Get Updates
Get notified of breaking news, exclusive insights, and must-see stories!

2 ವರ್ಷದಲ್ಲಿ ದ್ವಿಗುಣಗೊಂಡ ಎಜುಟೆಕ್ ಸಂಸ್ಥೆಯಾಗಿರುವ ಟ್ಯಾಲೆಂಡ್‌ಎಡ್ಜ್

ಬೆಂಗಳೂರು, ಡಿಸೆಂಬರ್ 21: ಈ ವರ್ಷ ಬಹುತೇಕ ಉದ್ಯಮಗಳು ಕೊರೊನಾವೈರಸ್ ಸೋಂಕಿನಿಂದಾಗಿ ಸಾಕಷ್ಟು ನಲುಗಿ ಹೋಗಿವೆ. ಇಡೀ ವರ್ಷದ ಕಾರ್ಯಚಟುವಟಿಕೆಗಳು ಸಾಕಷ್ಟು ಬದಲಾವಣೆಯಾಗಿದೆ. ಆದರೆ ಇದರ ನಡುವೆ ಅತ್ಯಂತ ದೊಡ್ಡ ಮಟ್ಟದಲ್ಲಿ ಮತ್ತು ಗಣನೀಯ ಪ್ರಮಾಣದಲ್ಲಿ ರೂಪಾಂತರಗೊಂಡಿರುವ ಕ್ಷೇತ್ರವೆಂದರೆ ಶೈಕ್ಷಣಿಕ ಉದ್ಯಮ.

ಭಾರತದಲ್ಲಿ ಮುಂಚೂಣಿಯಲ್ಲಿರುವ ಎಜುಟೆಕ್ ಸಂಸ್ಥೆಯಾಗಿರುವ ಟ್ಯಾಲೆಂಟ್‌ಎಡ್ಜ್, ದೇಶದಲ್ಲಿ ಮೊದಲ ಬಾರಿಗೆ ವರ್ಚುವಲ್ ಮೂಲಕ ಲೈವ್ & ಇಂಟರ್‌ಯಾಕ್ಟಿವ್' ಕಲಿಕಾ ಸೌಲಭ್ಯವನ್ನು ವಿಶ್ವಕ್ಕೆ ಪರಿಚಯಿಸಿತ್ತು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿತ್ತು. ಇದರಿಂದ ಕಳೆದ ಎರಡು ವರ್ಷಗಳಲ್ಲಿ ತನ್ನ ಆದಾಯದಲ್ಲಿ ಎರಡು ಪಟ್ಟು ಹೆಚ್ಚಳವನ್ನು ಸಾಧಿಸಿದೆ.

ಉನ್ನತ ಶೈಕ್ಷಣಿಕ ಕ್ಷೇತ್ರದ ಅತ್ಯಂತ ಹೆಸರಾಂತ ಸಂಸ್ಥೆಗಳೊಂದಿಗೆ ಕೆಲವು ಪ್ರಬಲವಾದ ಸಹಭಾಗಿತ್ವದೊಂದಿಗೆ, ಟ್ಯಾಲೆಂಟ್‌ಎಡ್ಜ್ ವಿವಿಧ ವಿಭಾಗಗಳಲ್ಲಿ ಉದ್ಯಮ ಸಂಬಂಧಿತವಾದ ಕೋರ್ಸ್‌ಗಳ ಒಂದು ದೊಡ್ಡ ಶ್ರೇಣಿಯನ್ನು ಹೊಂದಿದೆ ಹಾಗೂ ಭಾರತದ ಉನ್ನತ ಶಿಕ್ಷಣ ಮತ್ತು ಕಾರ್ಯನಿರ್ವಾಹಕ ಶಿಕ್ಷಣ ಜಾಗದಲ್ಲಿ ಅತ್ಯಂತ ಗೌರವಾನ್ವಿತ ಸಂಸ್ಥೆಗಳಲ್ಲಿ ಒಂದೆನಿಸಿದೆ.

 TalentEdge Income An Eztec Tech Company, Doubled In 2 years

ಈ ವರ್ಷ ಎಡ್ಟೆಕ್ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡುಬರದಿದ್ದರೂ, ಟ್ಯಾಲೆಂಟ್‌ಎಡ್ಜ್ ರೇಡಾರ್ ಅಡಿಯಲ್ಲಿ ಉನ್ನತ ಶಿಕ್ಷಣ ಮತ್ತು ಕಾರ್ಯನಿರ್ವಾಹಕ ಶಿಕ್ಷಣದ ಬೆಳವಣಿಗೆ ಹಾಗೂ ಪ್ರಜಾಪ್ರಭುತ್ವೀಕರಣಕ್ಕೆ ಚಾಲನೆಯನ್ನು ನೀಡುತ್ತಿದೆ.

ಈ ವರ್ಷ ಟ್ಯಾಲೆಂಟ್‌ಎಡ್ಜ್ ತನ್ನ ಪೋರ್ಟ್‌ಫೋಲಿಯೋದಲ್ಲಿ 15 ಹೊಸ ಕೋರ್ಸ್‌ಗಳ ಕೊಡುಗೆಗಳನ್ನು ಸೇರಿಸಿದ್ದು, ಒಟ್ಟು ಕಲಿಯುವವರ ಕೇಂದ್ರಿತ ಕೋರ್ಸ್‌ಗಳ ಸಂಖ್ಯೆಯನ್ನು 250 ಕ್ಕೆ ಹೆಚ್ಚಿಸಿಕೊಂಡಿದೆ. ಈ ಪೈಕಿ, ಹೆಚ್ಚು ಆದ್ಯತೆಯ ಕೆಲವು ಕೋರ್ಸ್‌ಗಳಲ್ಲಿ ಎಚ್‌ಆರ್, ಅನಾಲಿಟಿಕ್ಸ್, ಲೀಡರ್‌ಶಿಪ್, ಸ್ಟಾಟರ್ಜಿ ಮತ್ತು ಮಾರ್ಕೆಟಿಂಗ್ ಸೇರಿವೆ. ಇದಲ್ಲದೇ, ಹೆಚ್ಚುವರಿಯಾಗಿ ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಹೆಚ್ಚು ಖ್ಯಾತನಾಮವಾಗಿರುವ ಶೈಕ್ಷಣಿಕ ಪಾಲುದಾರರ ಪಟ್ಟಿಗೆ ಎಂಟಕ್ಕೂ ಕ್ಕೂ ಹೆಚ್ಚು ಸಂಸ್ಥೆಗಳನ್ನು ಸೇರಿಸಿದೆ ಮತ್ತು 17.5 ಮಿಲಿಯನ್ ಕಲಿಕಾ ಗಂಟೆಗಳನ್ನೂ ಮೀರಿದೆ.

ಟ್ಯಾಲೆಂಟ್‌ಎಡ್ಜ್ ಶೈಕ್ಷಣಿಕ ಕೋರ್ಸ್‌ಗಳ ಜೊತೆಗೆ ಉದ್ಯಮದ ಸಹಭಾಗಿತ್ವದಲ್ಲಿ ತನ್ನ ಕೋರ್ಸ್‌ಗಳನ್ನು ರಚಿಸುತ್ತಿದೆ. ಇದು ದೇಶಾದ್ಯಂತ ಕಲಿಯುವವರಿಗೆ ಅತ್ಯಂತ ಹೆಸರಾಂತ ಸಂಸ್ಥೆಗಳಿಂದ ಅತ್ಯುತ್ತಮವಾದ ಕಲಿಕೆಯ ಅವಕಾಶಗಳನ್ನು ಪ್ರವೇಶಿಸಲು ನೆರವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+