Get Updates
Get notified of breaking news, exclusive insights, and must-see stories!

ತೆರಿಗೆ ಪಾವತಿಯಲ್ಲೂ ರಜನಿಕಾಂತ್ ಸೂಪರ್ ಸ್ಟಾರ್!: ತೆರಿಗೆ ಇಲಾಖೆಯಿಂದ ಸನ್ಮಾನ

ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಜನಪ್ರಿಯ ನಟ. ತೆರೆ ಮೇಲೆ ವಿಭಿನ್ನ ಮ್ಯಾನರಿಸಂ ಮತ್ತು ಪಂಚ್ ಡೈಲಾಗ್, ಸ್ಟೈಲ್‌ನಿಂದ ಅಭಿಮಾನಿಗಳನ್ನು ರಂಜಿಸುವ ತಲೈವಾ ನಿಜ ಜೀವನದಲ್ಲಿ ಸರಳತೆಗೆ ಹೆಸರಾದವರು. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ ಅದು ಅವರ ಚಿತ್ರದಿಂದಲ್ಲ, ಬದಲಾಗಿ ಸಾಮಾಜಿಕ ಜವಾಬ್ದಾರಿಯಿಂದ.

ಹೌದು, ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ ಅದೂ ಸಕಾಲದಲ್ಲಿ. ಈ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ ನಟ ರಜನಿಕಾಂತ್.

ಜುಲೈ 24ರಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಅತಿಹೆಚ್ಚು ಮತ್ತು ಸಕಾಲದಲ್ಲಿ ತೆರಿಗೆ ಪಾವತಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಯಿತು. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಪ್ರಶಸ್ತಿ ಪ್ರದಾನ ಮಾಡಿದರು. ರಜನಿಕಾಂತ್ ಪರವಾಗಿ ಅವರ ಪುತ್ರಿ ಮತ್ತು ಚಲನಚಿತ್ರ ನಿರ್ಮಾಪಕಿ ಐಶ್ವರ್ಯ ಪ್ರಶಸ್ತಿ ಸ್ವೀಕರಿಸಿದರು.

ಜುಲೈ 24 ರಂದು ಚೆನ್ನೈನಲ್ಲಿ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರು ತ್ವರಿತ ತೆರಿಗೆ ಪಾವತಿದಾರರಿಗೆ ಬಹುಮಾನ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮಿಳುನಾಡಿನಲ್ಲಿ ಹೆಚ್ಚು ಮತ್ತು ತ್ವರಿತವಾಗಿ ತೆರಿಗೆ ಪಾವತಿಸಿದಕ್ಕಾಗಿ ಗೌರವಿಸಲಾಯಿತು.

 ಆದಾಯ ತೆರಿಗೆ ಇಲಾಖೆಗೆ ಐಶ್ವರ್ಯಾ ಧನ್ಯವಾದ

ಆದಾಯ ತೆರಿಗೆ ಇಲಾಖೆಗೆ ಐಶ್ವರ್ಯಾ ಧನ್ಯವಾದ

ಆದಾಯ ತೆರಿಗೆ ಇಲಾಖೆ ನೀಡಿದ ಪ್ರಶಸ್ತಿಯನ್ನು ಅಪ್ಪನ ಪರವಾಗಿ ಸ್ವೀಕರಿಸಿದ ಐಶ್ವರ್ಯ ಸಂತಸ ಹಂಚಿಕೊಂಡಿದ್ದಾರೆ. ತನ್ನನ್ನು ಅಪ್ಪನ ಹೆಮ್ಮೆಯ ಮಗಳು ಎಂದು ಕರೆದುಕೊಂಡಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಕುರಿತು ಟ್ವೀಟ್ ಮಾಡಿರುವ ಐಶ್ವರ್ಯಾ, "ಹೆಚ್ಚಿನ ಮತ್ತು ತ್ವರಿತ ತೆರಿಗಾದರ ಹೆಮ್ಮೆಯ ಮಗಳು. ಆದಾಯ ತೆರಿಗೆ ದಿನಾಚರಣೆಯಂದು ಅಪ್ಪನನ್ನು ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಗೆ ತುಂಬಾ ಧನ್ಯವಾದಗಳು" ಎಂದು ಹೇಳಿದ್ದಾರೆ.

 ನೆಚ್ಚಿನ ನಟನ ಹೊಗಳಿದ ಅಭಿಮಾನಿಗಳು

ನೆಚ್ಚಿನ ನಟನ ಹೊಗಳಿದ ಅಭಿಮಾನಿಗಳು

ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಪ್ರಶಸ್ತಿ ಸ್ವೀಕರಿಸಿ, ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಅಭಿಮಾನಿಗಳು ಪೋಸ್ಟ್ ಲೈಕ್ ಮಾಡುವುದರ ಜೊತೆಗೆ ನೆಚ್ಚಿನ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಅಭಿಮಾನಿಯಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಓರ್ವ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, "ಧನ್ಯವಾದಗಳು ಸೂಪರ್ ಸ್ಟಾರ್ ರಜನಿಕಾಂತ್, ನೀವು ಜವಾಬ್ದಾರಿಯುತ ನಾಗರಿಕ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಸೂಪರ್ ಸ್ಟಾರ್ ಈಗ ಜೈಲರ್

ಸೂಪರ್ ಸ್ಟಾರ್ ಈಗ ಜೈಲರ್

ರಜನಿಕಾಂತ್ ಸಿರುತೈ ಶಿವ ನಿರ್ದೇಶನದ ಅಣ್ಣಾತ್ತೆ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಈಗ ನೆಲ್ಸನ್‌ ದಿಲೀಪ್‌ ಕುಮಾರ್ ನಿರ್ದೇಶನದ ಜೈಲರ್ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ವರದಿಗಳ ಪ್ರಕಾರ ಆಗಸ್ಟ್ ಅಥವಾ ಸೆಪ್ಟಂಬರ್‍‌ನಲ್ಲಿ ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್ ಎಂದು ಹೇಳಲಾಗುತ್ತದೆ.
ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಭಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ. ಚಿತ್ರದ ನಾಯಕಿ ಪಾತ್ರಕ್ಕೆ ಐರ್ಶರ್ಯ ರೈ ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

 ಅತ್ಯಧಿಕ ತೆರಿಗೆ ಪಾವತಿದಾರ ಅಕ್ಷಯ್‌ ಕುಮಾರ್

ಅತ್ಯಧಿಕ ತೆರಿಗೆ ಪಾವತಿದಾರ ಅಕ್ಷಯ್‌ ಕುಮಾರ್

ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರನ್ನು ಆದಾಯ ತೆರಿಗೆ ಇಲಾಖೆಯು ದೇಶದ 'ಅತಿ ಹೆಚ್ಚು ತೆರಿಗೆದಾರ' ಎಂದು ಗೌರವಿಸಿದೆ ಎಂದು ವರದಿಯಾಗಿದೆ.
ಆದಾಯ ತೆರಿಗೆ ಇಲಾಖೆಯಿಂದ ಅಕ್ಷಯ್ ಕುಮಾರ್ ಅವರಿಗೆ ಗೌರವ ಪ್ರಮಾಣಪತ್ರ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಕಳೆದ ಐದು ವರ್ಷಗಳಿಂದ ಅಕ್ಷಯ್ ಕುಮಾರ್ ಈ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+