ಏಪ್ರಿಲ್‌ನಲ್ಲಿ 82 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡ ಟೆಲಿಕಾಂ ಕಂಪನಿಗಳು
ನವದೆಹಲಿ, ಜುಲೈ 25: ಭಾರತದಲ್ಲಿ ಮೊದಲ ಪೂರ್ಣ ತಿಂಗಳ ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ 8.2 ಮಿಲಿಯನ್ ಮೊಬೈಲ್ ಬಳಕೆದಾರರ ನಿರ್ಗಮನವನ್ನು ಟೆಲಿಕಾಂ ಕಂಪನಿಗಳು ಕಂಡಿವೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದತ್ತಾಂಶವು ತೋರಿಸಿದೆ.
ಏಪ್ರಿಲ್‌ನಲ್ಲಿ ನಗರ ಮೊಬೈಲ್ ಬಳಕೆದಾರರ ಸಂಖ್ಯೆ 9 ಮಿಲಿಯನ್ ಕುಸಿದಿದ್ದರೆ, ಭಾರತದ ನಗರಗಗಳಿಂದ ವಲಸೆ ಕಾರ್ಮಿಕರನ್ನು ಹಳ್ಳಿಗಳಿಗೆ ಸ್ಥಳಾಂತರಿಸುವುದನ್ನು ಕಂಡಾಗ, ಗ್ರಾಮೀಣ ಚಂದಾದಾರರ ಪ್ರಮಾಣವು ಸ್ವಲ್ಪಮಟ್ಟಿಗೆ ಏರಿತು ಎಂದು ಟ್ರಾಯ್ ಹಂಚಿಕೊಂಡ ಮಾಹಿತಿ ತಿಳಿಸಿದೆ.
ಉತ್ತರ ಪ್ರದೇಶವು ಏಕೈಕ ಸೇವಾ ಕ್ಷೇತ್ರವಾಗಿದ್ದು, ಬಳಕೆದಾರರು ಶೇ. 1.29 ರಷ್ಟು ಏರಿಕೆಯಾಗಿದ್ದಾರೆ. ಇತರ ಎಲ್ಲ ಸೇವಾ ಪ್ರದೇಶಗಳು ಮೊಬೈಲ್ ಚಂದಾದಾರಿಕೆಯಲ್ಲಿ ಕುಸಿತವನ್ನು ವರದಿ ಮಾಡಿವೆ.

ವೊಡಾಫೋನ್ ಐಡಿಯಾ ಲಿಮಿಟೆಡ್ 4.5 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡರೆ, ಭಾರ್ತಿ ಏರ್‌ಟೆಲ್ 5.2 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ಆದಾಗ್ಯೂ, ಅದೇ ತಿಂಗಳಲ್ಲಿ, ರಿಲಯನ್ಸ್ ಜಿಯೋ 1.6 ಮಿಲಿಯನ್ ಗ್ರಾಹಕರನ್ನು ಸೇರಿಸಿದೆ. ಇದು ಎರಡು ವರ್ಷಗಳಲ್ಲಿ ಅದರ ಕಡಿಮೆ ಮಾಸಿಕ ಸೇರ್ಪಡೆಗಳಲ್ಲಿ ಒಂದಾಗಿದೆ.
ರಿಲಯನ್ಸ್ ಜಿಯೋ ಈಗ ವೈರ್‌ಲೆಸ್ ಮಾರುಕಟ್ಟೆ ಪಾಲಿನ ಶೇ. 33.85ರಷ್ಟು ವಿಸ್ತಾರವನ್ನು ಹೊಂದಿದೆ, ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ ಶೇ. 28.06 ಮತ್ತು ಶೇ. 27.37 ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ.
ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ ಮಾರ್ಚ್ ಅಂತ್ಯದ ವೇಳೆಗೆ 1,177.97 ದಶಲಕ್ಷದಿಂದ ಏಪ್ರಿಲ್ ಅಂತ್ಯದ ವೇಳೆಗೆ 1,169.44 ದಶಲಕ್ಷಕ್ಕೆ ಇಳಿದಿದೆ. ಇದು ಶೇ. 0.72ನಷ್ಟು ಕಡಿಮೆಯಾಗಿದೆ.
ನಗರ ದೂರವಾಣಿ ಚಂದಾದಾರಿಕೆ ಮಾರ್ಚ್ ಅಂತ್ಯದ ವೇಳೆಗೆ 656.46 ದಶಲಕ್ಷದಿಂದ ಏಪ್ರಿಲ್ ಅಂತ್ಯದ ವೇಳೆಗೆ 647.19 ದಶಲಕ್ಷಕ್ಕೆ ಇಳಿದಿದೆ. ಆದಾಗ್ಯೂ, ಇದೇ ಅವಧಿಯಲ್ಲಿ ಗ್ರಾಮೀಣ ಚಂದಾದಾರಿಕೆ 521.51 ದಶಲಕ್ಷದಿಂದ 522.24 ದಶಲಕ್ಷಕ್ಕೆ ಏರಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications