• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಕ್ಟೋಬರ್ 15ರ ವರೆಗೆ ಕಾಲಾವಕಾಶ

|

ಬೆಂಗಳೂರು, ಸೆಪ್ಟೆಂಬರ್ 24: ವಿವಿಧ ವಲಯಗಳಿಂದ ಮನವಿ ಬಂದ ಹಿನ್ನೆಲೆಯಲ್ಲಿ 2018-19ನೇ ಅಸೆಸ್ ಮೆಂಟ್ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ದಾಖಲಿಸುವ ಹಾಗೂ ಆಡಿಟ್ ವರದಿಯನ್ನು ಸಲ್ಲಿಕೆ ಮಾಡಲು ಅವಧಿಯನ್ನು ಅಕ್ಟೋಬರ್ 15ರ ವರೆಗೆ ವಿಸ್ತರಣೆ ಮಾಡಲು ನೇರ ತೆರಿಗೆ ಕೇಂದ್ರೀಯ ಮಂಡಳಿ ತೀರ್ಮಾನ ಮಾಡಿದೆ.

ಮೊದಲಿಗೆ ಆಗಸ್ಟ್ ಮೂವತ್ತರವರೆಗೆ ಇದ್ದ ಅವಧಿಯನ್ನು ವಿಸ್ತರಿಸಲಾಗಿತ್ತು. ಆ ನಂತರ ಮತ್ತೂ ಕಾಲಾವಕಾಶ ನೀಡಿ, ಸೆಪ್ಟೆಂಬರ್ 30ರ ತನಕ ಸಮಯ ನೀಡಲಾಗಿತ್ತು. ಇದೀಗ ವಿವಿಧ ವಲಯಗಳಿಂದ ಮತ್ತಷ್ಟು ಕಾಲಾವಕಾಶಕ್ಕಾಗಿ ಬೇಡಿಕೆ ಬಂದಿದ್ದರಿಂದ ಹೀಗೊಂದು ತೀರ್ಮಾನ ಮಾಡಲಾಗಿದೆ.

ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?

ಅಂದಹಾಗೆ ಈಚೆಗೆ ಎಲ್ಲ ಕ್ಲೇಮುಗಳನ್ನೂ ಆದಾಯ ತೆರಿಗೆ ಇಲಾಖೆ ಗಮನಿಸುತ್ತಿದೆ. ಯಾವುದೇ ಖರ್ಚಿನ ಬಾಬ್ತನ್ನು ಸಾಕ್ಷ್ಯ ಸಹಿತ ಉದ್ಯೋಗದಾತರ ಮೂಲಕವೇ ಸಲ್ಲಿಸಬೇಕು. ಮನೆ ಬಾಡಿಗೆ ಬಗ್ಗೆ ದಾಖಲೆ ಸಲ್ಲಿಸುವಾಗ ಮಾಲೀಕರ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಅವರು ಐಟಿ ರಿಟರ್ನ್ಸ್ ಸಲ್ಲಿಸುವಾಗ ಆ ಬಗ್ಗೆ ಮಾಹಿತಿ ನೀಡಿಲ್ಲ ಅಂದರೆ ಇಬ್ಬರಲ್ಲಿ ಒಬ್ಬರು ಮತ್ತೆ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಂತೆಯೇ.

ಐಟಿ ರಿಟರ್ನ್ಸ್ ಸಲ್ಲಿಕೆ ಮತ್ತಷ್ಟು ಅವಕಾಶ ಸಿಕ್ಕಿರುವುದರಿಂದ ಇನ್ನೂ ಆದಾಯ ತೆರಿಗೆ ತುಂಬದವರು ಸದುಪಯೋಗ ಮಾಡಿಕೊಳ್ಳಿ.

English summary
The due date for filing Income Tax Returns and Tax Audit Reports extended from 30th September 2018 to 15th October 2018 by Central Board of Direct Taxes(CBDT), for certain categories of taxpayers upon consideration of representations from various stakeholders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more