ಟ್ವಿಟ್ಟರ್ ಖಾತೆ ಓಪನ್ ಮಾಡಿ ಟ್ವೀಟ್ ಮಾಡದಿರೇ ಎಂತಯ್ಯ!
ನ್ಯೂಯಾರ್ಕ್, ಜ.19: ಸಾಮಾನ್ಯವಾಗಿ ಬ್ಲಾಗ್ ಬರೆದು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದವರೆಲ್ಲ ಟ್ವಿಟ್ಟರ್ ಬಂದ ಮೇಲೆ ಸಕತ್ ಖುಷಿ ಪಟ್ಟರು. ಕೆಲವರು ಕುತೂಹಲಕ್ಕೆ ಟ್ವಿಟ್ಟರ್ ಖಾತೆ ತೆರೆದು ಹಾಗೆ ಮರೆತುಬಿಟ್ಟರು.
ಈ ರೀತಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಖಾತೆ ಓಪನ್ ಮಾಡಿ ಆ ಕಡೆ ಕಣ್ಣು ಹಾಯಿಸದೆ ಮಲಗಿರುವವರ ಸಂಖ್ಯೆಯನ್ನು ಯುಎಸ್ ನ ಸಂಸ್ಥೆಯೊಂದು ಪತ್ತೆ ಹಚ್ಚಿದೆ.
ಈ ಸಮಯಕ್ಕೆ ಸರಿ ಸುಮಾರು 284 ಮಿಲಿಯನ್ ಸಕ್ರಿಯ ಟ್ವಿಟ್ಟರ್ ಬಳಕೆದಾರರಿದ್ದು ಈ ಪೈಕಿ 24 ಮಿಲಿಯನ್ ಖಾತೆದಾರರು ಟ್ವೀಟ್ ಮಾಡುವುದೇ ಇಲ್ಲ ಎಂದು ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಕಮಿಷನ್(ಎಸ್ ಇಸಿ) ವರದಿ ಮಾಡಿದೆ. [ಮಿನಿ ಬ್ಯಾಂಕ್ ಗಳಾದ ಫೇಸ್ ಬುಕ್, ಟ್ವಿಟ್ಟರ್]

ಟ್ವಿಟ್ಟರ್ ಖಾತೆದಾರರ ಪೈಕಿ ಶೇ 8.5ರಷ್ಟು ಖಾತೆಗಳು ರಾಬೋಟ್ ಬಳಕೆ ಮಾಡುತ್ತಿರುವ ಸಾಧ್ಯತೆ ಕಂಡು ಬಂದಿದೆ. ನಿಷ್ಕ್ರಿಯಗೊಂಡ ಖಾತೆಗಳನ್ನು ಪತ್ತೆ ಹಚ್ಚಿ ವರದಿ ಮಾಡಲು ತೊಡಗಿದಾಗ ಈ ಅಂಕಿ ಅಂಶಗಳು ಬೆಳಕಿಗೆ ಬಂದಿವೆ.
ಇದಲ್ಲದೆ, ಅನೇಕ ಸ್ಪಾಮ್ ಹಾಗೂ ನಕಲಿ ಖಾತೆಗಳ ಹಾವಳಿಯೂ ಹೆಚ್ಚಾಗುತ್ತಿದೆ. ಆದರೆ, ತಿಂಗಳ ಸಕ್ರಿಯ ಬಳಕೆದಾರರ(MAUs)ಪಟ್ಟಿ ನೋಡಿದರೆ ಇಂಥವರ ಸಂಖ್ಯೆ ಶೇ 5ಮೀರುವುದಿಲ್ಲ. [ನಾ ಸತ್ತರ ನನ್ನ ಅಕೌಂಟದ್ದ ಏನ ಗತಿ?]
ಈಗ 24 ಮಿಲಿಯನ್ ಖಾತೆಗಳು ಅಪ್ಲಿಕೇಷನ್ ಅಥವಾ ತಂತ್ರಾಂಶ ಬಳಕೆಯಿಂದ ಆಗಿದ್ದು ಟ್ವಿಟ್ಟರ್ ವೇದಿಕೆ ಹಂಚಿಕೊಂಡಿವೆ ಎನ್ನಬಹುದು ಎಂದು ಎಸ್ಇಸಿ ವರದಿ ಮಾಡಿದೆ.
ಶೇ 11ರಷ್ಟು ಬಳಕೆದಾರರು ಥರ್ಡ್ ಪಾರ್ಟಿ ತಂತ್ರಾಂಶ(Tweedeck ಅಥವಾ Hootsuite ಇರಬಹುದು)ಗಳನ್ನು ಬಳಕೆ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದರೂ ಸಕ್ರಿಯರಾಗಿದ್ದಾರೆ. ಅದರೆ, ಶೇ 8.5ರಷ್ಟು ಖಾತೆಗಳು ಮಲಗಿವೆ.(ಐಎಎನ್ಎಸ್)












Click it and Unblock the Notifications