ಜಿಯೊ ಎಫೆಕ್ಟ್ ನಿಂದಾಗಿ ಏರ್ ಟೆಲ್ ಲಾಭದಲ್ಲಿ ಶೇ. 54ರಷ್ಟು ನಷ್ಟ!

Posted By:
Subscribe to Oneindia Kannada

ನವದೆಹಲಿ, ಜನವರಿ 25: ರಿಲಯನ್ಸ್ ಕಂಪನಿಯ 'ಜಿಯೊ ನೆಟ್ ವರ್ಕ್', ದೂರ ಸಂಪರ್ಕ ಕ್ಷೇತ್ರದಲ್ಲಿ ಕಾಲಿಟ್ಟಾಗಿನಿಂದ ಈ ಕ್ಷೇತ್ರದಲ್ಲಿ ಹಲವಾರು ಏರುಪೇರುಗಳಾಗಿವೆ. ಇದು ಭಾರತೀಯ ಮೊಬೈಲ್ ನೆಟ್ ವರ್ಕ್ ಕ್ಷೇತ್ರದ ರಾಜನಂತಿದ್ದ ಏರ್ ಟೆಲ್ ಸಂಸ್ಥೆಗೂ ಜಿಯೋ ಬಿಸಿ ತಟ್ಟಿದೆ.

ಮಂಗಳವಾರ, ಏರ್ ಟೆಲ್ ಸಂಸ್ಥೆಯ 2015-16ನೇ ಸಾಲಿನ ತೃತೀಯ ತ್ರೈ ಮಾಸಿಕ ಆದಾಯವನ್ನು ಬಿಡುಗಡೆಗೊಳಿಸಿದ್ದು, ಕಳೆದ ವರ್ಷದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ, ಸಂಸ್ಥೆಯ ಲಾಭ ಶೇ. 54ರಷ್ಟು ಕುಸಿದಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಜಿಯೊ ಸಂಸ್ಥೆಯು ಮಾರುಕಟ್ಟೆಗೆ ಕಾಲಿಟ್ಟ ಪರಿಣಾಮ ಎಂಬುದರಲ್ಲಿ ಎರಡು ಮಾತಿಲ್ಲ ಎನ್ನಲಾಗಿದೆ.

Third quarter profit of Airtel droped by 53 percent due to Jio rate war

ಕಂಪನಿ ಬಿಡುಗಡೆಗೊಳಿಸಿರುವ ಮಾಹಿತಿಯ ಪ್ರಕಾರ, ಏರ್ ಟೆಲ್ ಸಂಸ್ಥೆಯು ತನ್ನ ಮೂರನೇ ಕ್ವಾರ್ಟರ್ ಅವಧಿಯಲ್ಲಿ 503.7 ಕೋಟಿ ಗಳಿಸಿದೆ. 2015ರ 3ನೇ ತ್ರೈಮಾಸಿಕ ಅವಧಿಯಲ್ಲಿ ಏರ್ ಟೆಲ್ ಸಂಸ್ಥೆಯು 1,108.1 ಕೋಟಿ ರು.ಗಳನ್ನು ಲಾಭ ಗಳಿಸಿತ್ತು. ಆದರೆ, ಈ ಬಾರಿ ಮಾತ್ರ ಅದರ ಲಾಭಾಂಶ ಅರ್ಧದಷ್ಟು ಕುಸಿತ ಕಂಡಿದೆ.

ಅಷ್ಟೇ ಅಲ್ಲ, 2015-16ನೇ ಹಣಕಾಸು ವರ್ಷದಲ್ಲಿ ಏರ್ ಟೆಲ್ ಕಂಪನಿಯ ಒಟ್ಟಾರೆ ಆದಾಯವೂ ಶೇ. 3ರಷ್ಟು ಕುಸಿತ ಕಂಡಿದೆಯಂತೆ. 2013-14ರಲ್ಲಿ ಕಂಪನಿಯ ಆದಾಯ 24,103.4 ಕೋಟಿಯಷ್ಟಿದ್ದರೆ, 2014-15ರಲ್ಲಿ ಕಂಪನಿ ಆದಾಯವು 23,363.9 ಕೋಟಿಯಾಗಿದೆ ಎಂದು ಕಂಪನಿ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telecom major Bharti Airtel on Monday reported over 54 percent fall in net profit to Rs 503.7 for the October-December quarter due to newcomer Reliance Jio offers.
Please Wait while comments are loading...