ಏರ್ ಟೆಲ್ ತೆಕ್ಕೆಗೆ ಸಾಲಯುಕ್ತ ಟಾಟಾ ಟೆಲಿ ಸರ್ವಿಸಸ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13: ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರ್ತಿ ಏರ್ಟೆಲ್ ಈಗ ಮುಚ್ಚುವ ಹಂತ ತಲುಪಿರುವ ಟಾಟಾ ಟೆಲಿ ಸರ್ವಿಸಸ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಟಾಟಾ ಸಂಸ್ಥೆಯ ಮೊಬೈಲ್ ಸೇವೆ ವಿಭಾಗ(Consumer Mobile Businesses)ವು ಭಾರ್ತಿ ಏರ್ಟೆಲ್ ನಲ್ಲಿ ವಿಲೀನಗೊಳ್ಳಲಿದೆ.

ಟಾಟಾ ಟೆಲಿಸರ್ವೀಸ್ ನಿಂದ ಸಾವಿರಾರು ಹುದ್ದೆ ಕಡಿತ

ಟಾಟಾ ಟೆಲಿ ಸರ್ವಿಸಸ್ ಮತ್ತು ಏರ್ಟೆಲ್ ವಿಲೀನದಿಂದ ಟಾಟಾ ಟೆಲಿ ಸರ್ವೀಸ್ ಗೆ ಸೇರಿದ ಸುಮಾರು 4 ಕೋಟಿ ಮೊಬೈಲ್‌ ಗ್ರಾಹಕರು ಏರ್ಟೆಲ್ ಸಂಸ್ಥೆಯ ಬಳಕೆದಾರರಾಗಲಿದ್ದಾರೆ.

Tatas to merge telecom business with Bharti Airtel

ವೋಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲಾರ್ ವಿಲೀನದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ಇದು ಬಹುದೊಡ್ಡ ವಿಲೀನ ಎನಿಸಿಕೊಂಡಿದೆ.

ಈ ವಿಲೀನದ ಬಗ್ಗೆ ಸ್ಪಷ್ಟನೆ ನೀಡಿರುವ ಏರ್ ಟೆಲ್, 'ಇದು ಸಾಲ ಮುಕ್ತ, ನಗದು ಮುಕ್ತ ವಿಲೀನ ಪ್ರಕ್ರಿಯೆಯಾಗಿದೆ ಎಂದಿದೆ. 40 ಸಾವಿರ ಕೋಟಿ ರು ಸಾಲ, 10 ಸಾವಿರ ಕೋಟಿ ರು ಸ್ಪೆಕ್ಟ್ರಂ ಸಾಲ ಕೂಡಾ ಟಾಟಾ ಸನ್ಸ್ ಪಾವತಿಸಲಿದೆ. ಇದಕ್ಕೂ ಏರ್ ಟೆಲ್ ಗೂ ಸಂಬಂಧವಿಲ್ಲ' ಎಂದಿದೆ.

ಸುಮಾರು 149 ವರ್ಷ ಇತಿಹಾಸ ಹೊಂದಿರುವ ಟಾಟಾ ಸಮೂಹ ಸಂಸ್ಥೆಯು ತನ್ನ ಅತಿ ದೊಡ್ಡ ಟೆಲಿಕಾಂ ಘಟಕವನ್ನು ಮುಚ್ಚುತ್ತಿದೆ. 1996ರಲ್ಲಿ ಲ್ಯಾಂಡ್ ಲೈನ್ ಮೂಲಕ ಸೇವೆ ನೀಡಲು ಆರಂಭಿಸಿದ ಟಾಟಾ ಸಂಸ್ಥೆ 2002ರಲ್ಲಿ ಸಿಡಿಎಂಎ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತು. 2008ರಲ್ಲಿ ಜಿಎಸ್ಎಂ ಫೋನ್ ಗಳನ್ನು ಪರಿಚಯಿಸಿದರೂ ಸಂಸ್ಥೆ ಏಳಿಗೆ ಕಂಡಿರಲಿಲ್ಲ.

ವಿಲೀನದ ನಂತರ ಮುಂದೇನು?: ವೀಲಿನದ ನಂತರ ಟಾಟಾದ ಗ್ರಾಹಕರಿಗೆ ಧ್ವನಿ ಹಾಗೂ ಡಾಟಾ ಸರ್ವೀಸ್, ಮೊಬೈಲ್ ಬ್ಯಾಂಕಿಂಗ್, ವಿಎಎಸ್ ಹಾಗೂ ದೇಶಿ / ಅಂತಾರಾಷ್ಟ್ರೀಯ ರೋಮಿಂಗ್ ವ್ಯವಸ್ಥೆಗಳನ್ನು ಸುನಿಲ್ ಮಿತ್ತಲ್ ಏರ್ಟೆಲ್ ಒದಗಿಸಲಿದೆ. Enterprise and Fixed Line and Broadband ವಿಭಾಗಕ್ಕೆ ಸೇರಿರುವ ಟಾಟಾ ಉದ್ಯೋಗಿಗಳ ಭವಿಷ್ಯದ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tata Teleservices will merge with Bharti Airtel as the Tata group firm looks to tide over its financial woes by exiting the mobile telephony business.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ