2019ರಲ್ಲಿ ಒಂದು ಕಾರು ಮಾತ್ರ ಸೇಲ್, ನ್ಯಾನೋ ಉತ್ಪಾದನೆ ಸ್ಥಗಿತ
ಬೆಂಗಳೂರು, ಜನವರಿ 07: ಉದ್ಯಮಿ ರತನ್ ಟಾಟಾ ಅವರ ಕನಸಿನ ಕಡಿಮೆ ಬಜೆಟ್ ಕಾರು 'ನ್ಯಾನೋ ಕಾರು' ಉತ್ಪಾದನೆ ಮುಂದಿನ ವರ್ಷದಿಂದ ಬಂದ್ ಆಗುವುದು ಖಚಿತವಾಗಿದೆ. 2019ರಲ್ಲಿ ಒಂದು ಕಾರು ಮಾತ್ರ ಮಾರಾಟ ಮಾಡಲಾಗಿದ್ದು, ಮುಂದಿನ ವರ್ಷ ಈ ಸಣ್ಣಕಾರಿನ ಉತ್ಪಾದನೆ ರದ್ದಾಗುವ ಸುದ್ದಿ ಬಂದಿದೆ.
ಟಾಟಾ ಮೋಟರ್ಸ್ ಭಾರತ್ ಸ್ಟೇಜ್-ಆರು (ಬಿಎಸ್- VI) ಪರಿಸರದ ಗುಣಮಟ್ಟಗಳಿಗೆ ಅನುಗುಣವಾಗಿ ನವೀಕರಿಸುವ ಯೋಜನೆ ಹೊಂದಿಲ್ಲ. ಕಾರಿನ ಮಾರಾಟದಲ್ಲಿ ಆದ ಕುಸಿತ, ಗ್ರಾಹಕರಿಂದ ಬೇಡಿಕೆ ಕೊರತೆ ಕಾರಣದಿಂದ ಟಾಟಾ ಸಂಸ್ಥೆಯು 'ನ್ಯಾನೊ' ಕಾರಿಗೆ 'ಟಾಟಾ' ಹೇಳುವುದು ಅನಿವಾರ್ಯವಾಗಲಿದೆ. ಏಪ್ರಿಲ್ ತಿಂಗಳಿನಲ್ಲಿ ನ್ಯಾನೋ ಕಾರು ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತವಾಗಲಿದೆ.
2008ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ನ್ಯಾನೋ ಪುಟ್ಟ ಕುಟುಂಬದ ನೆಚ್ಚಿನ ಕಾರು ಎನಿಸಿಕೊಂಡಿತ್ತು. ಕೈಗೆಟುಕುವ ದರ ಕೂಡಾ ಇತ್ತು. ಟಾಟಾ ನ್ಯಾನೋ ಬೇಸಿಕ್ ಮಾಡೆಲ್ ಬೆಲೆ 1 ಲಕ್ಷ ರೂಪಾಯಿಗಳ ಆಸುಪಾಸು ಇತ್ತು. ದೇಶದ ಪ್ರತಿಯೊಬ್ಬರು ಕಾರು ಹೊಂದಬೇಕೆಂಬ ಕನಸು ನನಸಾಗಬೇಕೆಂಬ ನಿಟ್ಟಿನಲ್ಲಿ ರತನ್ ಟಾಟಾ ತಂದ ಯೋಜನೆ ತಕ್ಕಮಟ್ಟಿನ ಯಶಸ್ವಿಯಾಗಿತ್ತು.

ಪಶ್ಚಿಮ ಬಂಗಾಳದ ಸಿಂಗೂರ್ ನಲ್ಲಿ ಉತ್ಪಾದನಾ ಘಟಕ ಆರಂಭಿಸಲು ಮುಂದಾದ ರೈತರು ತೀವ್ರ ಹೋರಾಟ ನಡೆಸಿದ್ದರು. ಬಳಿಕ ಈ ಘಟಕವನ್ನು ಗುಜರಾತಿನ ಸನಂದ್ ಗೆ ವರ್ಗಾಯಿಸಲಾಗಿತ್ತು. ಆದರೆ ಕಾರಿನ ಸುರಕ್ಷತೆ ಬಗ್ಗೆ ಅನೇಕ ದೂರುಗಳು ಕೇಳಿ ಬಂದವು. ಪೆಟ್ರೋಲ್ ನ್ಯಾನೋಪ್ರತಿ ಲೀಟರ್ ಗೆ 2.3ಕೆಜಿ ಕಾರ್ಬನ್ ಡೈ ಆಕ್ಸೈಡ್ ಹೊರಹಾಕುತ್ತದೆ. ಡೀಸೆಲ್ ಬಳಸುವ ನ್ಯಾನೋ ಪ್ರತಿ ಲೀಟರ್ ಗೆ 2.7ಕೆಜಿ ಕಾರ್ಬನ್ ಡೈ ಆಕ್ಸೈಡ್ ಹೊರಹಾಕುತ್ತದೆ. ನ್ಯಾನೋ ಪ್ರತಿ ಲೀಟರ್ ಗೆ 20 ಕಿ.ಮೀ ನೀಡಿದರೆ, ನ್ಯಾನೋ ಎರಡೂ ಸೇರಿ ಸುಮಾರು 1.3 ಲಕ್ಷ ರು ತಗುಲುತ್ತದೆ.
2018 ರಲ್ಲಿ 82 ಟಾಟಾ ನ್ಯಾನೋ ಉತ್ಪಾದನೆ ಹಾಗೂ 88 ಮಾರಾಟ ಕಂಡಿತ್ತು. ಆದರೆ, 2019ರ ಡಿಸೆಂಬರ್ ವೇಳೆಗೆ ಒಂದು ಕಾರು ಮಾತ್ರ ಮಾರಾಟವಾಗಿದೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications