ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!

ನವದೆಹಲಿ, ಸೆ. 15: ಕೊವಿಡ್ 19 ಸಂಕಷ್ಟ ಕಾಲದಲ್ಲಿ ಸಿಬ್ಬಂದಿಗಳಿಗೆ ಸಂಬಳ ನೀಡುವುದೇ ಕಷ್ಟ ಎನ್ನುವ ಸಂದರ್ಭದಲ್ಲಿ ಟಾಟಾ ಸ್ಟೀಲ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದೆ.

ಟಾಟಾ ಸ್ಟೀಲ್ ಅಂಡ್ ಟಾಟಾ ವರ್ಕರ್ಸ್ ಯೂನಿಯನ್(ಟಿಡಬ್ಲ್ಯೂಯು) ಜೊತೆ ಟಾಟಾ ಸ್ಟೀಲ್ ಸಂಸ್ಥೆ ಒಪ್ಪಂದ ಮಾಡಿಕೊಂಡ ಬಳಿಕ ಎಲ್ಲಾ ಸ್ತರದ ಸಿಬ್ಬಂದಿಗೆ ಬೋನಸ್ ಘೋಷಿಸಲಾಗಿದೆ. ಟಾಟಾ ಸ್ಟೀಲ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ.ವಿ ನರೇಂದ್ರನ್ ಹಾಗೂ ನೌಕರರ ಯೂನಿಯನ್ ಅಧ್ಯಕ್ಷ ಆರ್ ರವಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ಈ ಒಪ್ಪಂದದಂತೆ 2019-20ನೇ ಸಾಲಿಗೆ ಸುಮಾರು 235.54 ಕೋಟಿ ರು ಬೋನಸ್ ಘೋಷಿಸಲಾಗಿದೆ. ಕೊವಿಡ್ 19 ಸಂದರ್ಭದಲ್ಲೂ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಸಿಬ್ಬಂದಿಗೆ ಬೋನಸ್ ಘೋಷಿಸಲು ಸಂತಸವಾಗುತ್ತಿದೆ ಎಂದು ಟಾಟಾ ಸಂಸ್ಥೆ ಪ್ರಕಟಿಸಿದೆ.

Tata Steel Announces Rs 235 Crore Bonus Payout To Employees For 2019-20

ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿ ಟಾಟಾ ಸ್ಟೀಲ್ , ಏಪ್ರಿಲ್ -ಜನವರಿ 2020-21 ಅವಧಿಯಲ್ಲಿ 4,648.13 ಕೋಟಿ ರು ನಿವ್ವಳ ನಷ್ಟ ಉಂಟಾಗಿದೆ. 2019-20ನೇ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆ 1,615.35 ಕೋಟಿ ರು ನಷ್ಟ ಅನುಭವಿಸಿತ್ತು. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+