ಥೆಯ ಬ್ಯಾಂಕಿಂಗ್ ವ್ಯವಹಾರಗಳ ಉಪಾಧ್ಯಕ್ಷ. 12 ಸಾವಿರ ಕೋಟಿ ರು ಹಗರಣದ ಸಂಪೂರ್ಣ ರೂಪುರೇಷೆ ಗೊತ್ತಿರುವ ಚಿಟಾಲಿಯಾನನ್ನು ಈ ಪ್ರಕರಣದಲ್ಲಿ 19ನೇ ಆರೋಪಿಯಾಗಿ ಹೆಸರಿಸಿರುವುದು ಅಚ್ಚರಿಯಾದರೂ ಸತ್ಯ.

ಮೆಹುಲ್ ಚೊಕ್ಸಿಗೆ ಸೇರಿದ 41 ಆಸ್ತಿ ಜಪ್ತಿ ಮಾಡಿದ 'ಇಡಿ'

This is the mastermind of the Rs 12,000 crore PNB scam

ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಕೇಂದ್ರದ ಆರ್ಧಿಕ ವ್ಯವಹಾರಗಳ ಮೇಲೆ ನಿಗಾ ಇಡುವ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಡೆಪ್ಯುಟಿ ಮ್ಯಾನೇಜರ್ ಗೋಕುಲ್ ನಾಥ್ ಶೆಟ್ಟಿ ಜತೆ ನೇರವಾಗಿ ಸಂಪರ್ಕ ಸಾಧಿಸಿದ್ದ ವಿಪುಲ್, ಅವ್ಯವಹಾರಗಳ ಕಾಗದ ಪತ್ರ, ಒಪ್ಪಂದಗಳನ್ನು ಬೇಕಾದ ಹಾಗೆ ತಿರುಚಿ ಬಳಸಿಕೊಳ್ಳುವ ಜಾಣ್ಮೆ ಹೊಂದಿದ್ದಾನೆ.

ಗೀತಾಂಜಲಿಯ ಮೆಹುಲ್ ವಿರುದ್ಧ ಕಂಗನಾ ಆರೋಪ

ವಿಪುಲ್ ಅಣತಿಯಂತೆ ಗೀತಾಂಜಲಿ ಗ್ರೂಪ್ ನ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ನಿತಿನ್ ಸಾಹಿ, ವ್ಯವಹಾರಗಳನ್ನು ಕುದುರಿಸುತ್ತಿದ್ದ ಎಂದು ಸಿಬಿಐ ಹೇಳಿದೆ. ಎಲ್ಲವನ್ನು ಮೆಹುಲ್ ಚೊಕ್ಸಿಗೆ ವಿಪುಲ್ ವರದಿ ಮಾಡುತ್ತಿದ್ದ. ಈ ಆರ್ಥಿಕ ಅವ್ಯವಹಾರ ಹೊರಗೆ ಬರುತ್ತಿದ್ದಂತೆ ಚೋಕ್ಸಿ ಹೇಗೆ ದೇಶವನ್ನು ತೊರೆಯಲು ಯೋಜನೆ ಹಾಕಿಕೊಂಡರು. ಜನವರಿ ಮೊದಲ ವಾರದಲ್ಲೇ ದುಬೈಗೆ ಹಾರಿದ್ದರು ಎಂದು ವಿಚಾರಣೆ ವೇಳ್ ವಿಪುಲ್ ಹೇಳಿದ್ದಾನೆ.(ಒನ್ಇಂಡಿಯಾ ಸುದ್ದಿ)

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On Tuesday, the Central Bureau of Investigation made a crucial arrest in connection with the PNB scam. Vipul Chitalia the vice-president banking operations, Gitanjali Group of Companies was arrested from the Mumbai airport upon arrival from Bangkok

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ