ಟಾಟಾ ಗ್ರೂಪ್‌ಗೆ ಬಿಸ್ಲೇರಿ ನೀರು ಉದ್ಯಮ ಮಾರಾಟ?
ನವದೆಹಲಿ, ನವೆಂಬರ್ 24: ಜನಪ್ರಿಯ ಪ್ಯಾಕೇಜ್ಡ್ ನೀರು ಉದ್ಯಮ ಬಿಸ್ಲೆರಿ ಇಂಟರ್‌ನ್ಯಾಶನಲ್ ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದೆ. ಇದಕ್ಕಾಗಿ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸೇರಿದಂತೆ ಹಲವಾರು ಉದ್ಯಮಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಗುರುವಾರ ತಿಳಿದು ಬಂದಿದೆ.
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನೊಂದಿಗೆ 7,000 ಕೋಟಿ ರೂಪಾಯಿಗಳ ಒಪ್ಪಂದವನ್ನು ಅಂತಿಮಗೊಳಿಸಿ ಮುಗಿಸಲಾಗಿದೆ ಎಂಬ ವರದಿಯನ್ನು ಭಾರತೀಯ ಪ್ಯಾಕೇಜ್ಡ್ ವಾಟರ್ ವ್ಯವಹಾರದ 82 ವರ್ಷದ ಪ್ರವರ್ತಕ ನಿರಾಕರಿಸಿದರು. ಆದರೆ ನೀವು ಬಿಸ್ಲೇರಿ ವ್ಯಾಪಾರವನ್ನು ಮಾರಾಟ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾದ ರಮೇಶ್ ಚೌಹಾಣ್ ಸಕಾರಾತ್ಮಕವಾಗಿ ಉತ್ತರಿಸಿ ಹೌದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಅವರು ಪಿಟಿಐಗೆ ತಿಳಿಸಿದ್ದಾರೆ.
ಆದಾಗ್ಯೂ, ಬಿಸ್ಲೇರಿ ಹಲವಾರು ಖರೀದಿದಾರರೊಂದಿಗೆ ಮಾರಾಟದ ಚರ್ಚೆಯಲ್ಲಿದೆ. ಟಾಟಾ ಗ್ರೂಪ್ ಸಂಸ್ಥೆಗೆ ತಮ್ಮ ಕಂಪೆನಿಯನ್ನು ಮಾರಾಟ ಮಾಡಲು ಅವರು ಒಪ್ಪಿಕೊಂಡಿದ್ದಾರೆ ಎಂಬ ವರದಿಯ ಬಗ್ಗೆ ಬಿಸ್ಲೇರಿ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಚೌಹಾಣ್, ಇದು ಸರಿಯಲ್ಲ ನಾವು ಇನ್ನೂ ಚರ್ಚಿಸುತ್ತಿದ್ದೇವೆ ಎಂದು ಹೇಳಿದರು.

ಕಂಪೆನಿಯನ್ನು ಯಾರು ನಿಭಾಯಿಸುತ್ತಾರೆ ಎಂಬ ಬಗ್ಗೆ ರಮೇಶ್ ಚೌಹಾಣ್ ತಮ್ಮ ಮಗಳು ಜಯಂತಿ ವ್ಯವಹಾರವನ್ನು ನಿಭಾಯಿಸಲು ಆಸಕ್ತಿ ಹೊಂದಿಲ್ಲ. ಸದ್ಯ ಕಂಪೆನಿ ಮಾರಾಟ ಮಾಡುವ ಬಗ್ಗೆ ನಾವು ಪ್ರಸ್ತುತ ಚರ್ಚೆ ಮಾಡುತ್ತಿದ್ದೇವೆ ಹಾಗಾಗಿ ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮೂರು ದಶಕಗಳ ಹಿಂದೆ ರಮೇಶ್ ಚೌಹಾಣ್ ಅವರು ತಮ್ಮ ತಂಪು ಪಾನೀಯಗಳ ವ್ಯಾಪಾರವನ್ನು ಅಮೆರಿಕಾ ಪಾನೀಯ ಕಂಪೆನಿ ದಿ ಕೋಕಾ ಕೋಲಾ ಕಂಪನಿಗೆ ಮಾರಾಟ ಮಾಡಿದ್ದರು. ಅವರು ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಸಿಟ್ರಾ, ಮಾಜಾ ಮತ್ತು ಲಿಮ್ಕಾದಂತಹ ಬ್ರ್ಯಾಂಡ್‌ಗಳನ್ನು 1993 ರಲ್ಲಿ ದಿ ಕೋಕಾ ಕೋಲಾ ಕಂಪನಿಗೆ ವರ್ಗಾಯಿಸಿದ್ದರು.
ಈ ಬ್ರ್ಯಾಂಡ್‌ಗಳಲ್ಲಿ ಥಮ್ಸ್ ಅಪ್ ಈಗಾಗಲೇ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಕೋಕಾ ಕೋಲಾ 2024ರ ವೇಳೆಗೆ ಹಣ್ಣಿನ ಪಾನೀಯಗಳ ಬ್ರ್ಯಾಂಡ್ ಮಾಝಾ ಸಹ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗುವ ನಿರೀಕ್ಷೆಯಲ್ಲಿದೆ. ಚೌಹಾಣ್ 2016ರಲ್ಲಿ ಬಿಸ್ಲೆರಿ ಪಿಒಪಿಯನ್ನು ಪ್ರಾರಂಭಿಸುವ ಮೂಲಕ ತಂಪು ಪಾನೀಯಗಳ ವಿಭಾಗಕ್ಕೆ ಮರು ಪ್ರವೇಶಿಸಿದ್ದರು. ಆದರೆ ಮತ್ತೆ ಹಿಂದಿನ ವ್ಯಾಪಾರದ ಮ್ಯಾಜಿಕ್ ಮಾಡಲು ಅದು ವಿಫಲವಾಗಿದೆ.

ಎಫ್‌ಎಂಸಿಜಿ ಉದ್ಯಮದಲ್ಲಿ ಅಸಾಧಾರಣ ಸಾಧಕ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಟಾಟಾ ಸಮೂಹ ಸಂಸ್ಥೆಯು ಇತ್ತೀಚೆಗೆ ಕೆಲವು ಸ್ವಾಧೀನಗಳನ್ನು ಮಾಡಿದೆ ಮತ್ತು ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬಿಸ್ಲೇರಿಯೊಂದಿಗಿನ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಒಪ್ಪಂದವು ಅಂತಿಮಗೊಂಡರೆ ಅದು ಟಾಟಾ ಸಮೂಹ ಸಂಸ್ಥೆಯನ್ನು ವೇಗವಾಗಿ ಬೆಳೆಯುತ್ತಿರುವ ಬಾಟಲ್ ವಾಟರ್ ವಿಭಾಗದಲ್ಲಿ ಮುಖ್ಯ ವಸ್ತುವಾಗಿ ಪರಿವರ್ತಿಸಲಿದೆ.
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ತನ್ನ ಬ್ರ್ಯಾಂಡ್ ಹಿಮಾಲಯನ್‌ನೊಂದಿಗೆ ಬಾಟಲಿ ನೀರಿನ ವಿಭಾಗದಲ್ಲಿ ಈಗಾಗಲೇ ಪ್ರಸ್ತುತವಾಗಿದೆ. ಪ್ಯಾಕೇಜ್ಡ್ ಮಿನರಲ್ ವಾಟರ್ ಅನ್ನು ಮಾರಾಟ ಮಾಡುತ್ತಿದೆ. ಜೊತೆಗೆ, ಇದು ಟಾಟಾ ಕಾಪರ್ ಪ್ಲಸ್ ವಾಟರ್ ಮತ್ತು ಟಾಟಾ ಗ್ಲುಕೋ ವ್ಯಾಪಾರ ವಿಭಾಗದಲ್ಲಿಯೂ ಇದೆ.












Click it and Unblock the Notifications