ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಆಶಯದಂತೆ ಟಾಟಾದಿಂದ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 3: ಟಾಟಾ ಕ್ಯಾಪಿಟಲ್ ಲಿಮಿಟಡ್ ನ ಅಂಗಸಂಸ್ಥೆಯಾದ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಟಿಸಿಎಚ್‍ಎಫ್‍ಎಲ್) 'ಪ್ರಾಪ್ತಿ' ಎಂಬ ಹೊಸ ಮತ್ತು ವಿನೂತನವಾದ ಗೃಹ ಸಾಲ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯಿಂದ ಕಡಿಮೆ ಆದಾಯದ ಕುಟುಂಬಗಳು ಸುಲಭ ಬಡ್ಡಿದರದಲ್ಲಿ ಮನೆ ಕಟ್ಟಿಕೊಳ್ಳಬಹುದಾಗಿದೆ.

ಶೇ. 4 ರಿಂದ ಆರಂಭವಾಗಲಿರುವ ಸಬ್ಸಿಡಿ ಸಹಿತ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಟಿಸಿಎಚ್‍ಎಫ್‍ಎಲ್ ಸ್ವಂತ ಮನೆ ಕಟ್ಟಿಕೊಳ್ಳುವವರ ಕನಸನ್ನು ಸಾಕಾರಗೊಳಿಸಲಿದೆ. [ಬಡವರಿಗಾಗಿ ಮಿಡಿದ ಮೋದಿ, 5 ಕೋಟಿ ಮನೆ ನಿರ್ಮಾಣ ಘೋಷಣೆ]

ಯೋಜನೆಯ ಪ್ರಮುಖ ಅಂಶಗಳು
* ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಯ ಉಪಕ್ರಮವಾಗಿ ಈ ಯೋಜನೆ ಮೂಲಕ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಸಾಲ ಲಭ್ಯ

* ಸಬ್ಸಿಡಿ ದರದಲ್ಲಿ ಗೃಹ ಸಾಲಗಳು ಶೇ. 4 ಬಡ್ಡಿದರದಿಂದ ಆರಂಭ. [ಒಂದೇ ಕ್ಲಿಕ್ ನಲ್ಲಿ ನಿಮ್ಮ ವಸತಿ ಸಮಸ್ಯೆ ಮುಕ್ತಿ]

* ಪಿಎಂಎವೈ ಗುರುತಿಸಿರುವ ಮೆಟ್ರೋ ನಗರಗಳ, 1, 2 ಮತ್ತು 3 ನೇ ಹಂತದ ನಗರಗಳ ಕಡಿಮೆ ಆದಾಯ ಇರುವವರಿಗೆ ಈ ಸಾಲ ಸೌಲಭ್ಯ.
* ಕಡಿಮೆ ಆದಾಯ ಇರುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಮಹಿಳೆಯರು ಹಾಗೂ ಎಸ್/ಎಸ್‍ಟಿ ಕುಟುಂಬಗಳಿಗೆ ಈ ಪ್ರಾಪ್ತಿ ಗೃಹ ಸಾಲದಲ್ಲಿ ಆದ್ಯತೆ.

ಬಡ ಜನರಿಗೆ ಕೈಗೆಟುಕುವ ದರದಲ್ಲಿ ಮನೆ

ಬಡ ಜನರಿಗೆ ಕೈಗೆಟುಕುವ ದರದಲ್ಲಿ ಮನೆ

2022 ರ ವೇಳೆಗೆ ನಗರ ಪ್ರದೇಶದ ಬಡ ಜನರಿಗೆ ಕೈಗೆಟುಕುವ ದರದಲ್ಲಿ ಮನೆಗಳನ್ನು ಒದಗಿಸುವ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಪೂರಕವಾಗಿ ಟಾಟಾ ಕ್ಯಾಪಿಟಲ್ ಪ್ರಾಪ್ತಿ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ.

ಪ್ರಾಪ್ತಿ ಯೋಜನೆ ಯಾರಿಗೆ ಲಾಭ

ಪ್ರಾಪ್ತಿ ಯೋಜನೆ ಯಾರಿಗೆ ಲಾಭ

ಕಡಿಮೆ ಆದಾಯ ಗುಂಪುಗಳು(ಎಲ್‍ಐಜಿ), ಆರ್ಥಿಕವಾಗಿ ಹಿಂದುಳಿದವರು(ಇಡಬ್ಲ್ಯೂಎಸ್), ಪರಿಶಿಷ್ಟ ಜಾತಿ(ಎಸ್ಸಿ) , ಪರಿಶಿಷ್ಟ ಪಂಗಡ(ಎಸ್ಟಿ) ಮತ್ತು ಮಹಿಳೆಯರಿಗೆ ಈ ಪ್ರಾಪ್ತಿ ಆದ್ಯತೆ ನೀಲಿದೆ. ಮೆಟ್ರೋ ನಗರಗಳು, ಒಂದು, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ವಾಸವಿರುವ ವಾರ್ಷಿಕ 6 ಲಕ್ಷ ರೂಪಾಯಿ ಆದಾಯ ಸಂಪಾದನೆಗಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಈ ಪ್ರಾಪ್ತಿಯ ಸೌಲಭ್ಯ ಲಭ್ಯವಾಗಲಿದೆ.

ಈ 'ಪ್ರಾಪ್ತಿ' ಯೋಜನೆಯು ಕಡಿಮೆ ದರದಲ್ಲಿ ಸಾಲ ಸೌಲಭ್ಯ

ಈ 'ಪ್ರಾಪ್ತಿ' ಯೋಜನೆಯು ಕಡಿಮೆ ದರದಲ್ಲಿ ಸಾಲ ಸೌಲಭ್ಯ

ಈ 'ಪ್ರಾಪ್ತಿ' ಯೋಜನೆಯು ಕಡಿಮೆ ದರದಲ್ಲಿ ಸಾಲ ಸೌಲಭ್ಯ ಒದಗಿಸಲಿದ್ದು, ಈ ಮೂಲಕ ಬಡ ಜನರು, ಆರ್ಥಿಕವಾಗಿ ಹಿಂದುಳಿದವರು ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ತಮ್ಮ ಬಹುದಿನಗಳ ಕನಸನ್ನು ಸಾಕಾರಗೊಳಿಸಿಕೊಳ್ಳಲು ನೆರವಾಗಲಿದೆ.

ಎರಡು ಮತ್ತು ಮೂರನೇ ಹಂತದ ನಗರಕ್ಕೆ ಆದ್ಯತೆ

ಎರಡು ಮತ್ತು ಮೂರನೇ ಹಂತದ ನಗರಕ್ಕೆ ಆದ್ಯತೆ

ದೇಶಾದ್ಯಂತ ವಿಸ್ತಾರಗೊಳ್ಳಲಿರುವ ಈ ನಮ್ಮ ಯೋಜನೆಯು ಎರಡು ಮತ್ತು ಮೂರನೇ ಹಂತದ ನಗರ ಪ್ರದೇಶಗಳ ಜನರಿಗೆ ನೆರವಾಗಲಿದೆ ಎಂದು ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಆರ್.ವೈದ್ಯನಾಥನ್ ಹೇಳಿದರು.

English summary
In Line With the Governments Pradhan Mantri Awas Yojna (PMAY) Initiative, the Scheme Will Offer Subsidized Home Loans to Low Income Groups Key Highlights- Home loans offered at subsidized rates starting from 4%, Low-cost housing for lower income groups in the peripheries of Metros
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X